Featured
ಮಕ್ಕಳ ತಲೆಗೆ ಬಾಕ್ಸ್ ತುಂಬಿದ ಟೀಚರ್ : ಕಾಪಿ ಹಾವಳಿ ತಡೆಯಲು ಹೋಗಿ ಕೆಲಸ ಕಳೆದುಕೊಂಡ ಶಿಕ್ಷಕ..!

ರೈಸಿಂಗ್ ಕನ್ನಡ : ಅದೇನೋ ಮಾಡಲು ಹೋಗಿ, ಇನ್ನೇನೋ ಆಯ್ತಂತೆ. ಈ ಸ್ಟೋರಿಯಲ್ಲಿ ಶಿಕ್ಷಕರ ಕಥೆಯೇ ಅದರಂತೆ ಆಗಿದೆ. ಶಾಲೆಯಲ್ಲಿ ಮಕ್ಕಳು ಕಾಪಿ ಮಾಡೋದನ್ನ ತಪ್ಪಿಸಲು ಶಿಕ್ಷಕರೊಬ್ಬರು ಉಪಾಯ ಮಾಡಿದ್ರು. ಅದೇನಪ್ಪ ಅಂದ್ರೆ, ಎಲ್ಲಾ ಮಕ್ಕಳ ತಲೆಯನ್ನ ಬಾಕ್ಸ್ನಿಂದ ಮುಚ್ಚುವುದು..! ಈ ಫೋಟೋ ನೋಡಿದ್ರೆ ನಿಮಗೇ ಅರ್ಥ ಆಗುತ್ತೆ.
ಇಷ್ಟಕ್ಕೂ ಈ ಘಟನೆ ನಡೆದಿರೋದು ಮೆಕ್ಸಿಕೋದಲ್ಲಿ. ಮೆಕ್ಸಿಕನ್ ಸಿಟಿಯೊಂದರ ಶಾಲೆಯಲ್ಲಿ ಶಿಕ್ಷಕರೊಬ್ಬರು ಈ ರೀತಿ ಕಠಿಣ ಕ್ರಮಕ್ಕೆ ಮುಂದಾಗಿದ್ರು. ಇಡೀ ಕ್ಲಾಸ್ ರೂಮ್ ತುಂಬಾ ಮಕ್ಕಳ ತಲೆ ಮೇಲೆ ಕಾರ್ಡ್ಬೋರ್ಡ್ ಬಾಕ್ಸ್ಗಳನ್ನ ತುಂಬಿಸಿದ್ರು. ಮಕ್ಕಳ ಪೋಷಕರೊಬ್ಬರು ಈ ಫೋಟೋವನ್ನ ಶೇರ್ ಮಾಡಿ, ಶಿಕ್ಷಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೆ, ಈ ರೀತಿ ವರ್ತನೆ ತೋರಿದ ಶಿಕ್ಷಕರನ್ನ ಕೆಲಸದಿಂದ ಅಮಾನತು ಮಾಡುವಂತೆ ಒತ್ತಾಯಿಸಿದ್ರು. ಪಾಪ, ಹೀಗೆ ಏನೋ ಮಾಡಲು ಹೋಗಿ ಆ ಶಿಕ್ಷಕ ಕೆಲಸ ಕಳೆದುಕೊಂಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?