Featured
ಯಡಿಯೂರಪ್ಪ ಕಟ್ಟಿಹಾಕಲು ಮೂವರಿಗೆ ಡಿಸಿಎಂ ಪಟ್ಟ..! ಬಿಎಸ್ವೈ ವರ್ಸಸ್ ಸಂತೋಷ್ ಕಿತ್ತಾಟ ಶುರುವಾಯ್ತಾ..?
ಬೆಂಗಳೂರು/ನವದೆಹಲಿ : ಇದೊಂದು ರೀತಿ ಕೋಲು ಮುರೀಬಾರದು, ಹಾವು ಸಾಯಬಾರದು ಅನ್ನೋ ಲೆಕ್ಕಾಚಾರದಂತೆ ಕಾಣ್ತಿದೆ. ಒಂದು ಕಡೆ ಯಡಿಯೂರಪ್ಪಗೆ ಅಧಿಕಾರ ಕೊಟ್ಟಂತೆ ಇರಬೇಕು. ಮತ್ತೊಂದು ಕಡೆ ಯಡಿಯೂರಪ್ಪ ಅವರನ್ನ ಕಟ್ಟಿಹಾಕಬೇಕು. ಬಿಜೆಪಿಯ ಹೈಕಮಾಂಡ್ ಲೆಕ್ಕಾಚಾರದಿಂದ ರಾಜ್ಯದ ಜನತೆ ಇನ್ನೂ ಏನೇನು ನೋಡಬೇಕೋ ಈ ಕಣ್ಣಲ್ಲಿ..
ಹೌದು, ಈ ರೀತಿ ಹೇಳೋದಕ್ಕೆ ಕಾರಣಗಳು ಸಾಕಷ್ಟಿವೆ. ಬಿಜೆಪಿ ಸರ್ಕಾರ ರಚನೆ ಆಗಿ ಒಂದು ತಿಂಗಳೇ ಕಳೆಯಿತು. 17 ಮಂದಿ ಸಚಿವರಾಗಿ, ಈಗ ಖಾತೆಗಳ ಹಂಚಿಕೆ ಏನೋ ಆಯ್ತು. ಆದ್ರೆ, ಉಪಮುಖ್ಯಮಂತ್ರಿ ಸ್ಥಾನ ಅಗತ್ಯ ಏನಿತ್ತು ಅನ್ನೋ ಚರ್ಚೆ ಶುರುವಾಗಿದೆ. ಬಹುತೇಕರು ಇದು ಸಾಮಾಜಿಕ ನ್ಯಾಯ ಅನ್ನೋ ಮಾತನ್ನ ಆಡ್ತಿದ್ದಾರೆ. ಒಬ್ಬ ನಾಯಕನನ್ನ ಕಟ್ಟಿ ಹಾಕಲು ಬಳಸಿದ ತಂತ್ರ, ಷಡ್ಯಂತ್ರ ಅಂದ್ರೆ ಮಾತ್ರ ಇದಕ್ಕೆ ಸೂಕ್ತವಾದ ಪದ ಆಗುತ್ತೆ.
ಯಡಿಯೂರಪ್ಪ ರಾಜ್ಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕ ಅನ್ನೋದರಲ್ಲಿ ಎರಡು ಮಾತಿಲ್ಲ. ಆದ್ರೆ, ಅದ್ಯಾಕೋ ಏನೋ, ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ಮಾತನ್ನ ಕೇಳಲು ರೆಡಿಯಾಗಿಲ್ಲ. ಈ ಹಿಂದೆ ಅನಂತ್ ಕುಮಾರ್ ವರ್ಸಸ್ ಯಡಿಯೂರಪ್ಪ ಎಂಬಂತೆ ಬಿಜೆಪಿಯಲ್ಲಿ ವಾತಾವರಣ ಇತ್ತು. ಅನಂತ್ ಕುಮಾರ್ ದೆಹಲಿ ರಾಜಕಾರಣದಲ್ಲೇ ಇದ್ದರೂ, ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಪ್ರಭಾವವನ್ನ ಹೊಂದಿದ್ದರು. ಅದೇ ರೀತಿ ಈಗ ಯಡಿಯೂರಪ್ಪ ವರ್ಸಸ್ ಸಂತೋಷ್ ಆಗಿ ಮಾರ್ಪಟ್ಟಿದೆ ಅಷ್ಟೆ..
ಯಡಿಯೂರಪ್ಪ ವರ್ಸಸ್ ಸಂತೋಷ್..!
