Featured
ಮಿಸ್ಟರ್ ಕೂಲ್ ಎಂ.ಎಸ್. ಧೋನಿ ಈಗ ಎಲ್ಲಿದ್ದಾರೆ..? ಏನ್ ಮಾಡ್ತಿದ್ದಾರೆ ಗೊತ್ತಾ..?
ಜೈಪುರ : ಟೀಮ್ ಇಂಡಿಯಾ ಆಟಗಾರ, ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈಗ ಏನ್ ಮಾಡ್ತಿದ್ದಾರೆ..? ಎಲ್ಲಿದ್ದಾರೆ ಅನ್ನೋ ಪ್ರಶ್ನೆ ಬಹುತೇಕರನ್ನ ಕಾಡ್ತಿದೆ. ಎರಡು ತಿಂಗಳ ಕಾಲ ಕ್ರಿಕೆಟ್ನಿಂದ ವಿಶ್ರಾಂತಿ ತೆಗೆದುಕೊಂಡಿರೋ ಧೋನಿ, 15 ದಿನಗಳ ಕಾಲ ಗಡಿ ಕಾಯಲು ಹೋಗಿದ್ರು. ಕಾಶ್ಮೀರದಲ್ಲಿ ಒಂದ್ ರೀತಿ ವಿಷಮ ಪರಿಸ್ಥಿತಿ ಇದ್ದರೂ, ಗಡಿಯಲ್ಲಿ ಸೈನಿಕನ ಕೆಲಸ ಮಾಡ್ತಿದ್ರು ಧೋನಿ. ಇದೀಗ ಧೋನಿ, ಸೇನೆ ಕೆಲಸ ಮುಗಿಸಿ ಹೊರಗೆ ಬಂದಿದ್ದಾರೆ..
ಹಾಗಿದ್ರೆ ಧೋನಿ ಎಲ್ಲಿದ್ದಾರೆ..? ಏನ್ ಮಾಡ್ತಿದ್ದಾರೆ..?
ಕಾಶ್ಮೀರದ ಗಡಿಯಿಂದ ವಾಪಸ್ ಆಗಿರೋ ಧೋನಿ, ಜೈಪುರದಲ್ಲಿ ಪತ್ತೆಯಾಗಿದ್ದಾರೆ. ಹೊಸ ಲುಕ್ನಲ್ಲಿ ಕಾಣಿಸಿಕೊಂಡಿರೋ ಧೋನಿ, ಎಲ್ಲರಿಗೂ ಅಚ್ಚರಿ ಮೂಡಿಸಿದ್ರು. ತಲೆಗೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದಾರೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್ನಲ್ಲಿ ಗಡ್ಡದಲ್ಲಿರೋ ಧೋನಿ, ಜೈಪುರ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡ್ರು. ಈ ವೇಳೆ, ಅಭಿಮಾನಿಗಳು ಧೋನಿಯನ್ನ ಸುತ್ತುವರಿದ್ರು.
ಜೈಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಧೋನಿ ಜೈಪುರಕ್ಕೆ ಆಗಮಿಸಿದ್ರು ಎಂದು ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜೈಪುರಕ್ಕೆ ಧೋನಿ ಬರೋದನ್ನ ಮೊದಲೇ ತಿಳಿದಿದ್ದ ಅಭಿಮಾನಿಗಳು, ಮುಗಿಬಿದ್ದರು. ಈ ವೇಳೆ, ಭದ್ರತಾ ಸಿಬ್ಬಂದಿ ಧೋನಿಗೆ ದಾರಿ ಮಾಡಿಕೊಟ್ರು. ಅಲ್ಲಿಂದ, ಧೋನಿ ಕಾರ್ಯಕ್ರಮಕ್ಕೆ ತೆರಳಿದ್ರು.
ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಟೂರ್ನಿ ನಡೀತಿದೆ. ಮೊದಲ ಟೆಸ್ಟ್ ಮ್ಯಾಚ್ ನಡೀತಿದ್ದು, ಈಗಾಗಲೇ ಏಕದಿನ ಮತ್ತು ಟ್ವೆಂಟಿ ಟ್ವೆಂಟಿ ಟೂರ್ನಿಯಲ್ಲಿ ಭಾರತ ಪದಕ ಗೆದ್ದಾಗಿದೆ. ಟೆಸ್ಟ್ ಸರಣಿಯೂ ಗೆದ್ದರೆ ಹೊಸ ಇತಿಹಾಸ ಬರೆಯಲಿದೆ. ಈ ನಡುವೆ, ಧೋನಿ ಕ್ರಿಕೆಟ್ಗೆ ವಿದಾಯ ಹೇಳ್ತಾರೆ ಅನ್ನೋ ಮಾತು ಕೇಳಿಬರ್ತಿತ್ತು. ಇದಕ್ಕೆಲ್ಲಾ ಫುಲ್ಸ್ಟಾಪ್ ಹಾಕಿದ್ದ ಧೋನಿ, ಸೇನೆ ಕರ್ತವ್ಯಕ್ಕೆ ನಿಯೋಜನೆಯಾಗಿ, ಈಗ ವಾಪಸ್ ಆಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?