Featured
ಬಿಜೆಪಿ ಬಂಡಾಯ ಎಲ್ಲಿಗೆ ಬರುತ್ತೆ..? ಎರಡನೇ ಹಂತದಲ್ಲೂ ಇವರಿಗೆ ಮಂತ್ರಿಗಿರಿ ಸಿಗಲ್ಲ..!
ಬೆಂಗಳೂರು : ಬಿಜೆಪಿಯ ಬಹಳಷ್ಟು ಶಾಸಕರಿಗೆ ನಿರಾಸೆ ಆಗಿದೆ. ಅದರಲ್ಲೂ ಯಡಿಯೂರಪ್ಪ ಆಪ್ತರು ಎನಿಸಿಕೊಂಡ ಶಾಸಕರಿಗೂ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ಸಚಿವ ಸ್ಥಾನ ವಂಚಿತ ಕೆಲವು ಶಾಸಕರು ಬಹಿರಂಗವಾಗಿ ಹೇಳಿಕೆ ನೀಡ್ತಿದ್ರೆ, ಮತ್ತೆ ಕೆಲವ್ರು ತುಟಿ ಬಿಚ್ಚುತ್ತಿಲ್ಲ. ಆದರೂ, ಬೆಂಬಲಿರ ಮೂಲಕ ಆಕ್ರೋಶವನ್ನ ಹೊರಹಾಕಿಸ್ತಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದು, ಒಬ್ಬರಿಗೂ ಮಂತ್ರಿ ಭಾಗ್ಯ ಸಿಕ್ಕಿಲ್ಲ. ದಾವಣಗೆರೆ ಶಾಸಕ ರವೀಂದ್ರನಾಥ್, ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಂತ್ರಿಗಿರಿ ರೇಸ್ನಲ್ಲಿದ್ರು. ಆದ್ರೆ, ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಇತ್ತ ಮೈಸೂರಿನ ರಾಮದಾಸ್ ಮಂತ್ರಿ ಆಗಿಯೇ ಬಿಟ್ರು ಅನ್ಕೊಂಡಿದ್ರು. ಅವರಿಗೂ ಮಿಸ್ ಆಯ್ತು.
ಬೆಳಗಾವಿಯ ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿ ಸ್ಥಾನ ಮಿಸ್ ಆಗೋದಿಲ್ಲ ಅಂತ ಭಾವಿಸಲಾಗಿತ್ತು. ಎಲ್ಲವೂ ಉಲ್ಟಾ ಆಗಿದೆ. ಬೆಳಗಾವಿಯ ಪ್ರಮುಖ ಲೀಡರ್ಗಳಿಗೇ ಮಂತ್ರಿ ಸ್ಥಾನ ಸಿಕ್ಕಿಲ್ಲ.
ಚಿತ್ರದುರ್ಗದಲ್ಲಿ ತಿಪ್ಪೇಸ್ವಾಮಿ, ಹಿರಿಯೂರಿನ ಪೂರ್ಣಿಮಾ ಹೆಸರು ಕೂಡ ಮಂತ್ರಿ ಸ್ಥಾನಕ್ಕೆ ಕೇಳಿ ಬಂದಿತ್ತು. ಕೊನೇ ಕ್ಷಣದಲ್ಲಿ ಮಿಸ್ ಆಗಿದೆ ಅನ್ನೋ ಮಾತು ಕೇಳಿ ಬರ್ತಿದೆ. ಕೊಡಗಿನ ಅಪ್ಪಚ್ಚು ರಂಜನ್ ಹಾಗೂ ಬೋಪಯ್ಯ ಇಬ್ಬರೂ ಆಕಾಂಕ್ಷಿಗಳಾಗಿದ್ರು. ಇಬ್ಬರಿಗೂ ಮಂತ್ರಿ ಭಾಗ್ಯ ಸಿಗಲಿಲ್ಲ.
ಎರಡನೇ ಹಂತದಲ್ಲಿ ಇವರು ಮಂತ್ರಿಯಾಗೋದು ಕೂಡ ಡೌಟು. ಯಾಕಂದ್ರೆ, ಅನರ್ಹ ಶಾಸಕರಿಗೆ ಉಳಿದ ಮಂತ್ರಿ ಸ್ಥಾನಗಳನ್ನ ನೀಡಬೇಕಾಗುತ್ತೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?