Connect with us

Featured

ಯಾರದ್ದೂ ಹಣ ಮುಟ್ಟಿಲ್ಲ ಅನ್ನೋ ಡಿಕೆಶಿ, ಎಷ್ಟೋ ಜನರಿಗೆ ತಂದೆಯ ಎಡೆ ಇಡದಂತೆ ಮಾಡಿದವರು: ರವಿ ಬೆಳಗೆರೆ

ರೈಸಿಂಗ್‌ ಕನ್ನಡ
ಬೆಳ್‌ಬೆಳಗ್ಗೆ ಬೆಳಗೆರೆ : ಖ್ಯಾತ ಪತ್ರಕರ್ತ ರವಿ ಬೆಳಗೆರೆ ತಮ್ಮ ಬೆಳ್‌ಬೆಳಗ್ಗೆ ಬೆಳಗೆರೆ ವಿಡಿಯೋ ಬ್ಲಾಗ್‌ ಸರಣಿಯಲ್ಲಿ ಡಿಕೆ ಶಿವಕುಮಾರ್‌ ಬಂಧನ ಹಾಗೂ ಅಭಿಮಾನದ ಪರಾಕಾಷ್ಠೆ ಕುರಿತಂತೆ ಮಾತನಾಡಿದ್ದಾರೆ

ಡಿಕೆ ಶಿವಕುಮಾರ್‌ ಕುರಿತಂತೆ ತಮ್ಮ ಯೂಟ್ಯೂಬ್‌ ವ್ಲೋಗ್‌ನಲ್ಲಿ ಹೇಳಿರುವ ಅಂಶಗಳು ಹೀಗಿವೆ; ಡಿಕೆಶಿ ಬಂಧನ ರಾಜಕೀಯ ವೈಷಮ್ಯನಾ..? ಸಾರಿ ಕಣ್ರೀ.., ಏನ್ರೀ ಈ ಡಿಕೆಶಿ ಬಂಧನ ಮಾಡೋದು..! ಕೆಲವು ವರ್ಷಗಳ ಹಿಂದೆ ಹರಪನಹಳ್ಳಿ ಬಳಿ ನನ್ನ ಮೇಲೆ ಡಕಾಯಿತರು ದಾಳಿ ಮಾಡಿದ್ದರು, ನಾನು ನನ್ನ ಲೈಸೆನ್ಸ್‌ ರಿವಾಲ್ವಾರ್‌ನಿಂದ ಡಕಾಯಿತನೊಬ್ಬನ ಕಾಲಿಗೆ ಶೂಟ್‌ ಮಾಡಿದ್ದೆ, ಕೊನೆಗೆ ಅಲ್ಲಿನ ಎಸ್‌ಪಿ ಸುನೀಲ್‌ ಅಗರವಾಲ್‌ ಬಳಿ ನನ್ನ ರಿವಾಲ್ವಾರ್‌ ಸೆರೆಂಡರ್‌ ಮಾಡಿ ಕಂಪ್ಲೆಂಟ್‌ ಬರೀತಿದ್ದೆ ಆಗ ಒಂದು ಕಾಲ್‌ ಬರುತ್ತೆ…!

ಅದು ಮಿನಿಸ್ಟರ್‌ ಒಬ್ಬರ ಕಾಲ್‌, ಆ ಕಾಲ್‌ನಲ್ಲಿ ಅರಚುತ್ತಾ ಏಯ್‌ ರವಿ ಬೆಳಗೆರೆ ಮೇಲೆ ಕೇಸ್‌ ಹಾಕ್ರಿ ಎನ್ನುತ್ತಿದ್ದವರು ಇದೇ ಡಿಕೆ ಶಿವಕುಮಾರ್‌, ನಿಷ್ಠಾವಂತ ಪೊಲೀಸ್‌ ಅಧಿಕಾರಿ ನಯದಿಂದಲೇ ಉತ್ತರಿಸಿ, ನೋಡಿ ಅವರೇ ಡಕಾಯಿತರ ಮೇಲೆ ಕಂಪ್ಲೆಂಟ್‌ ನೀಡ್ತಾ ಇದ್ದಾರೆ ಎಂದು ಹೇಳಿದರು. ಕೊನೆಗೆ ನನ್ನ ಮೇಲೆ ಪ್ರಕರಣ ಆಯ್ತು, ಆದರೆ ಕೋರ್ಟ್‌ನಲ್ಲಿ ಆ ಡಕಾಯಿತರಿಗೆ ಎಂಟು ವರ್ಷ ಶಿಕ್ಷೆ ಆಯ್ತು, ಈ ಡಿಕೆ ಶಿವಕುಮಾರ್‌ ನನ್ನನ್ನ ಏನೂ ಮಾಡಲಾಗಲಿಲ್ಲ. ಈಗ ನನ್ನ ತಂದೆಗೆ ಎಡೆ ಇಡೋದಕ್ಕೆ ಆಗಿಲ್ಲ ಅಂತ ಅಳ್ತಾರೆ. ಬಹಳ ಜನರಿಗೆ ತಂದೆ ತಾಯಿಗೆ ಎಡೆ ಇಡೋದಕ್ಕೆ ಆಗದಂತೆ ಮಾಡಿದ್ದವರೂ ಇದೇ ಡಿಕೆ ಶಿವಕುಮಾರ್‌.

