Featured
ಯಾರಿಗೆ ಹೇಳೋದು..? ನನ್ನ ಕಾರಿಗೂ ಓವರ್‌ಸ್ಪೀಡ್ ಅಂತ ದಂಡ ಹಾಕಿದ್ರು..! ಗಡ್ಕರಿ
![](https://risingkannada.com/wp-content/uploads/2019/09/NITIN-GADKARI.jpg)
ಮುಂಬೈ: ಹೊಸ ಮೋಟಾರ್ ವಾಹನ ಕಾಯ್ದೆಯ ದಂಡಕ್ಕೆ ಇಡೀ ದೇಶವೇ ಬೆಸ್ತು ಬಿದ್ದಿದ್ದು ಜನರೆಲ್ಲಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಏನು ಮಾಡೋದು ನನ್ನ ಹೆಸರಿನಲ್ಲಿರುವ ಕಾರ್ ಓವರ್‌ಸ್ಪೀಡ್ ಅಂತ ದಂಡ ಹಾಕಿದ್ದಾರೆ ಎಂದು ಹೇಳಿದರು.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ಕಾಯ್ದೆ ಚೆನ್ನಾಗಿದೆ, ರಸ್ತೆ ಸಂಚಾರ ಸುರಕ್ಷತೆಗೆ ಕಟ್ಟುನಿಟ್ಟಿನ ಕಾನೂನು ಅವಶ್ಯಕವಾಗಿತ್ತು, ದೇಶದಲ್ಲಿ ಶೇ.೩೦ರಷ್ಟು ಜನರ ಲೈಸೆನ್ಸ್ ಬೋಗಸ್, ಒಟ್ಟು ೭೮೬ ಬ್ಲಾಕ್‌ಸ್ಪಾಟ್‌ಗಳನ್ನ ( ಅಪಘಾತವಲಯ) ದೇಶಾದ್ಯಂತ ಗುರುತಿಸಲಾಗಿದೆ, ಹೆಚ್ಚು ದಂಡದ ಜೊತೆ ಪರಿಹಾರದ ಮೊತ್ತವನ್ನೂ ಹೆಚ್ಚು ಮಾಡಲಾಗಿದೆ ಎಂದರು.
ಯಾವುದೇ ಅಧಿಕಾರಿ, ಮಂತ್ರಿ ಅಂತೆಲ್ಲಾ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಸಿಸಿಟಿವಿಯಲ್ಲಿ ದಾಖಲಾದರೆ ಮುಗೀತು ತಂಡ ತೆರಲೇ ಬೇಕು, ದಂಡ ವಸೂಲಿಯಲ್ಲಿ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ, ಕ್ಯಾಮೆರಾ ಕಣ್ಗಾವಲಿರುತ್ತೆ. ಜನರು ಡಿಜಿ ಲಾಕರ್ ಹಾಗೂ ಎಂ ಪರಿವಾಹನ್ ಬಳಸಿ ದಾಖಲೆ ತೋರಿಸಬಹುದು ಎಂದರು.
You may like
ನೋಯ್ಡಾ ಪೊಲೀಸರು ಒಂದು ನಿಮಿಷದ ಅಂತರದಲ್ಲಿ ಎರಡು ಬಾರಿ ದಂಡದ ಚಲನ್ ಕಳಿಸಿದ್ರು ಓದಿ
ಝೀಬ್ರಾ ಕ್ರಾಸಿಂಗ್ ಮೀರಿ ನಿಂತಿದ್ದ ಪಿಸಿಆರ್ ವಾಹನ : ಫೋಟೋ ತೆಗೆದು ಟ್ವೀಟ್ ಮಾಡಿ ದಂಡ ಹಾಕಿಸಿದರು.
ರಾಜ್ಯದಲ್ಲಿ ದುಬಾರಿ ದಂಡಕ್ಕೆ ಬ್ರೇಕ್ : ಜನಾಕ್ರೋಶಕ್ಕೆ ಮಣಿದ ಯಡಿಯೂರಪ್ಪ ಸರ್ಕಾರ
ಸಂಚಾರಿ ನಿಯಮ ಸರಳೀಕರಿಸಿ ಕೇಂದ್ರಕ್ಕೆ ಮುಜುಗರ ತಂದ ಗುಜರಾತ್: ತಿರುಚಿದ್ರೆ ರಾಜ್ಯಗಳೇ ಹೊಣೆ ಅಂದ್ರು ಗಡ್ಕರಿ
ದಂಡಕ್ಕೆ ಹೆದರಿ ಕಾರಿನಲ್ಲೂ ಹೆಲ್ಮೆಟ್ ಹಾಕಿಕೊಂಡ ಮಹಾನುಭಾವ..! ಅಚ್ಚರಿಯಾದ್ರೂ ಸತ್ಯ..!
ಸವಾರರಿಗೆ ದುಬಾರಿ ದಂಡ : ಸಚಿವ ಶ್ರೀರಾಮುಲು ವಿರೋಧ..!