Connect with us

Uncategorized

ಬೆಂಗಳೂರಲ್ಲಿ ನೋಡಲೇಬೇಕಾದ ಸ್ಥಳಗಳು

ಬೆಂಗಳೂರಲ್ಲಿ ನೋಡಲೇಬೇಕಾದ ಸ್ಥಳಗಳು : ಮಕ್ಕಳಂತೂ ಮಿಸ್​ ಮಾಡುವಂತಿಲ್ಲ..!

ಬೆಂಗಳೂರು : ಉದ್ಯಾನನಗರಿ, ಸಿಲಿಕಾನ್​ ಸಿಟಿ, ಐಟಿ ಸಿಟಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ  ಮಕ್ಕಳು ನೋಡುವಂತಹದ್ದು ಏನಿದೆ..? ಸಾಮಾನ್ಯವಾಗಿ ಬೆಂಗಳೂರು ಅಂದ್ರೆ ಅದೇ ವಿಧಾನಸೌಧ, ಹೈಕೋರ್ಟ್​​, ಮೆಜೆಸ್ಟಿಕ್​ ಅನ್ನೋ ಮಾತಿದೆ. ಆದ್ರೆ, ಮಕ್ಕಳಿಗೆ ರಜೆಯ ಮಜಾ ಜೊತೆಗೆ ಪಾಠವನ್ನೂ ಹೇಳಿಕೊಡುವ ಸಾಕಷ್ಟು ಸ್ಥಳಗಳು ನಮ್ಮ ಬೆಂಗಳೂರಿನಲ್ಲಿವೆ. ಅಂಥಹ ಸ್ಥಳಗಳ ಪರಿಚಯವನ್ನು ನಾವು ಮಾಡಿಸ್ತೀವಿ ನೋಡಿ..

ಕಬ್ಬನ್​ ಪಾರ್ಕ್​​

ಕಬ್ಬನ್​ ಪಾರ್ಕ್​ ಕೇವಲ ಯುವಕರಿಗೆ, ಯುವತಿಯರಿಗೆ ಮಾತ್ರ ಅನ್ಕೋಬೇಡಿ. ಇಲ್ಲಿ ವಿವಿಧ ಜಾತಿಯ ಮರಗಳಿವೆ. ಮರಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಿ. ಮರಗಳಿಂದ ಏನೆಲ್ಲಾ ಪ್ರಾಯೋಜನ ಅನ್ನೋದನ್ನ ಕಬ್ಬನ್​ ಪಾರ್ಕ್​​ನಲ್ಲಿ ಹೇಳಬಹುದು. ಅಲ್ಲದೆ, ಮಕ್ಕಳು ಇಷ್ಟಪಡುವ ಯಾವುದೇ ಆಟ ಆಡಲು ಜಾಗವಿದೆ. ತಣ್ಣನೆಯ ವಾತಾವರಣ ಇದೆ.

Advertisement

ಬಾಲ ಭವನ

ಕಬ್ಬನ್​ ಪಾರ್ಕ್​ನಲ್ಲೇ ಇರುವ, ಮಕ್ಕಳಿಗೆ ಆಟ-ಪಾಠದ ಜೊತೆ ಮಸ್ತ್​ ಮಜಾ ನೀಡುವ ಸ್ಥಳ ಅಂದ್ರೆ ಬಾಲ ಭವನ. ಇಲ್ಲಿ ಪುಟಾಣಿ ರೈಲಿದೆ. ಓಪನ್ ಥಿಯೇಟರ್​ ಇದೆ. ಆಟ ಆಡಲು ವಿವಿಧ ಗೇಮ್​ಗಳಿವೆ. ನಾಟಕ, ನೃತ್ಯ ಮಾಡಲು, ನೋಡಲು ಅವಕಾಶ ಇದೆ. ತಿಂಡಿ-ಊಟಕ್ಕೆ ಹೊಟೇಲ್​ ಕೂಡ ಇದೆ. ಜಾರಾ ಬಂಡಿ ಇದೆ, ಉಯ್ಯಾಲೆಯೂ ಇದೆ.. ಇಲ್ಲಿ ಎಲ್ಲವೂ ಇದೆ.. ಮಕ್ಕಳಿಗೆ ಮಿಸ್​ ಮಾಡದೇ ತೋರಿಸಲೇಬೇಕಾದ ಸ್ಥಳ ಬಾಲ ಭವನ.

