Featured
ಮೋದಿ ನಿರ್ಧಾರಕ್ಕೆ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳೇ ವಿರೋಧ : ದುಬಾರಿ ದಂಡಕ್ಕೆ ಹಲವೆಡೆ ಬ್ರೇಕ್..!
ನವದೆಹಲಿ : ಕೇಂದ್ರದ ಮಹತ್ವದ ಕಾಯ್ದೆ, ಮೋಟಾರು ಕಾಯ್ದೆ ತಿದ್ದುಪಡಿಗೆ ಬಿಜೆಪಿ ಸರ್ಕಾರ ಇರುವ ರಾಜ್ಯಗಳೇ ವಿರೋಧ ವ್ಯಕ್ತಪಡಿಸಿವೆ. ಈಗಾಗಲೇ ಗುಜರಾತ್ ಸರ್ಕಾರ ದುಬಾರಿ ದಂಡವನ್ನ ಅರ್ಧದಷ್ಟು ಇಳಿಸಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಕೂಡ ಗುಜರಾತ್ ಮಾದರಿಯಲ್ಲೇ ಸಾಗಿದೆ. ಈ ನಡುವೆ, ಉತ್ತರ ಪ್ರದೇಶ, ಉತ್ತಾರಖಂಡ್ ಕೂಡ ದುಬಾರಿ ದಂಡ ವಿಧಿಸಲು ಆಗಲ್ಲ ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದಿವೆ.
ಈ ಕುರಿತು ಮಾತ್ನಾಡಿರೋ, ಉತ್ತರ ಪ್ರದೇಶದ ಸಾರಿಗೆ ಸಚಿವ ಅಶೋಕ್ ಕಠಾರಿಯಾ, ರಾಜ್ಯ ಬಿಜೆಪಿ ಸರ್ಕಾರ ದುಬಾರಿ ದಂಡವನ್ನ ವಿಧಿಸೋದಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಕೆಲವು ಸ್ಪಷ್ಟನೆ ಬೇಕಿದೆ. ಅಲ್ಲಿವರೆಗೆ ನಾವು ದುಬಾರಿ ದಂಡ ವಿಧಿಸಲ್ಲ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಯಾವಾಗಲು ಜನಪರವಾಗಿ ಇರುತ್ತೆ ಎಂದಿದ್ದಾರೆ. ಈ ಮೂಲಕ ಕೇಂದ್ರದ ಮೋದಿ ಸರ್ಕಾರ ಜನಪರವಾಗಿ ಇಲ್ವಾ ಅನ್ನೋ ಪ್ರಶ್ನೆಯನ್ನ ಹುಟ್ಟುಹಾಕಿದ್ದಾರೆ.
ಇತ್ತ ಉತ್ತರಾಖಂಡ್ ರಾಜ್ಯದಲ್ಲೂ ದುಬಾರಿ ದಂಡಕ್ಕೆ ಬ್ರೇಕ್ ಬಿದ್ದಿದೆ. ಈ ಕುರಿತು ಮಾತ್ನಾಡಿರೋ ಉತ್ತರಾಖಂಡ್ ನಗರಾಭಿವೃದ್ಧಿ ಸಚಿವ ಮದನ್ ಕೌಶಿಕ್, ನಮ್ಮ ಸರ್ಕಾರ ದುಬಾರಿ ದಂಡವನ್ನ ಅರ್ಧದಷ್ಟು ಕಡಿತ ಮಾಡಲು ಚಿಂತನೆ ನಡೆಸಿದೆ ಎಂದಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಕೂಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ದುಬಾರಿ ದಂಡವನ್ನ ಕಡಿತ ಮಾಡುವಂತೆ ಕೋರಿದೆ.
ಒಟ್ಟಿನಲ್ಲಿ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ, ಕೇಂದ್ರ ಸರ್ಕಾರದ ಹೊಸ ನೀತಿ, ಕಾಯ್ದೆಯನ್ನ ವಿರೋಧಿಸಿವೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?