ವೈರಲ್
ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹುಟ್ಟುವ ಮಕ್ಕಳಿಗೇ ಕಾಯಿಲೆ ಜಾಸ್ತಿ : ಶಾಕಿಂಗ್ ಸೀಕ್ರೆಟ್

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹುಟ್ಟುವ ಮಕ್ಕಳಿಗೇ ಕಾಯಿಲೆ ಜಾಸ್ತಿ : ಶಾಕಿಂಗ್ ಸೀಕ್ರೆಟ್..!
ನೀವು ಓದುತ್ತಿರುವುದು ಶೇಕಡಾ 100ಕ್ಕೆ 100ರಷ್ಟು ಸತ್ಯ. ಹೌದು, ಮಲ್ಟಿ ಸ್ಪೆಷಾಲಿಟಿ, ಹೈಪಲ್ ಕ್ಲೀನ್ ಆಸ್ಪತ್ರೆಗಳಲ್ಲಿ ಹುಟ್ಟುವ ಮಕ್ಕಳಿಗೆ ಕಾಯಿಲೆ ಜಾಸ್ತಿ ಬರುತ್ತಂತೆ. ಹೀಗಂತ ಯಾರೋ ಒಬ್ಬರು, ಇಬ್ಬರು ಹೇಳ್ತಿಲ್ಲ. ವಿಶ್ವವಿಖ್ಯಾತ ನ್ಯೂಯಾರ್ಕ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ವಿವಿ ಹಾಗೂ ದಕ್ಷಿಣ ಕೊರಿಯಾ ವಿವಿಗಳು ಈ ಬಗ್ಗೆ ಸಂಶೋಧನೆ ನಡೆಸಿವೆ. ಸಂಶೋಧನೆಯಲ್ಲಿ ಕಂಡುಕೊಂಡ ಸತ್ಯಾಂಶಗಳನ್ನ ಬಹಿರಂಗಪಡಿಸಿವೆ. ಮನೆಯಲ್ಲಿ ಹುಟ್ಟಿದ ಅಥವಾ ಸೂಲಗಿತ್ತಿಯಿಂದ ಹೆರಿಗೆ ಮಾಡಿಸಿಕೊಂಡು ಹುಟ್ಟಿದ ಮಕ್ಕಳು ಹೆಚ್ಚು ಆರೋಗ್ಯವಂತರಾಗಿ ಇರುತ್ತಾರಂತೆ. ಆದ್ರೆ, ಹೈಪರ್ ಆಸ್ಪತ್ರೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎಂದು ಹೇಳಿ ಲಕ್ಷ ಲಕ್ಷ ಹಣ ವಸೂಲಿ ಮಾಡುವ ಆಸ್ಪತ್ರೆಯಲ್ಲಿ ಹುಟ್ಟುವ ಮಕ್ಕಳಿಗೆ ಹೆಚ್ಚು ಕಾಯಿಲೆಗಳು ಬರುತ್ತವಂತೆ.
ಮಕ್ಕಳ ಜನನದ ಸಂದರ್ಭದಲ್ಲಿ ಎಲ್ಲರೂ ಕೂಡ ಅತ್ಯಂತ ಮುತುವರ್ಜಿಯಿಂದ ಆರೈಕೆ ಮಾಡ್ತಾರೆ. ಆದ್ರೆ, ಇದೇ ಆರೈಕೆ ಮಕ್ಕಳಿಗೆ ಮುಳುವಾಗ್ತಿದೆ. ಯಾಕಂದ್ರೆ, ಸಾಮಾನ್ಯವಾಗಿ ಪುಟ್ಟ ಮಕ್ಕಳಿಗೆ ಏನೇ ತೊಂದರೆ, ಕಾಯಿಲೆ ಬಂದರೂ ಆರಂಭದಲ್ಲಿ ಅದಕ್ಕೆ ತಾಯಿಯೇ ಕಾರಣ. ಅದ್ರಂತೆ, ಗರ್ಭಣಿಯರು ಹಾಗೂ ಬಾಣಂತಿಯರಿಗೆ ವಿಶೇಷವಾದ ರೋಗ ನಿರೋಧಕ ಶಕ್ತಿ ಇರುತ್ತೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬ್ಯಾಕ್ಟೀರಿಯಾಗಳು ತಾಯಿಯ ಶರೀರದಲ್ಲಿ ಇರುತ್ತವೆ. ಆದ್ರೆ, ಹೆರಿಗೆ ಸಮಯದಲ್ಲಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ಗಳು ರೋಗ ನಿರೋಧಕ ಬ್ಯಾಕ್ಟೀರಿಯಾಗಳನ್ನ ಕೊಲ್ಲುವಂತೆ ಮಾಡುತ್ತವೆ.