ಮ್ಯೂಸಿಯಂ.. ಅಕ್ವೇರಿಯಂ.. ವೆಂಕಟಪ್ಪ ಆರ್ಟ್​ ಗ್ಯಾಲರಿ

ಬೆಂಗಳೂರಲ್ಲಿ ಒಂದೇ ಕಡೆ ಈ ಮೂರು ಅದ್ಭುತಗಳನ್ನ ಮಕ್ಕಳಿಗೆ ತೋರಿಸಬಹುದು. ಕಬ್ಬನ್​ ಪಾರ್ಕ್​ ನೋಡಿಕೊಂಡು, ಬಾಲ ಭವನ ತೋರಿಸಿ ಅಲ್ಲೇ ಪಕ್ಕದಲ್ಲಿರೋ ಕಸ್ತೂರಿ ಬಾ ರಸ್ತೆಗೆ ಬಂದ್ರೆ, ಮ್ಯೂಸಿಯಂ, ವೆಂಕಟಪ್ಪ ಆರ್ಟ್​ ಗ್ಯಾಲರಿ ಹಾಗೂ ಅಕ್ವೇರಿಯಂ ಸಿಗುತ್ತೆ.

ಮ್ಯೂಸಿಯಂ ನೋಡಲು ಕನಿಷ್ಠ ಎರಡು ಗಂಟೆಯಾದರೂ ಬೇಕು. ಅಷ್ಟೊಂದು ಅದ್ಭುತವಾಗಿದೆ ಮ್ಯೂಸಿಯಂ. ವಿಮಾನ ಹಾರಾಟ ಆರಂಭವಾಗಿದ್ದು ಹೇಗೆ ಎಂಬುದರಿಂದ ಹಿಡಿದು, ನಕ್ಷತ್ರಗಳು, ಗ್ರಹಗಳು, ತಾರಾಮಂಡಲವನ್ನೆಲ್ಲಾ ಈ ಮ್ಯೂಸಿಯಂನಲ್ಲಿ ನೋಡಬಹುದು. ಮಕ್ಕಳು ಆಟ ಕೂಡ ಆಡಬಹುದು.

Advertisement

ಪಕ್ಕಲ್ಲೇ ವೆಂಕಟಪ್ಪ ಆರ್ಟ್​ ಗ್ಯಾಲರಿ ಇದ್ದು, ಅದರಲ್ಲೂ ಒಂದು ರೌಂಡ್​ ಸುತ್ತಬಹುದು. ಇನ್ನೂ ಮಕ್ಕಳು ತುಂಬಾ ಇಷ್ಟಪಡುವ ಮೀನುಗಳನ್ನ ನೋಡಲು ಅಕ್ವೇರಿಯಂಗೆ ಹೋಗಲೇಬೇಕು. ಸರ್ಕಾರಿ ಅಕ್ವೇರಿಯಂ ಆಗಿದ್ದು, ವಿವಿಧ ರೀತಿಯ ಮೀನುಗಳನ್ನ ನೋಡಬಹುದು. ಕಲರ್ ಕಲರ್​ ಮೀನುಗಳನ್ನ ನೋಡ್ತಿದ್ದರೆ ಮಕ್ಕಳ ಖುಷಿಗೆ ಪರಾವೇ ಇರೋದಿಲ್ಲ.

ವಿಧಾನಸೌಧ.. ಹೈಕೋರ್ಟ್​​..

