Featured
ಬಾಲಕಿ ಕತ್ತು ಸೀಳಿದ ಗಾಳಿಪಟ ದಾರ : ಖುಷಿಯಿಂದ ತಂದೆ ಬೈಕ್ನಲ್ಲಿ ಹೋಗುತ್ತಿದ್ದಾಗ ಹಾರಿ ಹೋಯ್ತು ಪ್ರಾಣ..!
![](https://risingkannada.com/wp-content/uploads/2019/08/kit-2.jpg)
ನವದೆಹಲಿ : ಜೀವನದಲ್ಲಿ ಏನು ಬೇಕಾದರೂ ಆಗಬಹುದು ಅನ್ನೋದಕ್ಕೆ ಈ ದುರಂತ ಘಟನೆ ಸಾಕ್ಷಿ. ತಂದೆಯ ಬೈಕಿನಲ್ಲಿ ಖುಷಿ ಖುಷಿಯಾಗಿ ಹೋಗ್ತಿದ್ದ ವೇಳೆ ಇದ್ದಕ್ಕಿದ್ದಂತೆ ಪುಟ್ಟ ಬಾಲಕಿಯ ಪ್ರಾಣ ಪಕ್ಷಿಯೇ ಹಾರಿಹೋಗಿದೆ. ಇದಕ್ಕೆ ಕಾರಣವಾಗಿದ್ದು ಗಾಳಿಪಟಕ್ಕೆ ಬಳಸುವ ಮಾಂಜಾ ದಾರ..
ಹೌದು, ಇದು ಅಚ್ಚರಿಯಾದರೂ ಸತ್ಯ. ಈ ದಾರುಣ ಘಟನೆ ನಡೆದಿರೋದು ದೆಹಲಿಯಲ ಛಜೂರಿ ಖಾಸ್ ಪ್ರದೇಶದಲ್ಲಿ.
ಇಷ್ಟಕ್ಕೂ ಆಗಿದ್ದೇನು ಗೊತ್ತಾ..?
ಐದು ವರ್ಷದ ಬಾಲಕಿ ಇಷಿಕಾ, ತನ್ನ ತಂದೆ ಜೊತೆ ದೆಹಲಿಯ ಜಮುನಾ ಬಜಾರ್ ರಸ್ತೆಯಲ್ಲಿರೋ ಹನುಮಾನ್ ದೇವಾಲಯಕ್ಕೆ ಹೋಗ್ತಿದ್ರು. ತಂದೆಯ ಬೈಕಿನಲ್ಲಿ ಇಷಿಕಾ ಖುಷಿ ಖುಷಿಯಾಗಿ ಹೋಗಿದ್ದಳು. ಈ ವೇಳೆ, ಎಲ್ಲಿಂದಲೋ ಹಾರಿ ಬಂದ ಗಾಳಿಪಟದ ದಾರ, ಬಾಲಕಿಯ ಕುತ್ತಿಗೆಯನ್ನೇ ಸೀಳಿದೆ. ತಕ್ಷಣ ಇಷಿಕಾಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದ್ರೆ, ಅಷ್ಟೊತ್ತಿಗಾಗ್ಲೇ ಬಾಲಕಿ ಇಷಿಕಾಳ ಪ್ರಾಣವೇ ಹಾರಿಹೋಗಿತ್ತು.
ಇಷಿಕಾ ತಂದೆಯ ಬೈಕ್ನಲ್ಲಿ ಮುಂದೆ ಕುಳಿತುಕೊಂಡಿದ್ದಳು. ಇಷಿಕಾ ಜೊತೆ ಮತ್ತೊಬ್ಬ ಸಹೋದರಿ ಕೂಡ ಬೈಕಿನಲ್ಲಿ ಇದ್ದರು ಎನ್ನಲಾಗಿದೆ. ನಿರ್ಲಕ್ಷ್ಯದಿಂದ ಸಾವು ಎಂಬ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಆದ್ರೆ,ಯಾರೋ ಮಾಡಿದ ತಪ್ಪಿಗೆ ಪುಟ್ಟ ಬಾಲಕಿ ಬಲಿಯಾಗಿದ್ದು ಮಾತ್ರ ದಾರುಣ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?