Featured
ಮಗಳು DySP.. ಅಪ್ಪ ಸರ್ಕಲ್ ಇನ್ಸ್ಪೆಕ್ಟರ್ : ಮಗಳಿಗೆ ತಂದೆಯಿಂದ ಸೆಲ್ಯೂಟ್ : ಸಖತ್ ವೈರಲ್ ಸ್ಟೋರಿ
![](https://risingkannada.com/wp-content/uploads/2021/01/WhatsApp-Image-2021-01-05-at-12.36.07-PM.jpeg)
ರೈಸಿಂಗ್ ಕನ್ನಡ :- (ತಿರುಪತಿ) ತಂದೆ-ತಾಯಿಗಳಿಗೆ ತಮ್ಮ ಮಕ್ಕಳು ತಮಗಿಂತ ಮೇಲೆ ಬೆಳೆಯಬೇಕು. ಒಳ್ಳೇ ಹುದ್ದೆಯಲ್ಲಿ ಇರಬೇಕು ಅಂತ ಆಸೆ ಇದ್ದೆ ಇರುತ್ತೆ. ಅದ್ರಲ್ಲೂ ಪೋಷಕರ ಮೇಲಧಿಕಾರಿಯಾಗಿ ತಮ್ಮ ಮಕ್ಕಳೇ ಬಂದ್ರೆ, ಅವರ ಖುಷಿ ಡಬಲ್ ಆಗುತ್ತೆ. ಇಂಥದ್ದೇ ಘಟನೆ ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಡೆದಿದ್ದು, ಈ ಸ್ಟೋರಿ ಸಖತ್ ವೈರಲ್ ಆಗಿದೆ.
ತಿರುಪತಿಯಲ್ಲಿ ನಡೆದ ಪೊಲೀಸ್ ಸಭೆಯಲ್ಲಿ ಈ ಅಪರೂಪದ ಘಟನೆ ಸಾಕ್ಷಿಯಾಗಿದೆ. ತಂದೆ ಶ್ಯಾಂ ಅವರು ಸರ್ಕಲ್ ಇನ್ಸ್ಪೆಕ್ಟರ್. ಮಗಳು ಪ್ರಶಾಂತಿ DySP. ಪೊಲೀಸ್ ಸಭೆಗೆ ಇಬ್ಬರು ಬಂದಿರ್ತಾರೆ. ಈ ವೇಳೆ ತಂದೆಗಿಂತ ಮೇಲಿನ ಹುದ್ದೆಯಲ್ಲಿರೋ ಮಗಳಿಗೆ, ಸ್ವತಃ ತಂದೆಯೇ ಸೆಲ್ಯೂಟ್ ಹೊಡೆದಿದ್ದಾರೆ. ಮಗಳಿಗೆ ತಂದೆಯೇ ಸೆಲ್ಯೂಟ್ ಮಾಡಿರೋದು ತುಂಬಾನೇ ವೈರಲ್ ಆಗಿದೆ.
![](https://risingkannada.com/wp-content/uploads/2021/01/WhatsApp-Image-2021-01-05-at-12.36.07-PM.jpeg)
ತಂದೆ ಮಗಳ ಈ ಹೃದಯಸ್ಪರ್ಶಿ ಕ್ಷಣಗಳಿಗೆ ತಿರುಪತಿ ಎಸ್ಪಿ ರಮೇಶ್ ರೆಡ್ಡಿ ಕೂಡ ಸಾಕ್ಷಿಯಾಗಿದ್ದಾರೆ. ಸದ್ಯ ಪ್ರಶಾಂತಿ ಗುಂಟೂರು ಜಿಲ್ಲೆಯ ಡಿವೈಎಸ್ಪಿ ಆಗಿ ಕೆಲಸ ಮಾಡ್ತಿದ್ದಾರೆ. ಶ್ಯಾ ಅವರು ತಿರುಪತಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದಾರೆ.
ಮಗಳಿಗೆ ತಂದೆ ಸೆಲ್ಯೂಟ್ ಮಾಡುವ ಫೋಟೋವನ್ನ ಆಂಧ್ರಪ್ರದೇಶ ಪೊಲೀಸರು, ತಮ್ಮ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ಜೊತೆಗೆ ಭಾವನಾತ್ಮಕ ಘಟನೆಗೆ ಸಾಕ್ಷಿಯಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?