ಬೆಂಗಳೂರಿಗೆ ಬಂದ್ಮೇಲೆ ವಿಧಾನಸೌಧ ಹಾಗೂ ಹೈಕೋರ್ಟ್​ ನೋಡಲೇಬೇಕು. ಒಳಗೆ ಹೋಗದೇ ಇದ್ರೂ, ಹೊರಗಡೆಯಿಂದಲೇ ಮಕ್ಕಳಿಗೆ ತೋರಿಸಿದ್ರೆ ಸಾಕು. ಅದರ ಮಹಿಮೆ, ಇತಿಹಾಸವನ್ನ ಮಕ್ಕಳಿಗೆ ತಿಳಿಸಿದ್ರೆ ಖಂಡಿತ ಖುಷಿ ಆಗ್ತಾರೆ.

ಲಾಲ್​ಭಾಗ್​​

ಕಬ್ಬನ್​ ಪಾರ್ಕ್​​ನಲ್ಲಿ ಎಷ್ಟು ವೈವಿಧ್ಯಮ ಜಗತ್ತು ಇದೆಯೋ, ಅಷ್ಟೇ ವೈವಿಧ್ಯಮಯ ಜಗತ್ತು ಲಾಲ್​ಭಾಗ್​ನಲ್ಲಿದೆ. ಜೀವ ವೈವಿಧ್ಯಮಯ ಸಸ್ಯಗಳು, ಮರಗಳು ಇಲ್ಲಿವೆ. ವಿಶೇಷವಾಗಿ ಗಾಜಿನ ಮನೆ ಇದೆ. ಬೆಟ್ಟ ಇದೆ, ಕೆರೆ ಇದೆ, ಆಟ ಆಡೋಕೆ ಜಾಗವಿದೆ. ವಿಶ್ರಾಂತಿಗೂ ಜಾಗವಿದೆ. ವೀಕೆಂಡ್​ನಲ್ಲಿ ಬೆಂಗಳೂರಿಗೆ ಬಂದ್ರೆ ಲಾಲ್​ಭಾಗ್​ ಮಿಸ್​ ಮಾಡದೇ ನೋಡಬೇಕು. ಅದ್ರಲ್ಲೂ ಜನವರಿ ರಿಪಬ್ಲಿಕ್​ ಡೇ ಹಾಗೂ ಆಗಸ್ಟ್​​ನ ಸ್ವಾತಂತ್ರೋತ್ಸವ ಸಮಯದಲ್ಲಿ ಲಾಲ್​ಭಾಗ್​ ನೋಡಲು ಎರಡೂ ಕಣ್ಣು ಸಾಲದು.

Advertisement

ಬೆಂಗಳೂರು ಅರಮನೆ

ಬೆಂಗಳೂರಿಗೆ ಬಂದ್ಮೇಲೆ ಅರಮನೆ ನೋಡಲೇಬೇಕು. ತುಂಬಾ ಸಲ ಕೇಳಿರ್ತೀವಿ, ಅರಮನೆ ರಸ್ತೆ, ಅರಮನೆ ಮೈದಾನ ಅಂತ. ಆದ್ರೆ, ಬೆಂಗಳೂರಿಗೆ ಬಂದಾಗ ಬೆಂಗಳೂರು ಅರಮನೆ ನೋಡಿದರೆ ಚೆಂದ. ಯಾಕಂದ್ರೆ, ಭಾರತದಲ್ಲಿ ಇರುವ ಕೆಲವೇ ಕೆಲವು ಅರಮನೆಗಳಲ್ಲಿ ಅತ್ಯಂತ ಸುಂದರ ಹಾಗೂ ಇನ್ನೂ ಜೀವಂತ ಅಂದ್ರೆ ಕ್ರೀಯಾಶೀಲವಾಗಿರುವ ಅರಮನೆ ಅಂದ್ರೆ ಬೆಂಗಳೂರು ಅರಮನೆ.

