Featured
ಮೋದಿ ಆಳ್ವಿಕೆಯಲ್ಲಿ ಆರ್ಥಿಕ ಸ್ಥಿತಿ ಹಾಳಾಗಿದೆಯಾ..? ಮಹಾಪತನದ ಅಪಾಯ ಕಾದಿದೆಯಾ..? ಸತ್ಯಾಂಶ ಏನು..?
ನವದೆಹಲಿ : ಇಡೀ ದೇಶ ಈಗ ಭಾರತದ ಆರ್ಥಿಕತೆ ಬಗ್ಗೆ ಮಾತ್ನಾಡುತ್ತಿದೆ. ಜಿಡಿಪಿ ಪ್ರಮಾಣ ಇಂದೆಂದಿಗಿಂತಲೂ ಕುಸಿದಿದೆ, ಕುಸಿಯುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಆರ್ಥಿಕತೆ ಕುಸಿಯುತ್ತಲೇ ಇದೆ.. ನೂರಾರು ಕಂಪನಿಗಳು ಮುಚ್ಚುತ್ತಿವೆ. ಸಾವಿರಾರು ಉದ್ಯೋಗಗಳು ಕಡಿತಗೊಳ್ಳುತ್ತಿವೆ. ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ತಿದ್ದಾರೆ. ಇಷ್ಟಾದ್ರೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಬಗ್ಗೆ ಈವರೆಗೆ ಮಾತ್ನಾಡಿಲ್ಲ ಯಾಕೆ ಅನ್ನೋ ಪ್ರಶ್ನೆಗಳು ಕಾಡುತ್ತಿವೆ.
ಇದೆಲ್ಲವೂ ಒಂದು ಕಡೆಯಾದ್ರೆ, ಮತ್ತೊಂದು ವರ್ಗ ಏನೂ ಆಗಿಯೇ ಇಲ್ಲ ಅಂತ ವಾದ ಮಾಡ್ತಿದೆ. ಅದಕ್ಕೆ ಅವರದ್ದೇ ಆದ ಕೆಲವು ಉದಾಹರಣೆಗಳನ್ನ ಕೊಡುತ್ತಾ ಹೋಗ್ತಾರೆ..
ಮೋದಿ ಭಕ್ತರು ಕೊಡುವ ಉತ್ತರ
- ಜೆಟ್ ಏರ್ವೇಸ್ ಮುಚ್ಚಿದ್ದು, ಆಡಳಿತ ಮಂಡಳಿಯ ವರ್ತನೆಯಿಂದಾಗಿ
- ಏರ್ ಇಂಡಿಯಾ ನಷ್ಟ ಅನುಭವಿಸಿದ್ದು ಈಗಲ್ಲ. ಅದು ಹುಟ್ಟಿದ್ದೇ ನಷ್ಟದಿಂದ.
- ಬಿಎಸ್ಎನ್ಎಲ್ನ 54 ಸಾವಿರ ಉದ್ಯೋಗಿಗಳು ಜಿಯೋಗೆ ಬದಲಾವಣೆಯಾದರು. ಇದು ಉದ್ಯೋಗ ಬದಲಾವಣೆಯೇ ಹೊರೆತು, ನಿರುದ್ಯೋಗವಲ್ಲ
- ಟಯೋಟಾ ಅತೀ ಹೆಚ್ಚು ವಾಹನಗಳನ್ನ ಮಾರಾಟ ಮಾಡಿದೆ. ಎಂಜಿ, ಕಿಯಾ ಕಂಪನಿಗಳು ಭಾರತ ಪ್ರವೇಶಿಸಿವೆ. ಮಾರುತಿ, ಟಾಟಾ ನಷ್ಟ ಅನುಭವಿಸ್ತಿರೋದು ಅವರ ಗುಣಮಟ್ಟದಿಂದ. ಈಗಲೂ ಕಾರುಗಳ ವೇಯ್ಟಿಂಗ್ ಟೈಮ್ 6 ರಿಂದ 8 ತಿಂಗಳು ಇದೆ.
- ಏರ್ಸೆಲ್ 2013ರಲ್ಲಿ ಮುಚ್ಚಿತ್ತು
- ಜೆಪಿ ಗ್ರೂಪ್ 2014ರಲ್ಲೇ ಕಣ್ಮರೆಯಾಯ್ತು
ಹೀಗೆ, ಮೋದಿಯನ್ನ ಹಾಗೂ ಬಿಜೆಪಿಯನ್ನು ಬೆಂಬಲಿಸುವ ಕೆಲವರು ಈ ರೀತಿಯ ವಿಶ್ಲೇಷಣೆ ಮಾಡ್ತಿದ್ದಾರೆ. ಮತ್ತೊಂದು ವರ್ಷ ಇದಕ್ಕೆ ತದ್ವಿರುದ್ಧವಾದ ಅಂಕಿ ಅಂಶಗಳನ್ನ ನೀಡ್ತಿದ್ದಾರೆ.
