Featured
ಯಾವ ಜ್ಯೂಸ್ ಕುಡಿಯುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೇಚ್ಚಿಸಬಹುದು..!
![](https://risingkannada.com/wp-content/uploads/2021/01/nellikai3-1.jpg)
ರೈಸಿಂಗ್ ಕನ್ನಡ :- ಕಫ, ಗಂಟಲು ನೋವು ಹೊಂದಿರುವವರು ಈ ಜ್ಯೂಸ್ ಕುಡಿಯಬಾರದು. ನೆಲ್ಲಿಕಾಯಿ ಮತ್ತು ಪುದೀನಾ ನಮ್ಮ ದೇಹಕ್ಕೆ ತಂಪಾಗಿರುತ್ತದೆ. ಇದು ಗಂಟಲು ಸಮಸ್ಯೆ ಇರುವವರು ಕುಡಿದರೆ ಇನ್ನು ಗಂಟಲಿನ ಸಮಸ್ಯೆ ಹೆಚ್ಚಾಗುತ್ತದೆ. ಒಂದೆಡೆ ಹವಾಮಾನದ ಬದಲಾವಣೆ, ಮತ್ತೊಂದೆಡೆ ಅನಾರೋಗ್ಯ, ಏನು ತಿನ್ನಬೇಕು ? ಏನು ತಿನ್ನಬಾರದು? ಎಂಬುದು ಜನಸಾಮಾನ್ಯರ ಚಿಂತೆಯಾಗಿದೆ.
ಪ್ರಸ್ತುತ ವೈಪರಿತ್ಯದಿಂದ ಜ್ವರ,ಕೆಮ್ಮು,ನೆಗಡಿ, ಶೀತ ಸಾಮನ್ಯವಾಗಿದೆ. ಇಂತಹ ರೋಗಗಳ ವಿರುದ್ಧ ಪಾರಾಗಲು ನಮಗೆ ರೋಗ ನಿರೋಧಕ ಶಕ್ತಿ ಅಗತ್ಯ.
ವಿಟಮಿನ್ ಸಿ ಹೊಂದಿರುವ ಆಹಾರ , ತರಾಕಾರಿ ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಈ ರಸ ಕೆಮ್ಮು, ಶೀತ, ನೆಗಡಿ ಮತ್ತು ಜ್ವರದಿಂದ ಬಳಳುತ್ತಿರುವವರಿಗೆ ತುಂಬಾ ಪ್ರಯೋಜನಕಾರಿಯಾಗುತ್ತದೆ. ಇದನ್ನು ತಯಾರಿಸಲು ಬೇಕಾಗಿರುವುದು ಪುದೀನಾ ಎಲೆಗಳು, ಶುಂಠಿ, ನೆಲ್ಲಿಕಾಯಿ ಮತ್ತು ಕೊತ್ತಂಬರಿ ಸೊಪ್ಪು.
ಕೊತ್ತಂಬರಿ ಮತ್ತು ಪುದೀನಾ ಎಲೆಗಳಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಪುದೀನದಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯುತ ನಿರ್ವಹಣ ಗುಣಗಳನ್ನು ಹೊಂದಿರುತ್ತದೆ. ಇದು ಶೀತ, ಕೆಮ್ಮಿನಿಂದ ಉಂಟಾಗುವ ಕಿರಿಕಿರಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
![](https://risingkannada.com/wp-content/uploads/2021/01/pudhina1.jpg)
ಕೊತ್ತಂಬರಿಯಲ್ಲೂ ಉತ್ಕರ್ಷಣ ನಿರೋಧಕ ಗುಣಗಳು ಕಂಡುಬರುತ್ತವೆ. ನಿರ್ವಿಶೀಕರಣ ಆ್ಯಂಟಿ ಬ್ಯಾಕ್ಟಿರಿಯಲ್ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳು ಕೊತ್ತಂಬರಿ ಸೊಪ್ಪಿನಲ್ಲಿ ಇರುತ್ತವೆ.
ನೆಲ್ಲಿಕಾಯಿಯನ್ನು ಆಹಾರದಲ್ಲಿ ನಿಯಮಿತವಾಗಿ ಬಳಕೆ ಮಾಡುವುದರಿಂದ ದೇಹದಲ್ಲಿನ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಇದು ನಮ್ಮ ದೇಹದ ಸೋಂಕು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಜ್ಯೂಸ್ ತಯಾರಿಸುವ ವಿಧಾನ ಹೇಗೆ…?
ನೆಲ್ಲಿಕಾಯಿ, ಪುದೀನಾ ಎಲೆಗಳು, ಶುಂಠಿ ಮತ್ತು ಕೊತ್ತಂಬರಿ ಎಲೆಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. ಆನಂತರ ಜ್ಯೂಸರ್ ನಲ್ಲಿ ಇವುಗಳನ್ನು ಒಟ್ಟಿಗೆ ಸೇರಿಸಿ ರಸವನ್ನು ತೆಗಿಯಬೇಕು.
ಈ ರಸಕ್ಕೆ ಉಪ್ಪು, ಜೇನುತುಪ್ಪ ಅಥವಾ ಉರಿದ ಜೀರಿಗೆ ಸೇರಿಸಿ ಕುಡಿಯಬಹುದು. ಈ ರಸವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮಗೆ ರೋಗ ನಿರೋಧಕ ಶಕ್ತಿ ಹೇಚ್ಚಾಗುತ್ತದೆ, ಮತ್ತು ಆನಾರೋಗದ ಸಮಸ್ಯೆ ಕೂಡ ದೂರವಾಗುತ್ತದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?