ಹೌದು, ಶುಭ್ರತೆಯ ಹೆಸರಿನಲ್ಲಿ ಗರ್ಭಿಣಿ ಅಥವಾ ತಾಯಿಗೆ ವಿವಿಧ ರೀತಿಯ ಚಿಕಿತ್ಸೆ ಕೊಡುತ್ತಾರೆ. ಸ್ವಚ್ಛತೆಗಾಗಿ ಸೋಪು, ಕ್ರೀಮ್ ಬಳಸಿ ಗರ್ಭಿಣಿ ತಾಯಿಯನ್ನು ಶುಚಿ ಮಾಡುತ್ತಾರೆ. ಇದೇ ತಾಯಿ ಹಾಗೂ ಮಕ್ಕಳಿಗೆ ಮುಳುವಾಗುತ್ತೆ ಎನ್ನುತ್ತಿದೆ ವೈದ್ಯ ಲೋಕ. ತಾಯಿಯ ಎದೆಹಾಲಿನಿಂದ ಹಿಡಿದು ಇಡೀ ಶರೀರ ಮಗುವಿಗೆ ಶ್ರೀರಕ್ಷೆ. ಆದ್ರೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ತಾಯಿಯ ಶ್ರೀರಕ್ಷೆಯನ್ನೇ ಮಗುವಿನಿಂದ ಕಿತ್ತುಕೊಳ್ಳುತ್ತೆ. ತಾಯಿಯಲ್ಲಿರೋ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಸಹಜವಾಗಿಯೇ ಮಗುವಿನಲ್ಲೂ ಈ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಆಗ, ಮಗುವಿಗೆ ಯಾವುದೇ ಸಣ್ಣ ಮಟ್ಟದ ಅನಾರೋಗ್ಯ ಬಂದರೂ, ಅದನ್ನ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಹೀಗಾಗಿ ಮುಂದೆ, ಆ ಮಗು ಹೆಚ್ಚು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.
ಆದರೆ, ಮನೆಯಲ್ಲೇ ಹುಟ್ಟಿದ ಮಕ್ಕಳು ಅತ್ಯಂತ ಆರೋಗ್ಯವಾಗಿ ಇರುತ್ತಾರೆ. ಯಾಕಂದ್ರೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಾಡುವಂತೆ, ಮನೆಯಲ್ಲಿ ಕ್ಲೀನಿಂಗ್ ಹೆಸರಿನಲ್ಲಿ ಎಲ್ಲದಕ್ಕೂ ಸೋಪು, ಕ್ರೀಮ್ ಬಳಕೆ ಮಾಡುವುದಿಲ್ಲ. ಇದರಿಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬ್ಯಾಕ್ಟೀರಿಯಾಗಳು ಸಾಯುವುದಿಲ್ಲ. ಇದೇ ಬ್ಯಾಕ್ಟೀರಿಯಾಗಳು ಮಗು ಹಾಗೂ ತಾಯಿಗೆ ಶ್ರೀರಕ್ಷೆಯಾಗಿ ಇರುತ್ತವೆ.
ಭಾರತದಂತಹ ದೇಶದಲ್ಲಿ ಇತ್ತೀಚೆಗೆ ಈ ರೀತಿಯ ಅಂದ್ರೆ, ಮಲ್ಟಿ ಸ್ಪೆಷಾಲಿಟಿ ಹಾಗೂ ಹೈಪರ್ ಸ್ಪೆಷಾಲಿಟಿ ಆಸ್ಪತ್ರೆ ಹೆಸರಿನಲ್ಲಿ ವಸೂಲಿಯೂ ಹೆಚ್ಚಾಗುತ್ತಿದೆ. ಪೋಷಕರು ಮಗು ಚೆನ್ನಾಗಿರಲಿ ಎಂಬ ಕಾರಣಕ್ಕಾಗಿ ಸಾಲ ಮಾಡಿದ್ರೂ ಪರವಾಗಿಲ್ಲ ಎಂದು ಖಾಸಗಿ ಆಸ್ಪತ್ರೆಗಳಿಗೆ ಗರ್ಭಣಿಯರನ್ನು ದಾಖಲೆ ಮಾಡಿಸ್ತಾರೆ. ಆದ್ರೆ, ವಿದೇಶಗಳಲ್ಲಿ ಮನೆಯಲ್ಲಿಯೇ ಹೆರಿಗೆ ಮಾಡಿಸುವು ಪ್ರಾಚೀನ ಕಾಲದ ಪದ್ಧತಿಯನ್ನ ಬಳಸಲು ಪ್ರೋತ್ಸಾಹ ನೀಡುತ್ತಿದ್ದಾರೆ. ಗರ್ಭಿಣಿಯ ಹೆರಿಗೆ ಸಮಯ ಬಂದಾಗ, ತರಬೇತಿ ಪಡೆದಿರುವ ಸೂಲಗಿತ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ತಾರೆ. ಹೆರಿಗೆ ಸಮಯದಲ್ಲಿ ಮನೆಯಲ್ಲೇ ಸೂಲಗಿತ್ತಿ ಹೆರಿಗೆ ಮಾಡಿಸಿ, ತಾಯಿ ಹಾಗೂ ಮಗುವನ್ನ ಕ್ಷೇಮವಾಗಿ ನೋಡಿಕೊಳ್ತಾರೆ. ಈ ರೀತಿಯ ಪ್ರಾಚೀನ ಕಾಲದ ಹೆರಿಗೆ ಪದ್ಧತಿ ಇತ್ತೀಚೆಗೆ ವಿದೇಶಗಳಲ್ಲಿ ಹೆಚ್ಚಾಗುತ್ತಿದೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಹೆಸರಲ್ಲಿ ಹಣವಷ್ಟೇ ಅಲ್ಲದೆ ಆರೋಗ್ಯವನ್ನೂ ಕಳೆದುಕೊಳ್ಳಬೇಕಾಗುತ್ತದೆ.. ಒಮ್ಮೆ ಯೋಚಿಸಿ ನೋಡಿ..