Featured
ಯಡಿಯೂರಪ್ಪ ಹೊಗಳಿದ ಡಿಕೆಶಿ ಆಪ್ತ ಶಾಸಕ ರಂಗನಾಥ್ : ಸಾಕು ನಿಲ್ಲಿಸ್ರಿ ಎಂದ ಬಿಎಸ್ವೈ..!
ತುಮಕೂರು : ಮಾಜಿ ಸಚಿವ, ಸದ್ಯ ಜೈಲಿನಲ್ಲಿರೋ ಡಿಕೆ ಶಿವಕುಮಾರ್ಗೆ ಅವರ ಆಪ್ತರೇ ಶಾಕ್ ನೀಡಿದ್ದಾರೆ. ಯಡಿಯೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಯಡಿಯೂರಪ್ಪ ಅವರನ್ನ ಡಿಕೆಶಿ ಆಪ್ತ, ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಹಾಡಿ ಹೊಗಳಿದ್ದಾರೆ. ಯಡಿಯೂರಪ್ಪ ಅವರ ಹೋರಾಟ ನಾನು ಚಿಕ್ಕವನಿಂದ ನೋಡಿಕೊಂಡು ಬಂದಿದ್ದೇನೆ. ಅವರು ನಾಡಿಗೆ ಕೊಟ್ಟ ಕೊಡುಗೆ ಅಪಾರ. ಯಡಿಯೂರಪ್ಪ ನೇರ, ನಿಷ್ಠುರವಾದಿ, ಆದರೆ ಸ್ವಲ್ಪ ಮುಂಗೋಪಿ ಎಂದಿದ್ದಾರೆ..
ಯಡಿಯೂರಪ್ಪ ಅವರ ರೈತ ಪರ ಹೋರಾಟ ನೋಡಿದ್ದೇನೆ. ಕುಣಿಗಲ್ ತಾಲೂಕಿನ ಮೇಲೆ ಅವರ ಆಶೀರ್ವಾದ ಇರಲಿ ಎಂದ್ರು. ರಾಜಕೀಯ ಅನ್ನೋದು ಚುನಾವಣೆಗೆ ಮಾತ್ರ ಇರಲಿ. ಅಭಿವೃದ್ಧಿಯಲ್ಲಿ ರಾಜಕೀಯ ಬೇಡ ಎಂದು ಪರೋಕ್ಷವಾಗಿ ಸಂಸದ ಜಿ.ಬಸವರಾಜು ಗೆ ಟಾಂಗ್ ಕೊಟ್ರು.
ಇದೇ ವೇಳೆ, ಹೆಚ್ಚು ಹೊತ್ತು ಮಾತನಾಡ್ತಿದ್ದ ರಂಗನಾಥ್ ವಿರುದ್ಧ ಸಿಎಂ ಯಡಿಯೂರಪ್ಪ ಗರಂ ಆದ್ರೂ. ಸಾಕು ನಿಲ್ಲಿಸ್ರಿ ನಿಮ್ಮ ಭಾಷಣ ಎಂದು ಸಿಎಂ ಯಡಿಯೂರಪ್ಪ ಗದರಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?