Featured
ಮಂಡ್ಯ ರೈತರಿಗೆ ಗುಡ್ ನ್ಯೂಸ್ : ಮೈಶುಗರ್, ಪಾಂಡವಪುರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭ.!?

ಬೆಂಗಳೂರು/ಮಂಡ್ಯ : ಮಂಡ್ಯದ ಮೈಶುಗರ್ ಹಾಗೂ ಪಾಂಡವರಪುರ ಸಕ್ಕರೆ ಕಾರ್ಖಾನೆ ಪುನರ್ ಆರಂಭ ವಿಚಾರವಾಗಿ ಇವತ್ತಯ ಚರ್ಚೆ ನಡೀತು. ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಭೇಟಿಯಾದ ಸಂಸದೆ ಸುಮಲತಾ ನೇತೃತ್ವದ ತಂಡ, ಈ ಕುರಿತು ಸಿಎಂ ಜೊತೆ ಚರ್ಚೆ ನಡೆಸಿದ್ರು. ಸಭೆ ಬಳಿಕ ಮಾತ್ನಾಡಿದ, ಸಂಸದೆ ಸುಮಲತಾ, ಮಂಡ್ಯದ ಮೈಶುಗರ್, ಪಾಂಡವಪುರ ಸಕ್ಕರೆ ಕಾರ್ಖಾನೆ ಬಗ್ಗೆ ಚರ್ಚೆ ನಡೆದಿದೆ. ಎಸ್ಟಿಮೇಷನ್ ಬಗ್ಗೆ ಸಲಹೆ ಮುಂದಿಟ್ಟಿದ್ದಾರೆ. ಪ್ರಸ್ತುತ ರೈತರು, ಕಾರ್ಖಾನೆ ಸಿಬ್ಬಂದಿಗೂ ತೊಂದರೆಯಾಗ್ತಿದ್ದು, ಸಿಎಂ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದ್ರು.
ಅಲ್ಲದೆ, ಫ್ಯಾಕ್ಟರಿ ಅಪ್ ಗ್ರೇಡ್ ಮಾಡುವ ಬಗ್ಗೆ ಸಿಎಂ ಹೇಳಿದ್ದಾರೆ, ಮಂಡ್ಯ ಕಾರ್ಖಾನೆ ಲೀಸ್ ಕೊಡುವ ಬಗ್ಗೆಯೂ ಚರ್ಚೆ ನಡೆದಿದ್ದು, ಪಾಂಡವಪುರ ಸಕ್ಕರೆ ಕಾರ್ಖಾನೆ ಲೀಸ್ ಗೆ ಕೊಡಲು ಒಪ್ಪಿಗೆಯಾಗಿದೆ ಅಂತ ಸುಮಲತಾ ಹೇಳಿದ್ರು.
ಇದೇ ವೇಳೆ ಸಭೆ ಬಳಿಕ ಮಾತ್ನಾಡಿದ ಸಿಎಂ ಯಡಿಯೂರಪ್ಪ, ಮೈಶುಗರ್ ಕಂಪನಿಯ 330 ನೌಕರರು ವಿಆರ್ ಎಸ್ ಪಡೆಯಲು ಸಿದ್ಧರಾಗಿದ್ದು, 22 ಕೋಟಿ ರೂ. ಬೇಕಾಗುತ್ತದೆ. ವಿಆರ್ ಎಸ್ ಕೊಟ್ಟು ಅವರನ್ನು ಕಳುಹಿಸಿಕೊಡಲಾಗುವುದು ಅಂದ್ರು. ಅಲ್ಲದೆ, ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಲೀಸ್ ಗೆ ಕೊಡಲು ಒಪ್ಪಿಕೊಂಡಿದ್ದು, ಲೀಸ್ ಮೇಲೆ ನೀಡಲು ನಿರ್ಧಾರ ಮಾಡಿರೋದಾಗಿ ತಿಳಿಸಿದ್ರು.
ಇನ್ನು ಮೈ ಶುಗರ್ ಕಾರ್ಖಾನೆ ಲೀಸ್ ಗೆ ಕೊಡಬೇಕಾ ಅಥವಾ ಒ ಅಂಡ್ ಎಂ ಮಾಡಬೇಕಾ ಎಂಬ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಒಂದು ವೇಳೆ ಒ ಅಂಡ್ ಎಂ ಮಾಡಿದ್ರೆ, ವಾರ್ಷಿಕ 25 ಕೋಟಿ ರೂ. ನೀಡಬೇಕು. ಈಗಲೇ ಸಾಕಷ್ಟು ದುಡ್ಡು ಕೊಡಲಾಗಿದೆ, ಮುಂದೆ ಸರ್ಕಾರಕ್ಕೆ ಹೊರೆ ಆಗುತ್ತೆ ಅಂತ ಹೇಳಿದ್ರು. ಕೂಡಲೇ ಪಾಂಡವುರ ಸಕ್ಕರೆ ಕಾರ್ಖಾನೆಯನ್ನು ಲೀಸ್ ಗೆ ನೀಡೋದಾಗಿ ಸಿಎಂ ತಿಳಿಸಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?