ಯಾವುದನ್ನ ನಂಬಬೇಕು..? ಮಹಾಪತನದ ಅಪಾಯ ಇದೆಯಾ..?
ಯಾರು ಏನೇ ಹೇಳಿದರೂ, ಆರ್ಥಿಕ ತಜ್ಞರ ಮಾತುಗಳನ್ನ ನಂಬಲೇ ಬೇಕು. ಬಹಳಷ್ಟು ಆರ್ಥಿಕ ವಿಶ್ಲೇಷಕರು ಸದ್ಯದ ಆರ್ಥಿಕತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮೋದಿ ಅಭಿಮಾನಿಗಳು ಅಥವಾ ಭಕ್ತರು ತಮಗೆ ಹೇಗೆ ಬೇಕೋ ಹಾಗೇ, ವಾದ ಹಾಗೂ ಚಿಂತನೆಗಳನ್ನ ಮಂಡಿಸ್ತಾರೆ. ಇದರಲ್ಲಿ ಹೊಸದೇನೂ ಇಲ್ಲ. ಆದ್ರೆ, ವಾಸ್ತವದ ಅರಿವು ಎಲ್ಲರಿಗೂ ಆಗಬೇಕಿದೆ.
ಒಂದೆಡೆ ಜಾಗತೀಕ ಮಟ್ಟದಲ್ಲಿ ಭಾರತದ ಆರ್ಥಿಕತೆ ಕುಸಿಯುತ್ತಿದೆ. ಮತ್ತೊಂದೆಡೆ ಕೆಲವು ಕಂಪನಿಗಳು ವಿದೇಶಿ ಬಂಡವಾಳವನ್ನೇ ಹಿಂದಕ್ಕೆ ಪಡೆದಿದ್ದಾರೆ. ನಿರುದ್ಯೋಗ ಹೆಚ್ಚಾಗುತ್ತಿದ್ದು, ಉತ್ಪಾದನೆ ವಲಯ ಕೂಡ ಸಾಕಷ್ಟು ತೊಂದರೆ ಅನುಭವಿಸಿದೆ. ಕೃಷಿ ಚಟುವಟಿಕೆಯಲ್ಲಿ ಉತ್ಪಾದನೆ ಕಡಿಮೆ ಆಗ್ತಿರೋದು ಕೂಡ ಕಳವಳಕ್ಕೆ ಕಾರಣವಾಗಿದೆ.
ಆರ್ಬಿಐ ಕಳೆದ ಒಂದು ವರ್ಷದಲ್ಲೇ ನಾಲ್ಕು ಬಾರಿ ರೆಪೋ ದರವನ್ನ ಕಡಿತ ಮಾಡಿದೆ. ಬಹುಶಃ ಆರ್ಬಿಐ ಇತಿಹಾಸದಲ್ಲೇ ಇದು ದಾಖಲೆ ಅಂದ್ರೆ, ತಪ್ಪಲ್ಲ. ಬ್ಯಾಂಕ್ಗಳು ಕೂಡ ಬಡ್ಡಿ ದರವನ್ನ ಕಡಿತ ಮಾಡಿವೆ. ಆದ್ರೆ, ಉತ್ಪಾದನೆ ವಲಯ ಮಾತ್ರ ಚೇತರಿಕೆ ಕಾಣ್ತಿಲ್ಲ. ಹೀಗಾಗಿ, ಮುಂಬರುವ ದಿನಗಳು ಕಷ್ಟದಿಂದ ಕೂಡಿವೆ ಅನ್ನೋದು ಬಹುತೇಕ ಆರ್ಥಿಕ ತಜ್ಞರ ವಾದ.
ಎನ್ಡಿಎ ಸರ್ಕಾರ ಎರಡನೇ ಅವಧಿಗೆ ಬಂದು ಇನ್ನೂ ಮೂರು ತಿಂಗಳಷ್ಟೇ ಆಗಿದೆ. ನೋಡೋಣ, ಮುಂಬರುವ ದಿನಗಳಲ್ಲಿ ಮೋದಿ ಸರ್ಕಾರ ಯಾವೆಲ್ಲಾ ಕ್ರಮಗಳನ್ನ ಕೈಗೊಳ್ಳುತ್ತೆ.? ಆರ್ಥಿಕ ಮಹಾಪತನದಿಂದ ಭಾರತವನ್ನ ಹೇಗೆ ಕಾಪಾಡ್ತಾರೆ ಅನ್ನೋದನ್ನ ಕಾದುನೋಡೋಣ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?