ರೈಸಿಂಗ್ ಕನ್ನಡ ಮುಂಬೈ : ಮಹಾರಾಷ್ಟ್ರದಲ್ಲಿ ಭಾರೀ ಮಳೆ ಆಗ್ತಿರೋದು ಗೊತ್ತೇ ಇದೆ. ಅದರಲ್ಲೂ ಭಾರೀ ಮಳೆಗೆ ಮುಂಬೈ ಅಕ್ಷರಶಃ ನಲುಗಿ ಹೋಗಿದೆ. ರಸ್ತೆಗಳು ಮುಳುಗಡೆಯಾಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ, ಮುಂಬೈನಲ್ಲಿ ಮಳೆಗೆ ಟ್ರಾಫಿಕ್ ಸಿಗ್ನಲ್ಗಳೇ ಮುಳುಗಿವೆ ಅನ್ನೋ ವಿಡಿಯೋವೊಂದು ವೈರಲ್ ಆಗಿದೆ. ನಿಜಕ್ಕೂ ಇದು ಮುಂಬೈನದ್ದೇನಾ..?
ಫಿಲ್ಮ್ಮೇಕರ್ ಆಗಿರೋ ವಿವೇಕ್ ಅಗ್ನಿಹೋತ್ರಿ ಈ ಕುರಿತ ವಿಡಿಯೋವೊಂದು ಶೇರ್ ಮಾಡಿದ್ದಾರೆ. ಟ್ರಾಫಿಕ್ ಸಿಗ್ನಲ್ ಮುಳುಗಿರೋ ವಿಡಿಯೋ ಅದಾಗಿದೆ. ಸುಮಾರು 2 ಲಕ್ಷ ಮಂದಿ ವೀಕ್ಷಣೆ ಮಾಡಿದ್ದು, ನಿಜಕ್ಕೂ ಇದು ಮುಂಬೈ ನಗರದ್ದೇನಾ ಅನ್ನೋ ಅನುಮಾನಕ್ಕೆ ಕಾರಣವಾಗಿದೆ.
ಹಾಲೋ ಟ್ರಾಫಿಕ್ ಪೊಲೀಸ್ ಆಫ್ ಮುಂಬೈ, ರಸ್ತೆಯನ್ನ ಸಿಗ್ನಲ್ಗಳೇ ಕ್ರಾಸ್ ಮಾಡಿವೆ. ಇದೆಷ್ಟು ಸರಿ ಎಂದು ಪ್ರಶ್ನೆ ಮಾಡಿ ವಿಡಿಯೋ ಹಾಕಿದ್ದಾರೆ.
ಆದ್ರೆ, ಈ ವಿಡಿಯೋದ ಅಸಲಿಯತ್ತೇನು ಅಂತ ನೋಡಿದ್ರೆ, ಇದು ಮುಂಬೈನಲ್ಲಿನ ವಿಡಿಯೋ ಅಲ್ಲವೇ ಅಲ್ಲ. ಇದು ಚೀನಾದ್ದು. ವಿಡಿಯೋದಲ್ಲಿನ ಬೋರ್ಡ್ ಹಾಗೂ ಬೈಕ್ ಮೇಲಿನ ಬೋರ್ಡ್ ಕೂಡ ಇದು ಚೀನಾದ ವಿಡಿಯೋ ಎಂಬುದು ಸ್ಪಷ್ಟವಾಗಿದೆ.
ಕಳೆದ ವರ್ಷ ಜೂನ್ನಲ್ಲಿ ಚೀನಾದಲ್ಲಿ ಆಗಿದ್ದ ಮಳೆಯಿಂದಾಗಿ ಈ ರೀತಿಯ ಅವಾಂತರ ಆಗಿತ್ತು.
ಸೋ, ಇನ್ಮುಂದೆ ಯಾವುದೇ ವಿಡಿಯೋ ಶೇರ್ ಮಾಡೋಕು ಮುನ್ನ ಪರಿಶೀಲಿಸಿ, ಎಚ್ಚರಿಕೆಯಿಂದ ಶೇರ್ ಮಾಡಿ..
ಈ ಸ್ಟೋರಿ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಸಲಹೆಯನ್ನ ಕಾಮೆಂಟ್ ಮಾಡಿ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?