ಅಯ್ಯೋ ಸ್ಯಾಂಕಿ ಟ್ಯಾಕ್‌ ಮೇಲೆ ನನ್ನ ಮಗನ ಜೊತೆ ಓಡಾಡ್ತಿದ್ದೆ ಅಂತ ಗೋಗರೆಯೋದನ್ನ ಕೇಳೋದಕ್ಕೆ ಅಲ್ಯಾರೂ ಇಲ್ಲ, ನಿಮ್ಮಂಥಹ ಚಿದಂಬರಂ ತರಹದ ವ್ಯಕ್ತಿಗಳು ಈ ದೇಶವನ್ನ ಕೊಳ್ಳೆ ಹೊಡೆದಿದ್ದೀರಿ, ನಿಮ್ಮ ಹಿಂದೆ ಅನೇಖರಿದ್ದಾರೆ, ಪಟ್ಟಿ ಬೇಕಾ, ನಿಮಗೆ ತಕ್ಕ ಶಾಸ್ತಿ ಆಗಿದೆ. ಇವರ ಅಭಿಮಾನಿಗಳು ಅಬ್ಬಾ..! ಪ್ರತಿಕೃತಿ ದಹನ ಅಂತೆ, ಅವರ ನಾಯಕರಿಗೆ ಇವರ ಜೀವನ ತ್ಯಾಗ ಅಂತೆ, ರೀ ನಿಮ್ಮ ಡಿಕೆಶಿ ಮಹಾತ್ಮಾ ಗಾಂಧಿನಾ..? ಏನೂ ಮಾಡದೇ ನಿಮ್ಮ ನಾಯಕರನ್ನ ಯಾಕೆ ವಿಚಾರಣೆ ಮಾಡ್ತಿದ್ದಾರೆ, ಆ ಚಿದಂಬರಂ ಎಂಬ ಪಂಚೆಧಾರಿ, ಅಯ್ಯೋ ಪಾಪ ಪಂಚೆಗೆ ಜೇಬೇ ಇಲ್ಲ, ಎಲ್ಲಿ ದುಡ್ಡು ಇಟ್ಟುಕೊಳ್ತಾನೆ ಎಂದು ಅಣಕವಾಡಿದ್ದಾರೆ.

ಚಿದಂಬರಂ ಮಗ ಕಾರ್ತಿ ಚಿದಂಬರಂ ಏನು ಕಡಿಮೆ ಭ್ರಷ್ಟನಾ..? ಪಾಪ ಕಾಫಿ ಡೇ ಸಿದ್ಧಾರ್ಥ ಒಳ್ಳೆಯವನೇ ಆಗಿರಬಹುದು ಆದರೆ ತೆರಿಗೆ ಕಟ್ಟದೇ ಇದ್ದರೆ ಆಗತ್ತೇನ್ರಿ..? ಈ ಜನಾರ್ದನ ರೆಡ್ಡಿ ಮಾತು ಕೇಳಬೇಕು ನೀವು, ʻಅಣ್ಣಾ ಒಂದು ಆರ್ಥಿಕ ಅಪರಾಧದಲ್ಲಿ ಸಿಲುಕಿ ಬಿಟ್ಟಿದ್ದೀನಿ ಏಳೇ ವರ್ಷ, ಈಗಾಗಲೇ ಮೂರೂವರೆ ವರ್ಷ ಕಳೆದೆ, ಇನ್ನು ಮೂರುವರೆ ವರ್ಷ ಅಷ್ಟೇ ಅಣ್ಣಾ ಈ ಎಲ್ಲಾ ಸ್ವತ್ತು ನಂದೆ ಅಂದಿದ್ದʼ ಇಂತಹ ನೀಚ ರಾಜಕಾರಣ ನಮ್ಮ ಮುಂದಿರೋದು. ಈ ಡಿಕೆಶಿ ಯಾರ ಜೊತೆ ಹಣ ತೆಗೆದುಕೊಂಡಿಲ್ಲ, ಭ್ರಷ್ಟಾಚಾರಿ ಅಲ್ಲ ಅಂತ ಅಂತಾನೆ ಆದರೆ ನೂರಾರು ಕೋಟಿ ಹೆಂಗೆ ಬರುತ್ತೆ, ನಿಮ್ಮ ಫ್ಲಾಟ್‌ಗಳಲ್ಲಿ ಇಷ್ಟೆಲ್ಲಾ ಹಣ ಹೇಗೆ ಸಿಗ್ತು..? ಕನಕಪುರದ ಬಂಡೆ ಒಡೆದು ಗಳಿಸಿದ್ದೆಷ್ಟು..?

