Featured
ಬ್ರಾಹ್ಮಣ ಸ್ನೇಹಿತನ ಸಂಸ್ಕಾರಕ್ಕೆ ಮುಸ್ಲಿಂ ಗೆಳೆಯನ ಮಗನಿಂದ ಕೇಶಮುಂಡನ : ನಿಜ ಧರ್ಮ ಪರಿಪಾಲನೆ
ಗುಜರಾತ್ / ರಾಜಕೋಟ್ : ಮೂವರು ಮುಸ್ಲಿಂ ಸ್ನೇಹಿತರು ಹಾಗೂ ಅವರ ಮಕ್ಕಳು ಬ್ರಾಹ್ಮಣನ ಶವಸಂಸ್ಕಾರವನ್ನ ಸಂಪ್ರದಾಯದಂತೆ ಮಾಡಿ ಇಡೀ ದೇಶಕ್ಕೆ ಬ್ರಾತೃತ್ವದ ಸಂದೇಶ ಸಾರಿದ್ದಾರೆ.
ಗುಜರಾತ್‌ನ ರಾಜಕೋಟ್ ನಿವಾಸಿ ನಾಸಿರ್, ಅಬು ಖುರೇಷಿ, ಜುಬೇರ್ ಎಂಬುವರಿಗೆ ಭಾನುಶಂಕರ್ ಪಾಂಡ್ಯ ಎಂಬಾತನ ಜೊತೆಗೆ ನಲವತ್ತು ವರ್ಷದ ಗೆಳೆತನ, ಇವರ ಮಕ್ಕಳೂ ಕೂಡ ಭಾನುಶಂಕರ್‌ನ್ನ ಅಜ್ಜ ಎಂದೇ ಕರೆಯುತ್ತಿದ್ದರು. ಹೀಗೆ ಇದ್ದ ಗೆಳೆತನಕ್ಕೆ ಭಾನುಶಂಕರ್ ಮೃತ್ಯು ಗರಬಡಿದಂತಾಯ್ತು.
ಭಾನುಶಂಕರ್ ಕೂಡ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರಿಂದ ಗೆಳೆಯರೆಲ್ಲಾ ಬ್ರಾಹ್ಮಣ ವಿಧಿವಿಧಾನದಂತೆ ಶವಸಂಸ್ಕಾರ ಮಾಡಲು ತೀರ್ಮಾನಿಸಿದರು. ಅದರಂತೆ ಜನಿವಾರ, ಧೋತಿಯನ್ನುಟ್ಟು ಸಂಸ್ಕಾರ ನೆರವೇರಿಸಿದರೆ ನಾಸಿರ್ ಮಗ ಅರ್ಮಾನ್ ಕೇಶಮುಂಡನ ಮಾಡಿಕೊಂಡು ಸಂಸ್ಕಾರದಲ್ಲಿ ಪಾಲ್ಗೊಂಡನು. ಭಾನುಶಂಕರ್ ಪಾಂಡ್ಯ ಅರ್ಮಾನ್‌ನನ್ನ ಮೊಮ್ಮಗ ಎಂದೇ ಕರೆಯುತ್ತಿದ್ದರಂತೆ, ಅದನ್ನ ನೆನೆದು ದು:ಖತಪ್ತನಾಗಿದ್ದ ಅರ್ಮಾನ್ ಕೂಡ ಅಜ್ಜನನ್ನ ಕಳೆದುಕೊಂಡಿದ್ದಾರೆ.
Continue Reading
Advertisement
You may like
Click to comment