Featured
ಯಡಿಯೂರಪ್ಪ ಸಂಪುಟದಲ್ಲಿ ಲಿಂಗಾಯತರೇ ಸಿಂಹಪಾಲು : ಉಳಿದವರಿಗೆ ಮೋಸ ಮಾಡಿದ್ರಾ BSY..?
ಬೆಂಗಳೂರು : ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಬಹುಪಾಲು ಸಿಕ್ಕಿದೆ. 17 ಸಚಿವರ ಪೈಕಿ ಸಿಎಂ ಬಿಎಸ್ವೈ ಸೇರಿ 8 ಮಂದಿ ಲಿಂಗಾಯತ ಸಮುದಾಯದವರೇ ಇದ್ದಾರೆ. ಅಂದ್ರೆ, ಸರಿ ಸುಮಾರು ಶೇಕಡಾ 44 ರಷ್ಟು ಮಂದಿ ಲಿಂಗಾಯತರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಯಾರೆಲ್ಲಾ ಲಿಂಗಾಯತ ಸಚಿವರಿದ್ದಾರೆ, ಯಾಕೆ ಅವರನ್ನ ಆಯ್ಕೆ ಮಾಡಲಾಗಿದೆ ಅನ್ನೋದನ್ನ ನೋಡೋಣ.
ಜಗದೀಶ್ ಶೆಟ್ಟರ್. ಮಾಜಿ ಮುಖ್ಯಮಂತ್ರಿಯಾಗಿದ್ದ ಶೆಟ್ಟರ್ ಈಗ ಸಚಿವರಾಗಿದ್ದಾರೆ. 6 ಬಾರಿ ಶಾಸಕರಾಗಿ ಆಯ್ಕೆಯಾದ ಶೆಟ್ಟರ್ ಹಿರಿಯರು. ಉತ್ತರ ಕರ್ನಾಟಕದಲ್ಲಿ ಲಿಂಗಾಯತರ ಪ್ರಭಾವಿ ನಾಯಕ. ಹೀಗಾಗಿ, ಶೆಟ್ಟರ್ ಈಗ ಮಂತ್ರಿಯಾಗಿದ್ದಾರೆ.
ಬಸವರಾಜ್ ಬೊಮ್ಮಾಯಿ : ಹಾವೇರಿ ಜಿಲ್ಲೆಯ ಬಿಜೆಪಿ ಪ್ರಭಾವಿ ಜೊತೆಗೆ ಲಿಂಗಾಯಿತ ನಾಯಕ. ಯಡಿಯೂರಪ್ಪಗೆ ಆಪ್ತರೂ ಕೂಡ. ಸಮ್ಮಿಶ್ರ ಸರ್ಕಾರ ಬೀಳಿಸುವಾಗ, ಬಿಎಸ್ವೈ ಜೊತೆ ನಿಂತವರು ಬೊಮ್ಮಾಯಿ. 3 ಬಾರಿ ಶಾಸಕರು ಕೂಡ. ಈ ಎಲ್ಲಾ ಅರ್ಹತೆಗಳಿಂದ ಬೊಮ್ಮಾಯಿಗೆ ಮಂತ್ರಿ ಸ್ಥಾನ ಸಿಕ್ಕಿದೆ.
ಜೆ.ಸಿ. ಮಾಧುಸ್ವಾಮಿ : ಬಹುಶಃ ಮಾಧುಸ್ವಾಮಿ ಅವರ ಮಾತುಗಾರಿಕೆ ಇಲ್ಲದೇ ಇದ್ದಿದ್ದರೆ, ಸಮ್ಮಿಶ್ರ ಸರ್ಕಾರ ಇದ್ದಾಗ ಸದನದಲ್ಲಿ ಯಡಿಯೂರಪ್ಪ ಆತುರ ಪಟ್ಟು ಸೋಲುತ್ತಿದ್ದರೇನೋ. ಅಷ್ಟು ಚೆನ್ನಾಗಿ ಮಾಧುಸ್ವಾಮಿ, ಪರಿಸ್ಥಿತಿಯನ್ನ ನೋಡಿಕೊಂಡು ಮಾತನ್ನ ಆಡಿದ್ರು. ಅದರ ಫಲವಾಗಿ ಮಾಧುಸ್ವಾಮಿ ಇವತ್ತು ಮಂತ್ರಿಯಾಗಿದ್ದಾರೆ. ಅಲ್ಲದೆ, ಬಿಎಸ್ವೈ ಆಪ್ತರು, ಲಿಂಗಾಯತರು ಅನ್ನೋ ಕಾರಣ ಜೊತೆಗೆ ತುಮಕೂರನ್ನ ಪ್ರತಿನಿಧಿಯಾಗಿ ಮಾಧುಸ್ವಾಮಿ ಮಿನಿಸ್ಟರ್ ಆಗಿದ್ದಾರೆ.
