Featured
ಮೂರು ದಶಕದಲ್ಲಿ 70 ಸಾವಿರ ಘಟನೆಗಳು : ವಿಶೇಷಾಧಿಕಾರ ರದ್ದಾದ ಮೇಲೆ ಒಂದೂ ಬುಲೆಟ್ ಫೈರ್ ಆಗಿಲ್ಲ : ಸುಪ್ರೀಂಗೆ ಸರ್ಕಾರ ಮಾಹಿತಿ
![](https://risingkannada.com/wp-content/uploads/2019/09/download-1-2.jpg)
ನವದೆಹಲಿ: ಜಮ್ಮುಕಾಶ್ಮೀರದ ವಿಶೇಷ ಅಧಿಕಾರ ರದ್ಧಾದ ಮೇಲೆ ಇಲ್ಲಿಯವರೆಗೆ ಒಂದೇ ಒಂದು ಬುಲೆಟ್ ಫೈರ್ ಆಗಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ದಾಖಲೆ ಸಲ್ಲಿಸಿದೆ.
ಕಾಶ್ಮೀರ ಟೈಂಸ್ ಕಾರ್ಯಕಾರಿ ಸಂಪಾದಕಿ ಅನುರಾಧ ಭಾಸಿನ್ ಸುಪ್ರೀಂಕೊರ್ಟ್‌ಗೆ ಅರ್ಜಿ ಸಲ್ಲಿಸಿ , ಕಾಶ್ಮೀರದಲ್ಲಿನ ಸಂಪರ್ಕ ಸಾಧನಗಳ ಮೇಲೆ ವಿಧಿಸಿರುವ ನಿರ್ಬಂಧ ಹಿಂಪಡೆಯಬೇಕು ಎಂದು ಕೇಳಿಕೊಂಡಿದ್ದರು. ಈ ಕುರಿತು ಇಂದು ವಿಚಾರಣೆಗೆ ಎತ್ತಿಕೊಂಡ ಜಸ್ಟೀಸ್ ರಂಜನ್ ಗೋಗಯ್, ಎಸ್‌ಎ ಬೊಬ್ಡೆ ಹಾಗೂ ನಝೀರ್ ಇದ್ದ ಪೀಠ ರಾಷ್ಟ್ರೀಯತೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಜಮ್ಮುಕಾಶ್ಮೀರದಲ್ಲಿ ಸಹಜ ವಾತಾವರಣ ಕಲ್ಪಿಸಬೇಕು ಎಂದು ಆದೇಶ ನೀಡಿದೆ.
ಸರ್ಕಾರದ ಪರ ಅಟಾರ್ನಿ ಜನರಲ್ ವಿಕೆ ವೇಣುಗೋಪಾಲ್ ಹಾಜರಾಗಿ, ೧೯೯೦ರಿಂದ ಈಚೆಗೆ ೭೧ ಸಾವಿರ ಉಗ್ರಗಾಮಿಗಳ ಕೃತ್ಯಗಳು ನಡೆದಿವೆ ಆದರೆ ವಿಶೇಷಾಧಿಕಾರ ರದ್ಧಾದ ದಿನದಿಂದ ಒಂದೇ ಒಂದು ಬುಲೆಟ್ ಫೈರ್ ಆಗಿಲ್ಲ, ಅಂತಹ ಸಂದರ್ಭ ಬಂದಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?