ಟಿಪ್ಪು ಅರಮನೆ

ಬೆಂಗಳೂರು ಅರಮನೆಯಂತೆಯೇ ಟಿಪ್ಪು ಅರಮನೆ ಕೂಡ ನಾವು ನೋಡಬಹುದು. ಮಾರ್ಕೆಟ್​ ಸಮೀಪ ಈ ಅರಮನೆ ಇದ್ದು, ಒಮ್ಮೆ ನೋಡಿದ್ರೆ ಖುಷಿ ಆಗೋದಕ್ಕೂ ಗ್ಯಾರೆಂಟಿ.

ಬನ್ನೇರುಘಟ್ಟ

Advertisement

ಪ್ರಾಣಿ ಪ್ರಿಯರು, ಪರಿಸರ ಪ್ರೇಮಿಗಳು, ಮಕ್ಕಳಂತೂ ನೋಡಲೇಬೇಕು. ಬನ್ನೇರುಘಟ್ಟ ಬೆಂಗಳೂರಿನ ಹೊರವಲಯದಲ್ಲಿ ಇದ್ರೂ, ಒಮ್ಮೆ ನೋಡಿದ್ರೆ ಚೆಂದ. ಅದ್ರಲ್ಲೂ ಮಕ್ಕಳು ಇಲ್ಲಿನ ಝೂ ನೋಡಬೇಕು. ಬೆಂಗಳೂರಿನ ಜನ ಅಥವಾ ಯಾರೇ ಆಗಲಿ ಝೂ ನೋಡೋಕೆ ಮೈಸೂರಿಗೇ ಹೋಗಬೇಕಿಲ್ಲ. ಬೆಂಗಳೂರಿನ ಬನ್ನೇರುಘಟ್ಟಗೆ ಹೋದ್ರೂ ಅಲ್ಲಿ ಝೂ ಇದೆ. ಇಲ್ಲಿ ವಿವಿಧ ರೀತಿ, ಜಾತಿಯ ಹಕ್ಕಿಗಳೂ ಇವೆ. ಹಾವುಗಳಿವೆ.. ಎಲ್ಲಕ್ಕಿಂತ ಹೆಚ್ಚಾಗಿ ಸಫಾರಿ ಇದೆ..

ಬನ್ನೇರುಘಟ್ಟ ಸಫಾರಿ

ಝೂ ಅಂದ್ರೆ, ಕಾಡು ಪ್ರಾಣಿಗಳನ್ನ ಬೋನಿನಲ್ಲಿ ಇಟ್ಟಿರ್ತಾರೆ. ಆದ್ರೆ, ಕಾಡಿನಲ್ಲೇ ನೋಡುವ ಮಜಾನೇ ಬೇರೆ. ಅದ್ರಂತೆ, ಬನ್ನೇರುಘಟ್ಟದಲ್ಲಿ ಓಪನ್ ಸಫಾರಿ ಇದೆ. ಅಂದ್ರೆ, ಹುಲಿ, ಸಿಂಹ, ಕರಡಿ, ಚಿರತೆ ಸೇರಿದಂತೆ ಹಲವು ಕಾಡು ಪ್ರಾಣಿಗಳನ್ನ ಕಾಡಿನಲ್ಲೇ ಬಿಟ್ಟಿದ್ದಾರೆ. ಅರಣ್ಯ ಇಲಾಖೆ ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಿದ್ದು, ಪ್ರವಾಸಿಗರು ಸಫಾರಿ ಹೋದ್ರೆ ಅದ್ಭುತ ಪ್ರಪಂಚವನ್ನೇ ಕಣ್ತುಂಬಿಕೊಳ್ಳಬಹುದು.

ಸೋ, ಬೆಂಗಳೂರಿನವರು.. ಬೆಂಗಳೂರಿಗೆ ಬಂದವರೂ, ಬರುವವರು ಈ ಸ್ಥಳಗಳನ್ನ ಮಿಸ್ ಮಾಡದೇ ನೋಡಿ.. ಮಕ್ಕಳಿಗಂತೂ ತೋರಿಸೋದನ್ನ ಮರೆಯಲೇಬೇಡಿ..

Advertisement
Continue Reading
Advertisement
Click to comment

Leave a Reply

Your email address will not be published. Required fields are marked *

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