Featured
ಭಾರತ-ಪಾಕ್ ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಸೋಲು : ಅಣ್ವಸ್ತ್ರ ಯುದ್ಧ ಸಂಭವ ಎಂದ ಇಮ್ರಾನ್..!
ಇಸ್ಲಾಮಾಬಾದ್ : ಒಂದ್ವೇಳೆ ಭಾರತ-ಪಾಕಿಸ್ತಾನದ ನಡುವೆ ಸಂಪ್ರದಾಯಿಕ ಯುದ್ಧ ಏನಾದ್ರೂ ನಡೆದ್ರೆ, ನಾನು ಸೋಲುತ್ತೇವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಸುದ್ದಿವಾಹಿನಿ ಜೊತೆ ಮಾತ್ನಾಡಿರೋ ಇಮ್ರಾನ್ ಖಾನ್, ಭಾರತದ ಜೊತೆಗಿನ ಯುದ್ಧ ಉಪಖಂಡವನ್ನೂ ದಾಟಿ ಹೋಗಬಹುದು ಎಂದಿದ್ದಾರೆ.
ಇದೇ ವೇಳೆ ನಾನೊಬ್ಬ ಶಾಂದಿವಾದಿ, ಯುದ್ಧದ್ವೇಷಿ. ಯಾವುದೇ ಸಮಸ್ಯೆಗಳು ಯುದ್ಧದಿಂದ ಪರಿಹಾರ ಆಗಲ್ಲ ಎಂದು ನಂಬಿದವನು ನಾನು. ಪಾಕಿಸ್ತಾನ ಎಂದೆಂದಿಗೂ ತಾನಾಗಿಯೇ ಯುದ್ಧ ಆರಂಭ ಮಾಡಲ್ಲ ಎಂದು ಇಮ್ರಾನ್ ಹೇಳಿದ್ದಾರೆ. ಅಲ್ಲದೆ, ಜಮ್ಮು ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನ ರದ್ದು ಮಾಡಿರೋ ಭಾರತದ ಜೊತೆ ಮಾತುಕತೆ ನಡೆಸಲ್ಲ ಎಂದಿದ್ದಾರೆ.
ಈ ಮಧ್ಯೆ, ಭಾರತದ ಜೊತೆ ಸಂಪ್ರದಾಯಿಕ ಯುದ್ಧ ನಡೆದ್ರೆ, ನಾವು ಸೋಲಬಹುದು. ಆದ್ರೆ, ಅಂತಹ ಸಂದರ್ಭದಲ್ಲಿ ಶರಣಾಗತಿ ಅಥವಾ ಕೊನೆಯವರೆಗೆ ಹೋರಾಡುವ ಆಯ್ಕೆ ಇರುತ್ತೆ. ನಾವು ಕೊನೆಯವರೆಗೆ ಹೋರಾಡುತ್ತೇವೆ. ಪ್ರತಿಯೊಬ್ಬ ಪಾಕಿಸ್ತಾನ ಸ್ವಾತಂತ್ರ್ಯಕ್ಕಾಗಿ ಸಾಯುವವರೆಗೆ ಹೋರಾಡ್ತಾನೆ. ಆಗ ಕೊನೆಗೆ ಅಣ್ವಸ್ತ್ರ ಪ್ರಯೋಗ ಆದರೂ ಆಗಬಹುದು.
ಯುದ್ಧದ ಮಾತು ಬಂದ್ರೆ, ಅಣ್ವಸ್ತ್ರದಿಂದಲೇ ಕೊನೆಯಾಗೋ ಸಾಧ್ಯತೆ ಇದೆ ಎಂದು ಇ್ರಮಾನ್ ಸಂದರ್ಶನದಲ್ಲಿ ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?