ವಿ.ಸೋಮಣ್ಣ : ಐದು ಬಾರಿ ಶಾಸಕರಾಗಿರೋ ವಿ.ಸೋಮಣ್ಣ ಮೇಲೆ ಹೈಕಮಾಂಡ್ ಜೊತೆಗೆ ಹಲವು ಮಠಗಳ ಪ್ರಭಾವವಿದೆ. ಇದೇ ಕಾರಣಕ್ಕೆ ವಿ.ಸೋಮಣ್ಣ ಆಯ್ಕೆ ನಡೆದಿದೆ. ಯಡಿಯೂರಪ್ಪ ಜೊತೆ ಈಗ ಅಷ್ಟಕ್ಕೆ ಅಷ್ಟೇ ಆಗಿದ್ರೂ, ಸಂತೋಷ್ ಜೊತೆ ಚೆನ್ನಾಗಿದ್ದಾರೆ. ಮೈಸೂರು ಭಾಗದಲ್ಲಿ ಲಿಂಗಾಯತ ಲೀಡರ್. ಹೀಗಾಗಿ ಸೋಮಣ್ಣ ಆಯ್ಕೆಯಾಗಿದ್ದಾರೆ.
ಲಕ್ಷ್ಮಣ ಸವದಿ. ಶಾಸಕರು ಅಲ್ಲದೇ ಇದ್ರೂ, ಲಕ್ಷ್ಮಣ ಸವದಿ ಮಿನಿಸ್ಟರ್ ಆಗಿದ್ದೇ ಅಚ್ಚರಿ. ಇದಕ್ಕೆ ಬೆಳಗಾವಿ ಬೇಗುದಿ ಕಾರಣ ಎನ್ನಲಾಗ್ತಿದೆ. ಲಿಂಗಾಯತ ಲೀಡರ್ ಅನ್ನೋ ಜೊತೆಗೆ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ರು. ಉಮೇಶ್ ಕತ್ತಿಗೆ ಸ್ಥಾನ ತಪ್ಪಿಸಿ, ಸವದಿಗೆ ನೀಡಿದ್ದಾರೆ.
ಸಿ.ಸಿ.ಪಾಟೀಲ್. ಇವರು ಕೂಡ ಲಿಂಗಾಯತ ಲೀಡರ್. ಯಡಿಯೂರಪ್ಪ ಆಪ್ತ. ಸವದಿಗೂ ಆಪ್ತರು. ಕೊನೇ ಕ್ಷಣದವರೆಗೆ ಇವರೇ ಹೆಸರೇ ಪಟ್ಟಿಯಲ್ಲಿ ಇರಲಿಲ್ಲ. ಆದ್ರೂ, ಮಿನಿಸ್ಟರ್ ಆಗಿದ್ದು ಎಲ್ಲರಿಗೂ ಶಾಕ್ ಕೊಡ್ತು.
ಶಶಿಕಲಾ ಜೊಲ್ಲೆ : ಹಿರಿಯೂರು ಶಾಸಕಿ, ಪೂರ್ಣಿಮಾಗೆ ಯಾದವ ಸಮುದಾಯದ ಪ್ರತಿನಿಧಿಯಾಗಿ ಮಿನಿಸ್ಟರ್ ಆಗೋ ಚಾನ್ಸ್ ಇತ್ತು. ಆದ್ರೆ, ಜೊಲ್ಲೆ ಮೂರು ಬಾರಿ ಶಾಸಕಿಯಾಗಿರೋದ್ರಿಂದ ಸಚಿವ ಸ್ಥಾನ ಒಲಿದಿದೆ.
ಒಟ್ಟಿನಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಒಟ್ಟು, ಬಿಎಸ್ವೈ ಸೇರಿ 18 ಮಂದಿ ಇದ್ದಾರೆ. ಇದ್ರಲ್ಲಿ 8 ಮಂದಿ ಲಿಂಗಾಯತರೇ ಇರೋದು ಹಲವು ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ನ್ಯಾಯ ಸಿಕ್ಕಿಲ್ಲ ಅನ್ನೋ ಅಸಮಾಧಾನ ಸದ್ಯ ಪಕ್ಷದಲ್ಲಿ ಶುರುವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?