Featured
ಬ್ರಿಟನ್ ಕೊರೋನಾಗೆ ಕರ್ನಾಟಕವೇ ಹಾಟ್ ಸ್ಪಾಟ್ ಆಗುತ್ತಾ.? : ರೂಪಾಂತರಿ ಅಟ್ಟಹಾಸ..!
ರೈಸಿಂಗ್ ಕನ್ನಡ:- ಚೀನಾ ವೈಸರ್ ಕೊರೋನಾ ಎಂಟ್ರಿ ಕೊಟ್ಟಾಗ, ಒಂದು ಪ್ರಕರಣ, ಎರಡು ಪ್ರಕರಣ ಅಂತ ನಾವ್ ಸುದ್ದಿ ನೋಡಿದ್ವಿ. ಆಮೇಲೆ ನೂರು, ಸಾವಿರ, ಲಕ್ಷ ಆಯ್ತು.. ಕ್ರಮೇಣ ಎಲ್ಲರೂ ಚೀನಾ ಕೊರೋನಾ ವೈರಸ್ಗೆ ಒಂದ್ ರೀತಿ ಅಡ್ಜಸ್ಟ್ ಆಗಿದ್ದೇವೆ. ಇದೀಗ ಬ್ರಿಟನ್ ವೈರಸ್ ಸರದಿ..
ಯೆಸ್, ಬ್ರಿಟನ್ ವೈರಸ್ ಕೂಡ ದಿನಕ್ಕೆ ಒಂದು, ಎರಡು, ಮೂರು ಪ್ರಕರಣಗಳು ಪತ್ತೆ ಆಗ್ತಿವೆ. ಆದ್ರೆ, ಯಾರೂ ಕೂಡ ಮೊದಲಿನಷ್ಟು ಹೆದರ್ಕೊಂಡು ಇಲ್ಲ. ಒಂದೇ ಅಲ್ವಾ..? ಎರಡೇ ಅಲ್ವಾ..? ಅಥವಾ ಮೂರೋ, ನಾಲ್ಕೋ ಅನ್ಕೊಂಡು ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ತಿಲ್ಲ. ಅದ್ರಲ್ಲೂ ವಿಚಿತ್ರ ಅಂದ್ರೆ, ಕರ್ನಾಟಕವೇ, ಬ್ರಿಟನ್ ವೈರಸ್ನ ಹಾಟ್ ಸ್ಟಾಟ್ ಆಗ್ತಿರೋದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.
ಕೊರೋನಾ ವೈರಸ್ಗೆ ಇನ್ನೂ ಲಸಿಕೆ ಸಿಕ್ಕಿಲ್ಲ. ಇದ್ರ ಬೆನ್ನಲೇ, ಕೊರೋನಾ ರೂಪಾಂತರಿ ವೈರಸ್ ಅಟ್ಟಹಾಸ ಶುರು ಮಾಡಿದಂತೆ ಕಾಣ್ತಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ 6, ಶಿವಮೊಗ್ಗದಲ್ಲಿ 4 ಸೇರಿ ಕರ್ನಾಟಕದಲ್ಲೇ 10 ಬ್ರಿಟನ್ ವೈರಸ್ ಸೋಂಕಿತರು ಇದ್ದಾರೆ. ಇಡೀ ದೇಶದಲ್ಲಿರೋದು 29 ಬ್ರಿಟನ್ ವೈರಸ್ ಸೋಂಕಿತರು. ಇದರಲ್ಲಿ 10 ಮಂದಿ ಕರ್ನಾಟಕದಲ್ಲೇ ಇದ್ದಾರೆ ಅಂದ್ರೆ, ನಿಜಕ್ಕೂ ಭಯ ಪಡುವ ಸಂಗತಿ.
ಯಾಕಂದ್ರೆ, ಕೊರೋನಾ ಬಂದಾಗ ಮೊದಲ ಸಾವು ಕರ್ನಾಟಕದ ಗುಲ್ಬರ್ಗಾದಲ್ಲೇ ಆಗಿತ್ತು. ಆದಾದ್ಮೇಲೆ ಬೆಂಗಳೂರು ಸೇರಿ ಇಡೀ ರಾಜ್ಯಕ್ಕೆ ಹಬ್ಬಿ, ಮರಣ ಮೃದಂಗ ಬಾರಿಸಿತ್ತು. ಇದೀಗ ಬೆಂಗಳೂರು, ಶಿವಮೊಗ್ಗದಲ್ಲಿ ಬ್ರಿಟನ್ ವೈರಸ್ ಕಾಲಿಟ್ಟಿದ್ದು, ಮುಂದೆ ಏನು ಅನಾಹುತಕ್ಕೆ ದಾರಿ ಮಾಡುತ್ತೋ ಅನ್ನೋ ಆತಂಕ ಶುರುವಾಗಿದೆ. ಅಲ್ಲದೆ, ಇಡೀ ದೇಶದಲ್ಲಿ ಕರ್ನಾಟಕದಲ್ಲೇ ಅತೀ ಹೆಚ್ಚು ಕೇಸ್ಗಳು ಪತ್ತೆ ಆಗ್ತಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕರ್ನಾಟಕವೇ ಬ್ರಿಟನ್ ರೂಪಾಂತರ ವೈರಸ್ನ ಹಾಟ್ ಸ್ಟಾಪ್ ಆಗುತ್ತಾ ಅನ್ನೋ ಭಯ ಶುರುವಾಗಿದೆ.
ಅದೇನೇ ಆಗ್ಲಿ, ಕೊರೋನಾ ಇಲ್ಲ ಅಂತ ಎಚ್ಚರ ತಪ್ಪೋದು ಬೇಡ. ಹೊಸ ರೂಪಾಂತರ ವೈರಸ್ ಬಂದಿದೆ. ಹೀಗಾಗಿ, ನಮ್ಮ ಎಚ್ಚರಿಕೆಯಲ್ಲಿ ನಾವು ಇರ್ಬೇಕು. ಮೊದಲು ಪಾಲನೆ ಮಾಡ್ತಿದ್ದ ಕೋವಿಡ್ ನಿಯಮಗಳನ್ನ ತಪ್ಪದೇ ಪಾಲಿಸಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?