ರಾಜ್ಯ
ಮೊದಲ ಲೈನ್ ಅರ್ಥ ಗೊತ್ತಾಗ್ತಿಲ್ಲ ಡಿ ಬಾಸ್ ಫ್ಯಾನ್ಸ್‌ಗೆ, ಹೇಳಿದ್ದಾದರೂ ಯಾರಿಗೆ..?

ರೈಸಿಂಗ್ ಕನ್ನಡ ಸಿನಿಮಾ: ಚಿತ್ರನಟ ದರ್ಶನ್ ತೂಗುದೀಪ ಬಹಳ ದಿನದ ನಂತರ ಕೋಟ್ ಇರುವ ಇಮೇಜ್ ಶೇರ್ ಮಾಡಿ ಅಭಿಮಾನಿಗಳಿಗೆ ಹುಳ ಬಿಟ್ಟಿದ್ದಾರೆ ಬಹಳ ಮಜಾ ಅಂದರೆ ಡಿ ಬಾಸ್ ಅಭಿಮಾನಿಗಳು ಅದನ್ನ ವಿಭಿನ್ನವಾಗಿ ಅರ್ಥೈಸಿಕೊಳ್ಳುತ್ತಾ , ತರ್ಜುಮೆ ಮಾಡಿಕೊಳ್ಳುತ್ತಾ ಕಮೆಂಟ್ ಮಾಡುತ್ತಿದ್ದಾರೆ. pic.twitter.com/abZE3dstPR— Darshan Thoogudeepa (@dasadarshan) August 31, 2019
ಕನ್ನಡ ಸಿನಿಮಾ ಮಟ್ಟಿಗೆ ಪ್ರತ್ಯೇಖವಾಗಿ ಸಾಮ್ರಾಜ್ಯ ಕಟ್ಟಿಕೊಂಡಿರುವ ದರ್ಶನ್ ತನ್ನ ಅಭಿಮಾನಿಗಳನ್ನ ದಿನೇ ದಿನೇ ಹೆಚ್ಚು ಮಾಡಿಕೊಳ್ಳುತ್ತಾ ಸಾಗುತ್ತಿದ್ದಾರೆ. ಸಿನಿಮಾ ರಂಗದವರು ಹಾಗೂ ಮಾಧ್ಯಮಗಳ ಮೇಲೆ ಮನಸ್ತಾಪ ಹೆಚ್ಚೇ ಇದ್ದು, ಅದನ್ನ ಆಗಾಗ ಹರಿಬಿಡ್ತಾ ಇದ್ದಾರೆ.
ಸದ್ಯ ಒಂದು ಕೋಟ್ ನ್ನ ಟ್ವೀಟ್ ಮಾಡಿದ್ದಾರೆ, ಅದರ ಮೊದಲ ಲೈನ್ ಶುರುವಾಗುವುದೇ ಐ ಕ್ಯಾನ್ ಬಿ ಮೀನ್ ಆಜ್ ಫಕ್, ಮುಂದಿನ ಸಾಲುಗಳ ತರ್ಜುಮೆ ಹೀಗಿದೆ…
ಕ್ಯಾಂಡಿಯಂತೆ ಸಿಹಿ, ನೀರಿನಂತೆ ಪ್ರಶಾಂತ, ನರಕದಂತೆ ದುಷ್ಟ, ಸೈನಿಕನ ತರಹ ನಿಯತ್ತಿನವ. ಇವೆಲ್ಲವೂ ನಿನ್ನನ್ನ ಅವಲಂಬಿಸಿದೆ. ಇದನ್ನ ಕೋಟ್ ಎಂದು ತೆಗೆದುಕೊಳ್ಳಬಹುದು ಅಥವಾ ಯಾರನ್ನಾದರೂ ಉದ್ದೇಶಿಸಿಯೂ ಹೇಳಿರಬಹುದು. ಆದರೆ ಡಿ ಬಾಸ್ ಅಭಿಮಾನಿ ದೇವರುಗಳು ಇದನ್ನ ರವಿ ಬೆಳಗೆರೆಗೆ ಹೇಳಿದ್ದೇನೋ, ನಟ ಸುದೀಪ್ ಗೂ ಇರಬಹುದು ಎಂದು ಅರ್ಥೈಸುತ್ತಿದ್ದಾರೆ. ಅದರಲ್ಲೂ ಮೊದಲ ಸಾಲು ಅರ್ಥವಾಗದೇ ಏನೇನೋ ಕಮೆಂಟ್ ಮಾಡುತ್ತಿದ್ದಾರೆ.
You may like
ಡಿಬಾಸ್ ದರ್ಶನ್ ಅಭಿನಯದ ಯಜಮಾನ ಸಿನಿಮಾಗೆ ಅತೀ ಹೆಚ್ಚು 8 SIIMA ಅವಾರ್ಡ್ : ದರ್ಶನ್ ಹೋಗಲಿಲ್ಲ ಯಾಕೆ.?
ಡಿಸಿಎಂ ಅಶ್ವತ್ಥ ನಾರಾಯಣ ಜೊತೆ ಶನೇಶ್ವರ ದೇವಾಲಕ್ಕೆ ಭೇಟಿ ನೀಡಿದ ಯಶ್
Sumalatha Ambarish : ಸುಮಲತಾ ಅಂಬರೀಷ್ ಬಯೋಪಿಕ್ ಸಿನಿಮಾ ಬರುತ್ತಾ.? : EXCLUSIVE
ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ಚಂದ್ರಚೂಡ್
ನೆರೆ ಸಂತ್ರಸ್ತರಿಗೆ ಕನ್ನಡ ಚಿತ್ರರಂಗ ಸಾಥ್ : ಪವರ್ ಸ್ಟಾರ್ ಪುನೀತ್ ಭರವಸೆ
ಗಂಗಾವತಿಯಲ್ಲಿ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರೀಕರಣ