Connect with us

Featured

ಯಡಿಯೂರಪ್ಪಗೆ ಆರ್​ಎಸ್​ಎಸ್​ ಕೊಟ್ಟ ಸಲಹೆ ಏನು..? : ಹೊಸ ಯಡಿಯೂರಪ್ಪ ನೋಡ್ತೀರಿ..!

ಬೆಂಗಳೂರು : ಬಿ.ಎಸ್. ಯಡಿಯೂರಪ್ಪ ಅಂದ್ರೆ, ಸಿಟ್ಟು-ಸಿಡುಕು ಅನ್ನೋದು ಬಹಳಷ್ಟು ಜನರಿಗೆ ಗೊತ್ತಿದೆ. ಅದರಲ್ಲೂ ಯಡಿಯೂರಪ್ಪ ಅವರನ್ನ ಸಮೀಪದಿಂದ ನೋಡಿರುವ ಪತ್ರಕರ್ತರಿಗೆ, ಬಿಎಸ್​ವೈ ವ್ಯಕ್ತಿತ್ವದ ಪರಿಚಯ ಇರುತ್ತೆ. ತಮ್ಮ ಸಿಟ್ಟು-ಸಿಡುಕಿನಿಂದಲೇ ಹಲವರಿಂದ ವಿಮರ್ಶೆಗೆ ಒಳಗಾದವರು. ಸಿಡುಕು ಬುದ್ಧಿಯಿಂದಲೇ ಪಕ್ಷದ ಸದಸ್ಯರಿಂದ ದೂರಾದವರು. ಆದ್ರೆ, ಪರಿಸ್ಥಿತಿ ಈಗ ಆ ರೀತಿ ಇಲ್ಲ. ಯಾಕಂದ್ರೆ, 2008ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಇದ್ದ ಬಿಜೆಪಿ ಹೈಕಮಾಂಡ್ ಈಗ ಇಲ್ಲ..!

ಹೊಸ ಯಡಿಯೂರಪ್ಪ ನೋಡ್ತೀರಿ..!

ಸ್ವತಃ ಬಿ.ಎಸ್​. ಯಡಿಯೂರಪ್ಪ ಈ ಮಾತನ್ನ ಆರ್​ಎಸ್​ಎಸ್​ ಮುಖಂಡರಿಗೆ ಹೇಳಿದ್ದಾರಂತೆ. ಬುಧವಾರ ಬೆಳಗ್ಗೆ ಆರ್​ಎಸ್​ಎಸ್​ ಕಚೇರಿ ಕೇಶವ ಕೃಪಾದಲ್ಲಿ ಯಡಿಯೂರಪ್ಪ ಆರ್​ಎಸ್​ಎಸ್ ನಾಯಕರ ಜೊತೆ ಮಾತುಕತೆ ನಡೆಸಿದ್ರು. ಈ ವೇಳೆ ಸಂಘದ ಪ್ರಮುಖ ಮುಕುಂದ್​ ಜೊತೆ ಕೆಲ ಕಾಲ ಮಾತುಕತೆ ನಡೆಸಿ, ಸಲಹೆಗಳನ್ನೂ ಪಡೆದ್ರಂತೆ ಯಡಿಯೂರಪ್ಪ.

ಈ ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಮುಂದಿನ ದಿನಗಳು ಮುಳ್ಳಿನ ಹಾಸಿಗೆಯಂತೆ. ಬಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಯಡಿಯೂರಪ್ಪ ಅವರಿಗೆ ಆರ್​ಎಸ್​ಎಸ್ ಪ್ರಮುಖ ಮುಕುಂದ್ ಸಲಹೆ ನೀಡಿದ್ದಾರೆ. ಈ ವೇಳೆ, ಮಾತನಾಡಿರೋ ಯಡಿಯೂರಪ್ಪ ಹೌದು ಹೌದು ಎಂದಿದ್ದಾರೆ. ಈ ಹಿಂದೆ ಮಾಡಿರುವ ತಪ್ಪುಗಳನ್ನ ಮುಂದೆ ಮಾಡುವುದಿಲ್ಲ. ಮುಂದಿನ ಕೆಲವೇ ಕೆಲವು ತಿಂಗಳುಗಳಲ್ಲಿ ಸರ್ಕಾರಕ್ಕೆ ಹೊಸ ಇಮೇಜ್​ ಇರುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Advertisement

ಹಿಂದಿನ ಯಡಿಯೂರಪ್ಪಗೂ ಈಗಿನ ಯಡಿಯೂರಪ್ಪಗೂ ಸಾಕಷ್ಟು ಬದಲಾವಣೆ ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಟ್ಟಾಗಿ ಸೇರಿಸಿಕೊಂಡು ಪಕ್ಷ ಸಂಘಟನೆ ಜೊತೆ ಉತ್ತಮ ಆಡಳಿತ ನೀಡೋದಾಗಿ ಬಿಎಸ್​ವೈ ಭರವಸೆ ನೀಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಆಗುತ್ತಿರುವ ಎಲ್ಲಾ ಬೆಳವಣಿಗೆಗಳನ್ನ ಪ್ರಧಾನಿ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೋಡ್ತಿದ್ದಾರೆ. ಬಿಜೆಪಿ ಹೈಕಮಾಂಡ್ ತುಂಬಾ ಸ್ಟ್ರಾಂಗ್​ ಆಗಿದೆ. ಹೀಗಾಗಿ, ಮೊದಲಿನಂತೆ ಅವರನ್ನ ಎದುರು ಹಾಕಿಕೊಂಡು ಸಾಗುವುದು ಕಷ್ಟ. ಅದ್ದರಿಂದ ಹೊಸ ಯಡಿಯೂರಪ್ಪ ಮತ್ತು ಹೊಸ ಆಡಳಿತವನ್ನ ನೀವು ನೋಡ್ತೀರಿ ಎಂದು ಯಡಿಯೂರಪ್ಪ ಹೇಳಿದ್ದಾರಂತೆ. ನೋಡೋಣ, ಯಡಿಯೂರಪ್ಪ ಯಾವ ರೀತಿ ಆಡಳಿತ ನಡೆಸ್ತಾರೆ..? ಹೈಕಮಾಂಡ್ ಜೊತೆ ಹೇಗೆ ಇರ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