Featured
ಯಡಿಯೂರಪ್ಪ ಹೇಳಿದ ಐವರಿಗೆ ಮಾತ್ರ ಮಂತ್ರಿಗಿರಿ : ಉಳಿದ ಎಲ್ಲವೂ ಅಮಿತ್ ಶಾ ಕೈಯಲ್ಲಿ..!

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಅಧಿಕಾರ ಇದ್ರೂ, ಚಲಾಯಿಸೋಕೆ ಆಗ್ತಿಲ್ಲ. ಇದೊಂಥರಾ ಎಲ್ಲವೂ ಇದ್ದೂ, ಏನೂ ಇಲ್ಲ ಎನ್ನುವಂತಾಗಿದೆ. ಹೌದು, ಯಾಕೆ ಈ ಮಾತು ಅಂದ್ರೆ, ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿ. ಬಿಜೆಪಿ ರಾಜ್ಯಾಧ್ಯಕ್ಷರೂ ಹೌದು. ಆದ್ರೆ, ಮುಂಬರುವ ಸಂಪುಟ ವಿಸ್ತರಣೆಯಲ್ಲಿ ಯಡಿಯೂರಪ್ಪಗೆ ಸ್ವತಂತ್ರವೇ ಇಲ್ಲದಂತೆ ಮಾಡಲಾಗಿದೆ.
ಯೆಸ್, ನಾವ್ ಹೇಳ್ತಿರೋದು ಸತ್ಯ. ಇದೇ ಆಗಸ್ಟ್ 8ಕ್ಕೆ ಸಂಪುಟ ವಿಸ್ತರಣೆ ನಡೆಯೋದು ಪಕ್ಕಾ ಆಗಿದೆ. ಆದ್ರೆ, ಯಾರೆಲ್ಲಾ ಮಂತ್ರಿ ಆಗ್ತಾರೆ ಅನ್ನೋದು ಮಾತ್ರ ಹೈಕಮಾಂಡ್ ನಿರ್ಧಾರ ಮಾಡಲಿದೆಯಂತೆ. ಒಟ್ಟು ಸಿಎಂ ಸೇರಿದಂತೆ 34 ಮಂದಿ ಮಂತ್ರಿಗಳು ಆಗಬಹುದು. ಯಡಿಯೂರಪ್ಪ ಬಿಟ್ಟು, ಉಳಿದಿರೋದು 33 ಮಂತ್ರಿ ಸ್ಥಾನ. ಇದರಲ್ಲಿ ಯಡಿಯೂರಪ್ಪಗೆ ಸೆಲೆಕ್ಷನ್ ಚಾನ್ಸೇ ಇಲ್ವಂತೆ..!
ಐದು ಜನ ಮಾತ್ರ ಯಡಿಯೂರಪ್ಪ ಕೈಯಲ್ಲಿ..!
33 ಮಂತ್ರಿಗಳ ಆಯ್ಕೆಯಲ್ಲಿ ಕೇವಲ ಐವರು ಮಂತ್ರಿಗಳನ್ನ ಯಡಿಯೂರಪ್ಪ ಹೇಳಿದಂತೆ ಹೈಕಮಾಂಡ್ ಒಪ್ಪುತ್ತೆ. ಅಂದ್ರೆ, ಕೇವಲ ಐವರನ್ನು ಆಯ್ಕೆ ಮಾಡುವ ಸ್ವತಂತ್ರ ಯಡಿಯೂರಪ್ಪಗೆ ಇದೆ. ಉಳಿದ ಎಲ್ಲಾ ಮಂತ್ರಿಗಳನ್ನ ಹೈಕಮಾಂಡ್ ಆಯ್ಕೆ ಮಾಡಲಿದೆ. ಎಲ್ಲವೂ ಹೈಕಮಾಂಡ್ ಹೇಳಿದಂತೆ ಸಿಎಂ ಯಡಿಯೂರಪ್ಪ ಕೇಳಬೇಕಾದ ಸ್ಥಿತಿ ಇದೆಯಂತೆ.
ಹೀಗಾಗಿಯೇ ಯಡಿಯೂರಪ್ಪ ಯಾವುದೇ ನಿರ್ಧಾರವನ್ನ ಏಕಾಂಗಿಯಾಗಿ ಕೈಗೊಳ್ಳುತ್ತಿಲ್ಲ. ಸಣ್ಣ-ಪುಟ್ಟ ವಿಚಾರಗಳಿಗೂ ಈಗ ದೆಹಲಿಯತ್ತ ಮುಖ ಮಾಡುವ ಅನಿವಾರ್ಯ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿಗರದ್ದಾಗಿದೆ. ಒಟ್ನಲ್ಲಿ, ಯಡಿಯೂರಪ್ಪ ಕೂಡ ಇನ್ಮೇಲೆ ಹೈಕಮಾಂಡ್ ಹೇಳಿದಂತೆ ಕೇಳಲೇಬೇಕಾದ ಅನಿವಾರ್ಯ ಬಂದಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