ನಾವ್ ಹೇಳ್ತಿರೋದು ಅಕ್ಷರಶಃ ನಿಜ.. ಇಲ್ಲಿ ಸ್ವಪ್ರತಿಷ್ಠೆಯಿಂದಾಗಿ ರಾಜ್ಯದ ಹಿತ ಹಾಗೂ ಪಕ್ಷದ ಹಿತ ಎರಡೂ ಹಾಳಾಗೋದ್ರಲ್ಲಿ ಸಂಶಯವೇ ಇಲ್ಲ. ಯಾಕಪ್ಪ ಅಂದ್ರೆ, ಸಂತೋಷ್ ರಾಷ್ಟ್ರೀಯ ಸ್ಥಾನಮಾನ ಹೊಂದಿದ್ದರೂ, ರಾಜ್ಯ ರಾಜಕೀಯಕ್ಕೆ ಬರಲು ಸೂಕ್ತ ಸಮಯದ ಹುಡುಕಾಟದಲ್ಲಿ ಇದ್ದಾರೆ. ಇದಕ್ಕೆ ಆರ್ಎಸ್ಎಸ್ ಕೂಡ ಬೆಂಬಲವಾಗಿ ನಿಂತಿದೆ. ಆದ್ರೆ, ಸಂತೋಷ್ಗೆ ಅಡ್ಡಿಯಾಗಿರೋದು ಯಡಿಯೂರಪ್ಪ ಅಂಡ್ ಟೀಮ್.. ಹೀಗಾಗಿಯೇ ಒಬ್ಬೊಬ್ಬರನ್ನೇ ಮಟ್ಟ ಹಾಕಬೇಕು ಅಂತ ನಿರ್ಧರಿಸಿರೋ ಸಂತೋಷ್, ಒಬ್ಬೊಬ್ಬರನ್ನೇ ಕಟ್ಟಿ ಹಾಕಿಕೊಂಡು ಬರ್ತಿದ್ದಾರೆ.
ಮೂವರು ಡಿಸಿಎಂ ಬೇಕಿತ್ತಾ..?
ಗೋವಿಂದ ಕಾರಜೋಳ, ಡಾ.ಅಶ್ವತ್ಥ ನಾರಾಯಣ ಹಾಗೂ ಲಕ್ಷ್ಮಣ ಸವದಿ.. ಮೂವರನ್ನೂ ಉಪ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಲಾಗಿದೆ. ಆದ್ರೆ, ಇದರ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ. ಇದರಿಂದ ಸಮಸ್ಯೆ ಉದ್ಭವವಾಗುತ್ತೋ ವಿನಾಃ, ಸಮಸ್ಯೆ ಪರಿಹಾರ ಆಗೋದಿಲ್ಲ. ಅಲ್ಲದೆ, ಹಿರಿಯ ನಾಯಕರನ್ನ ನಿರ್ಲಕ್ಷ್ಯ ಮಾಡಿದ ಆರೋಪ ಈಗಾಗಲೇ ಕೇಳಿ ಬರ್ತಿದೆ. ಆರ್.ಅಶೋಕ್, ಜಗದೀಶ್ ಶೆಟ್ಟರ್, ಈಶ್ವರಪ್ಪ, ಶ್ರೀರಾಮುಲು ಸೇರಿದಂತೆ ಹಲವರು ಡಿಸಿಎಂ ಆಗೋ ಕನಸು ಕಾಣ್ತಿದ್ರು. ಆದ್ರೆ, ಇವರ ಆಸೆಗೆ ತಣ್ಣೀರು ಹಾಕಲಾಗಿದೆ.
ಸದ್ಯ ಆಯ್ಕೆ ಮಾಡಿರೋ ಮೂವರು ಡಿಸಿಎಂಗಳು ಕೂಡ ಸಂತೋಷ್ ಗ್ಯಾಂಗ್ನವರೇ ಆಗಿದ್ದಾರೆ. ಮೂವರು ಡಿಸಿಎಂ ಮಾಡಲು ಯಡಿಯೂರಪ್ಪ ಒಪ್ಪಿಗೆ ನೀಡಿಲ್ಲ. ಆದ್ರೆ, ಹೈಕಮಾಂಡ್ ಮಾತನ್ನ ಕೇಳಲೇಬೇಕಾದ ಅನಿವಾರ್ಯತೆಗೆ ಬಿಎಸ್ವೈ ಸಿಲುಕಿದ್ದರಿಂದ, ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಕೊಟ್ಟಿದ್ದಾರೆ. ಹೀಗೆ ಮುಂದುವರಿದ್ರೆ, ಯಡಿಯೂರಪ್ಪ ಸರ್ಕಾರ ಆರು ತಿಂಗಳು ಇರೋದು ಡೌಟು..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?