Featured
ಮಂಗಳವಾರ ಬೆಳಗ್ಗೆ 10.30ಕ್ಕೆ ಯಡಿಯೂರಪ್ಪ ಸೇನೆ ರೆಡಿ : ಯಾರು ಔಟ್.? ಯಾರು ಇನ್.?
![](https://risingkannada.com/wp-content/uploads/2019/07/yeddy.jpg)
ಬೆಂಗಳೂರು : ಇನ್ನೇನು ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇನೆ ರೆಡಿಯಾಗಲಿದೆ. ಸಂಪುಟ ವಿಸ್ತರಣೆಗೆ ಕೌಂಟ್ಡೌನ್ ಶುರುವಾಗ್ತಿದ್ದಂತೆ ಯಾರೆಲ್ಲಾ ಬಿಎಸ್ವೈ ಸೇನೆಯಲ್ಲಿ ಇರ್ತಾರೆ ಅನ್ನೋ ಕುತೂಹಲ ಮೂಡಿಸಿದೆ. ಮಂಗಳವಾರ ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ನಡೆಯಲಿದೆ.
ಆದ್ರೆ, ಯಾರೆಲ್ಲಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಅನ್ನೋದು ಇನ್ನೂ ಅಧಿಕೃತವಾಗಿಲ್ಲ. ಈವರೆಗೆ ಅಧಿಕೃತ ಪಟ್ಟಿ ಬಿಡುಗಡೆಯಾಗಿಲ್ಲ. ಆದ್ರೆ, ರೈಸಿಂಗ್ ಕನ್ನಡಗೆ ಸಿಕ್ಕ ಮಾಹಿತಿ ಪ್ರಕಾರ, ಕೆಲವು ಅಚ್ಚರಿ ಹೆಸರುಗಳು ಸಂಪುಟದಲ್ಲಿ ಸೇರ್ಪಡೆಯಾಗಲಿವೆ ಎನ್ನಲಾಗಿದೆ. ಹಿರಿಯ ರಾಜಕಾರಣಿಗಳನ್ನ ಸಲಹೆಗೆ ಹಾಗೂ ಪಕ್ಷ ಸಂಘಟನೆಗೆ ಉಪಯೋಗಿಸಿಕೊಂಡು, ಯುವ ಹಾಗೂ ಉತ್ಸಾಹಿಗಳಿಗೆ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ.
ಯಾರಿಗೆಲ್ಲಾ ಕೊಕ್..!
ನಮಗೆ ಸಿಕ್ಕ ಮಾಹಿತಿ ಪ್ರಕಾರ ಮಾಜಿ ಸಿಎಂ ಜಗದೀಶ್ ಶೆಟ್ಟರ್, ರೇಣುಕಾಚಾರ್ಯ ಸೇರಿದಂತೆ ಕೆಲವು ಹಿರಿಯ ನಾಯಕರಿಗೆ ಸಂಪುಟದಿಂದ ಕೊಕ್ ನೀಡೋ ಸಾಧ್ಯತೆ ಇದೆ. ಈ ಬಾರಿ ಮೊದಲ ಹಂತವಾಗಿ 13 ರಿಂದ 16 ಮಂದಿಗೆ ಮಾತ್ರ ಅವಕಾಶ ನೀಡಲಾಗ್ತಿದೆ. ಹೀಗಾಗಿ, ಬಹುತೇಕರಿಗೆ ಸಂಪುಟದಲ್ಲಿ ಅವಕಾಶ ನೀಡೋದು ಡೌಟು ಅನ್ನೋ ಮಾತು ಕೇಳಿಬರ್ತಿದೆ.
ಯಡಿಯೂರಪ್ಪ ಪಟ್ಟಿ ಮತ್ತು ಸಂತೋಷ್ ಪಟ್ಟಿ..!
ಇತ್ತೀಚೆಗೆ ದೆಹಲಿಯಲ್ಲಿ ಅಮಿತ್ ಶಾ ಹಾಗೂ ಮೋದಿಯನ್ನು ಭೇಟಿಯಾಗಿ ಬಂದ ಯಡಿಯೂರಪ್ಪ, ತಮ್ಮ ಪಟ್ಟಿಯನ್ನ ನೀಡಿ ಬಂದಿದ್ದಾರೆ. ಇದೇ ವೇಳೆ, ದೆಹಲಿಯಲ್ಲೇ ಇರೋ ಸಂತೋಷ್ ಕೂಡ, ಅಮಿತ್ ಶಾಗೆ ಪಟ್ಟಿ ನೀಡಿದ್ದಾರೆ. ಹೀಗಾಗಿ, ಇಬ್ಬರ ಪಟ್ಟಿಯನ್ನು ಪರಿಶೀಲಿಸಿ, ಪಟ್ಟಿಯಲ್ಲಿರೋ ಅಭ್ಯರ್ಥಿಗಳ, ಶಾಸಕರ ಬಯೋಡಟಾ ನೋಡಿಕೊಂಡು ಅಮಿತ್ ಶಾ ಸಂಪುಟ ಪಟ್ಟಿಯನ್ನ ಫೈನಲ್ ಮಾಡಲಿದ್ದಾರೆ.
ಯೋಗೇಶ್ವರ್ಗೆ ಸಂಪುಟ ಸ್ಥಾನ.!
ಮಾಜಿ ಸಚಿವ ಯೋಗೇಶ್ವರ್ಗೆ ಸಚಿವ ಸ್ಥಾನ ಬಹುತೇಕ ಕನ್ಫರ್ಮ್ ಆಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನ ಆಪರೇಷನ್ ಮಾಡಲು ಸಕ್ಸಸ್ ಆದವರು ಯೋಗೇಶ್ವರ್. ಹೀಗಾಗಿ, ಯೋಗೇಶ್ವರ್ಗೆ ಸಚಿವ ಸ್ಥಾನ ಬಹುತೇಕ ಪಕ್ಕಾ ಆಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?