Featured
ಬೇಸರ ಆಗಿದೆ, ಆದ್ರೆ ರಾಜೀನಾಮೆ ಕೊಟ್ಟಿಲ್ಲ : ಸಿಎಂ ಪುತ್ರನ ವರ್ಗಾವಣೆ ದಂಧೆ ಒಪ್ಪಿಕೊಂಡ್ರಾ ಶ್ರೀನಿವಾಸ ಪ್ರಸಾದ್.?

ಮೈಸೂರು/ಬೆಂಗಳೂರು : ರಾಜ್ಯ ಸರ್ಕಾರ ಮಾಡ್ತಿರೋ ಹಲವು ವರ್ಗಾವಣೆ ವಿಚಾರದಲ್ಲಿ ಶಾಸಕರು, ಸಂಸದರು ಅಸಮಾಧಾನ ಆಗಿರೋದು ಕೊನೆಗೂ ಬಹಿರಂಗವಾಗಿದೆ. ಅಲ್ಲದೆ, ವರ್ಗಾವಣೆ ವಿಚಾರದಲ್ಲಿ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಹಸ್ತಕ್ಷೇಪ ಮಾಡದತಿರೋ ಆರೋಪ ಕೇಳಿ ಬಂದಿದೆ. ಈ ಕುರಿತು ಮೈಸೂರಿನಲ್ಲಿ ಮಾತ್ನಾಡಿರೋ ಸಂಸದ ವಿ.ಶ್ರೀನಿವಾಸ ಪ್ರಸಾದ್,
ವರ್ಗಾವಣೆ ವಿಚಾರದಲ್ಲಿ ಗೊಂದಲಗಳು ಸಹಜ. ಯಾರೋ ಹಸ್ತಕ್ಷೇಪ ಮಾಡುತ್ತಾರೆ ಎನ್ನುವುದಾದರೆ ಸಿಎಂ ಗಮನ ಹರಿಸಬೇಕು. ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಬೇಕು. ವರ್ಗಾವಣೆ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯಬೇಕು ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಾನು ಹಿರಿಯ ಮುಖಂಡ. ಯಾವಾಗ ಏನು ಮಾಡಬೇಕು ಅಂತ ನನಗೆ ಗೊತ್ತಿದೆ. ಅಷ್ಟನ್ನೂ ಅರ್ಥ ಮಾಡಿಕೊಳ್ಳದೇ ಇದ್ದರೆ ನನ್ನ ಹಿರಿತನಕ್ಕೆ ಏನು ಬೆಲೆ ಇದೆ ಎಂದು ಪ್ರಶ್ನೆ ಮಾಡಿದ್ದಾರೆ.
ಇಷ್ಟೇ ಅಲ್ಲದೆ, ರಾಜಕಾರಣಿಗಳಿಗೆ ದಿನ ಬೆಳಗಾದರೆ ಹಂಗು ಇರುತ್ತವೆ. ವರ್ಗಾವಣೆಗಾಗಿ ಪತ್ರ ಹೋಗಿರಬಹುದು. ಆದರೆ ರಾಜೀನಾಮೆ ವಿಚಾರ ಕೇವಲ ವದಂತಿ ಎಂದು ಸ್ಪಷ್ಟನೆ ನೀಡಿದ್ರು. ರಾಜಕಾರಣಿ ಅಂದ ಮೇಲೆ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸ್ಸು ಮಾಡುವುದು ಸಹಜ. ದಿನ ಬೆಳಗಾದರೆ ಒಂದಷ್ಟು ಜನ ಬರ್ತಾರೆ. ನಮಗೆ ಬೇಕಾದ ಅಧಿಕಾರಿ ಹಾಕಿಸಿಕೊಡಿ ಅಂತ ಕೇಳುತ್ತಾರೆ. ನಾವು ಇಲ್ಲ ಅನ್ನೋದಕ್ಕೆ ಆಗಲ್ಲ. ಆಶಾ ಪರ್ವೀನ್ ಅವರ ವರ್ಗಾವಣೆಗೆ ಸಿಎಂಗೆ ಮನವಿ ಮಾಡಿದ್ದೇನೆ. ಕೆಲಸ ಆಗಿಲ್ಲ, ಆಗಲೇಬೇಕು ಅಂತಾನೂ ಇಲ್ಲ. ಅಸಮಾಧಾನಗಳು ಇರುತ್ತವೆ ಅಂದ ಮಾತ್ರಕ್ಕೆ ಏನೇನೋ ನಿರ್ಧಾರ ತೆಗೆದುಕೊಳ್ಳೋದಕ್ಕೆ ಸಾಧ್ಯವೇ ಎಂದಿದ್ದಾರೆ. ಸುಮ್ಮನೆ ರಾಜೀನಾಮೆ ವದಂತಿ ಹಬ್ಬಿಸಲಾಗಿದೆ. ಆದರೆ ಸಿಎಂ ಜತೆ ನಾನು ನಿನ್ನೆಯಷ್ಟೇ ಮಾತನಾಡಿದ್ದೇನೆ ಎಂದರು.
ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹಾಗೂ ಅಳಿಯ ಶಾಸಕ ಹರ್ಷವರ್ಧನ್ ರಾಜೀನಾಮೆ ನೀಡ್ತಾರೆ ಎಂದು ಸುದ್ದಿಯಾಗುತ್ತು. ಸಿಎಂ ಪುತ್ರ ವಿಜಯೇಂದ್ರ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?