Featured
ಮಾರುತಿ ಆಲ್ಟೋ ಗಂಟೆಗೆ 144 ಕಿ.ಮಿ ವೇಗ ಅಂತ ದಂಡ ಹಾಕಿಬಿಟ್ರು : ಮಾಲೀಕ ಏನು ಮಾಡಿದ ಓದಿ ಇಲ್ಲಿ.
ಉತ್ತರ ಪ್ರದೇಶ: ಮೋಟಾರ್ ವಾಹನ ಕಾಯ್ದೆ ನಿಯಮಗಳನ್ನ ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತಂದಿರುವ ದೆಹಲಿ ಹಾಗೂ ಸುತ್ತಲಿನ ರಾಜ್ಯಗಳು ದಿನಕ್ಕೊಂದು ಸ್ವಾರಸ್ಯಕರ ಕಥೆಗಳಿಗೆ ಹೂರಣ ಒದಗಿಸುತ್ತಿವೆ. ಉತ್ತರ ಪ್ರದೇಶ ಟ್ರಾಫಿಕ್ ಪೊಲೀಸರ ವಿರುದ್ಧ ಟ್ವಿಟ್ಟರ್‌ನಲ್ಲಿ ಕಿಡಿಕಾರದ ಮಾರುತಿ ಆಲ್ಟೋ ಮಾಲೀಕ ಪೊಲೀಸರಿಗೆ ಸವಾಲೆಸೆದಿದ್ದಾನೆ, ಏನದು ಸವಾಲು..?
ಟ್ವೀಟ್ ಮಾಡಿದಾತ, ನನ್ನ ಒಂಬತ್ತು ವರ್ಷ ಹಳೆಯ ಮಾರುತಿ ಆಲ್ಟೋ ಕಾರ್ ಪ್ರತೀ ಗಂಟೆಗೆ ೧೪೪ ಕಿ.ಮಿ ಸ್ಪೀಡ್‌ನಲ್ಲಿ ಹಾದು ಹೋಗಿದೆ ಎಂದು ಎರಡು ಸಾವಿರ ರೂಪಾಯಿ ದಂಡ ಹಾಕಿದ್ದಾರೆ, ರಷೀದಿಯಲ್ಲಿ ಮಾರುತಿ ಬೊಲೆನೋ ಅಂತಾ ನಮೂದು ಮಾಡಿ ನನ್ನ ಗಾಡಿ ನಂಬರ್ ಸ್ಟಿಕ್ ಮಾಡಿದ್ದಾರೆ, ಒಂದು ವೇಳೆ ಈ ಕಾರು ಈ ಸ್ಪೀಡ್ ದಾಟಿದ್ದೇ ಆದರೆ ಪೊಲೀಸರಿಗೆ ನಾನು ಎರಡು ಲಕ್ಷ ರೂಪಾಯಿ ನೀಡ್ತೇನೆ ಎಂದು ಹರಿಹಾಯ್ದಿದ್ದಾರೆ.
You may like
ಹತ್ರಾಸ್ ಅತ್ಯಾಚಾರ : ವಿಜಯಪುರದಲ್ಲಿ ದಲಿತ ಸಂಘಟನೆಗಳಿಂದ ಪ್ರತಿಭಟನೆ
ನೋಯ್ಡಾ ಪೊಲೀಸರು ಒಂದು ನಿಮಿಷದ ಅಂತರದಲ್ಲಿ ಎರಡು ಬಾರಿ ದಂಡದ ಚಲನ್ ಕಳಿಸಿದ್ರು ಓದಿ
ಮೋದಿ ನಿರ್ಧಾರಕ್ಕೆ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳೇ ವಿರೋಧ : ದುಬಾರಿ ದಂಡಕ್ಕೆ ಹಲವೆಡೆ ಬ್ರೇಕ್..!
ದಂಡಕ್ಕೆ ಹೆದರಿ ಕಾರಿನಲ್ಲೂ ಹೆಲ್ಮೆಟ್ ಹಾಕಿಕೊಂಡ ಮಹಾನುಭಾವ..! ಅಚ್ಚರಿಯಾದ್ರೂ ಸತ್ಯ..!
ಎಂಥಾ ಅವಸ್ಥೆ..! ಹೆಲ್ಮೆಟ್ ಇಲ್ಲ ಅಂತ ಕಾರಿನಲ್ಲಿದ್ದವನಿಗೂ ದಂಡ: ಏನು ಇವನ ಕಥೆ, ಹಿಂಗೆ ತಿರುಗ್ತಾನೆ..?