Uncategorized
ಮೊಟ್ಟೆ ಮತ್ತು ಕೋಳಿ ಎರಡೂ ಸಸ್ಯಹಾರಿ

ಮೊಟ್ಟೆ ಮತ್ತು ಕೋಳಿ ಎರಡೂ ಸಸ್ಯಹಾರಿ..! : ಅಚ್ಚರಿಯಾದ್ರೂ ಸತ್ಯ..!
ನವದೆಹಲಿ : ಮೊಟ್ಟೆಯನ್ನೇ ಈವರೆಗೂ ಸಸ್ಯಹಾರಿ ಅಂತ ಬಹುತೇಕರು ಒಪ್ಪಿಕೊಂಡಿಲ್ಲ. ಆದ್ರೀಗ, ಮೊಟ್ಟೆ ಮತ್ತು ಕೋಳಿ ಎರಡನ್ನೂ ಸಸ್ಯಹಾರಿ ಎಂದು ಘೋಷಿಸಬೇಕಂತೆ. ಹೌದು, ಅಚ್ಚರಿಯಾದ್ರೂ ಈ ರೀತಿಯ ಹೊಸ ಬೇಡಿಕೆ ಇಟ್ಟಿರುವುದು ಶಿವಸೇನೆ ಸಂಸದ ಸಂಜಯ್ ರಾವತ್.
ರಾಜ್ಯಸಭೆಯಲ್ಲಿ ನಡೀತಿದ್ದ ಚರ್ಚೆ ವೇಳೆ ಮಾತ್ನಾಡಿರುವ ಶಿವಸೇನೆ ರಾಜ್ಯಸಭಾ ಸದಸ್ಯ ಸಂಜಯ್ ರಾವತ್, ಮೊಟ್ಟೆ ಮತ್ತು ಕೋಳಿಯನ್ನು ಸಸ್ಯಹಾರಿ ಎಂದು ಘೋಷಿಸಿ ಎಂದು ಒತ್ತಾಯಿಸಿದ್ದಾರೆ. ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕತ್ಸೆ, ಯುನಾನಿ ಆಯುಷ್ಮಾನ್ ಸಚಿವಾಲಯವೂ, ಚಿಕನ್ ಯಾವ ವಿಭಾಗಕ್ಕೆ ಸೇರುತ್ತದೆ ಎಂಬುದನ್ನ ಸ್ಪಷ್ಟಪಡಿಸಬೇಕು ಎಂದು ರಾವತ್ ಒತ್ತಾಯಿಸಿದ್ರು.
ಇದೇ ವೇಳೆ, ಆಯುರ್ವೇದಿಕ್ ಆಹಾರವನ್ನ ಕೋಳಿಗೆ ನೀಡಿದರೂ ಆಯುರ್ವೇದಿಕ್ ಮೊಟ್ಟೆ ಇಡುತ್ತೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಇಂಥಹ ಚಿಕನ್ ಪ್ರೋಟಿನ್ ಭರಿತವಾಗಿದ್ದರಿಂದ ಸಸ್ಯಹಾರಿಗೂ ಸೇವಿಸಬಹುದು ಎಂದಿದ್ದಾರೆ.
ಸಂಜಯ್ ರಾವತ್ ಹೇಳಿಕೆಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಬರೀ ಮೊಟ್ಟೆ, ಕೋಳಿಯಷ್ಟೇ ಯಾಕೆ ಮಟನ್ ಮತ್ತು ಬೀಫ್ಅನ್ನೂ ಸಸ್ಯಹಾರಿ ವಿಭಾಗಕ್ಕೆ ಸೇರಿಸಿ ಎಂದು ವ್ಯಂಗ್ಯವಾಡಿದ್ದಾರೆ.