ಜಾರಿ ನಿರ್ದೇಶನಾಲಯನೂ ಕೂಡ ರಾಜಕೀಯ ದಾಳನೇ ಇರಬಹುದು, ಆದರೆ ದಾಖಲೆಗಳಿಲ್ಲದೇ ಯಾರೂ ಮುಂದಾಗೋದಿಲ್ಲ, ಯಾರಿಗೂ ಮೋಸ ಮಾಡಿಲ್ಲ, ಅನ್ಯಾಯ ಮಾಡಿಲ್ಲ ಅಂತೀರಲ್ಲ, ರೀ ನೀವು ಭಾರತ ದೇಶಕ್ಕೆ ಅನ್ಯಾಯ ಮಾಡಿದ್ದೀರಿ, ಗ್ರಾನೈಟ್‌ ಬೆಟ್ಟ ನಿಮ್ಮ ವಂಶದ್ದು ಕಲ್ಲುಸಕ್ಕರೆ ಮುರಿದಂಗೆ ತಂದು ಮಾರಿದ್ರಿ..! ಡಿಕೆಶಿ ಬಂಧನ ಬಿಜೆಪಿ ಸ್ನೇಹಿತರಿಗೆ ಸಂತೋಷ ಅಷ್ಟೇ ಅಲ್ಲಯ್ಯ ನನ್ನಂಥ ನೂರಾರು ಜನರಿಗೆ ಖುಷಿ ಆಗಿದೆ.

ನೀನು, ದೇವೇಗೌಡ, ಕುಮಾರ ಸ್ವಾಮಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದು ನಾನು ನೋಡಿಲ್ವಾ, ಓಹೋ ಹೋ ಈಗೇನು ದೇವೇಗೌಡ ಹಾಗೂ ಮಗನ ಸಾಂತ್ವಾನ..! ನೀನು ನನ್ನ ಶಾಸಕ ಅದರರ್ಥ ನೀನು ನನ್ನ ಸೇವಕ ಅದನ್ನ ಬಿಟ್ಟು ದೇಶ ನುಂಗಿ ನೀರು ಕುಡಿದುಬಿಡ್ತೀರಲ್ಲ..? ಎಂದು ಜಾಡಿಸಿದ್ದಾರೆ. ನನ್ನ ಪ್ರಕಾರ ಡಿಕೆ ಶಿವಕುಮಾರ್‌ ಸರಿಯಾಗಿ ಉತ್ತರ ನೀಡಿಲ್ಲ, ಪಿಕ್‌ ಪಾಕೆಟ್‌ ಮಾಡಿದ ಆರೋಪಿಗೆ ಈ ಪೊಲೀಸರು ಬೆಂಡೆತ್ತುತ್ತಾರೆ ಆದರೆ ಡಿಕೆ ಶಿವಕುಮಾರ್‌ನಂತವರನ್ನ ಟೀ ಕುಡಿಸಿ ಕಳಿಸುತ್ತಾರೆ, ಯಾರೇ ಆದರೂ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗದು.

ವಿಶೇಷ ಸೂಚನೆ : ರವಿ ಬೆಳಗೆರೆ ಅಭಿಪ್ರಾಯವೇ ಹೊರತು ರೈಸಿಂಗ್‌ ಕನ್ನಡದ್ದಲ್ಲ

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