Featured
ಬಹುಮುಖ ಪ್ರತಿಭೆ, ಅಪರೂಪದ ರಾಜಕಾರಣಿ ಅರುಣ್ ಜೇಟ್ಲಿ ಅಸ್ತಂಗತ
ನವದೆಹಲಿ: ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ಹಣಕಾಸು ಖಾತೆಯ ಮಾಜಿ ಸಚಿವ ಅರುಣ್ ಜೇಟ್ಲಿ ( ೬೬) ಇಂದು ನಿಧನರಾಗಿದ್ದಾರೆ. ಅಪರೂಪದ ರಾಜಕಾರಣಿಯ ಕಣ್ಮರೆಯಿಂದ ಹಳೆ ತಲೆಮಾರಿನ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ. ೨೦೧೪ರಿಂದ ೨೦೧೯ರವರೆಗೆ ಕೇಂದ್ರ ವಿತ್ತ ಸಚಿವರಾಗಿದ್ದ ಜೇಟ್ಲಿ ಹಣಕಾಸು, ರಾಷ್ಟ್ರೀಯ ಭದ್ರತೆ, ವಾಣಿಜ್ಯ, ಕಾನೂನು ಹೀಗೆ ಎಲ್ಲಾ ವಿಷಯಗಳಲ್ಲೂ ಪರಿಣತರಾಗಿದ್ದವರು. ಸುಪ್ರೀಂಕೋರ್ಟ್‌ನ ಹಿರಿಯ ವಕೀಲರೂ ಆಗಿದ್ದ ಜೇಟ್ಲಿ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಈ ಕಾರಣದಿಂದಲೇ ಈಬಾರಿಯ ಮೋದಿ ಕ್ಯಾಬಿನೆಟ್ ಗೆ ಸೇರ್ಪಡೆಯಾಗಿರಲಿಲ್ಲ.
ಬಾಲ್ಯದ ಜೀವನ:
ವಕೀಲ ಕಿಶೆನ್ ಜೇಟ್ಲಿ ಹಾಗೂ ರತನ್ ಪ್ರಭಾ ದಂಪತಿ ಮಗನಾದ ಅರುಣ್ ಜನ್ಮಿಸಿದ್ದು ೧೯೫೨ರಲ್ಲಿ, ಎಲ್ ಎಲ್ ಬಿವರೆಗೂ ದೆಹಲಿಯಲ್ಲೇ ವ್ಯಾಸಂಗ ಮಾಡಿದರು. ೧೯೭೫ರಿಂದ೭೭ರವರೆಗೆ ಆಂತರಿಕ ತುರ್ತುಪರಿಸ್ಥಿತಿ ಘೋಷಣೆಯಾದಗ ಪ್ರತಿಭಟಿಸಿ ಜೈಲು ಸೇರಿದ್ದರು, ೧೯೭೩ರಲ್ಲಿ ರಾಜ್ ನಾರಾಯಣ್ ಹಾಘೂ ಜಯಪ್ರಕಾಶ್ ನಾರಾಯಣ್ ಜತೆ ಸೇರಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ರು, ಜನಸಂಘಕ್ಕೆ ಸದಸ್ಯರಾಗಿ ರಾಜಕಾರಣಕ್ಕೆ ಪದಾರ್ಪಣೆ ಮಾಡಿದರು. ದೆಹಲಿ ಎಬಿವಿಪಿ ಘಟಕದಿಂದ ಮೇಲ್ ಸ್ತರಕ್ಕೆ ಏರುತ್ತಾ ೧೯೮೦ರಲ್ಲಿ ಬಿಜೆಪಿ ಕಾರ್ಯಕರ್ತರಾದರು.
ಅಸಮಾನ್ಯ ಪ್ರತಿಭೆಯ ರಾಜಕಾರಣಿ ಜೇಟ್ಲಿ ಬೋಫೋರ್ಸ್ ಹಗರಣ ಸೇರಿ ಅನೇಖ ಪ್ರಕರಣಗಳನ್ನ ಹೊರಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ, ೧೯೯೧ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ, ೧೯೯೯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಕ್ತಾರರಾಗಿ ಸೇವೆ ಸಲ್ಲಿಸಿದ್ದರು. ಎನ್ ಡಿ ಎ ಯಿಂದ ವಾಜಪೇಯಿ ಪ್ರಧಾನಿಯಾದಾಗ ಇವರಿಗೆ ಮಾಹಿತಿ ಹಾಗೂ ಪ್ರಸಾರ ಇಲಾಖೆ ಖಾತೆ ನೀಡಲಾಗಿತ್ತು, ನಂತರ ಕಾನೂನು ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವರಾಗಿ ನೇಮಕ, ಸಾಗರೊತ್ತರ ಖಾತೆ ಸಚಿವ ( ಹೆಚ್ಚುವರಿ)ಯಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನ ನಿರ್ವಹಿಸಿದ್ದರು.
ಅರುಣ್ ಜೇಟ್ಲಿ ಜಮ್ಮು ಕಾಶ್ಮೀರದ ವಿತ್ತ ಸಚಿವರಾಗಿದ್ದ ಗಿರ್ದಾರಿ ಡೋಗ್ರಾರ ಮಗಳು ಸಂಗೀತರನ್ನ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ, ಅವರೂ ಕೂಡ ವಕೀಲಿ ವೃತ್ತಿಯಲ್ಲಿದ್ದಾರೆ. ೨೦೧೮ರಲ್ಲಿ ಅರುಣ್ ಜೇಟ್ಲಿಗೆ ಕಿಡ್ನಿ ಸಂಬಂಧಿಸಿದ ರೋಗ ಬಾಧಿಸುತ್ತಿತ್ತು, ಏಮ್ಸ್ ನಲ್ಲೇ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು, ಡಯಾಬಿಟಿಸ್ ಜೊತೆಗೆ ಸಾಫ್ಟ್ ಟಿಶ್ಯೂ ಸರ್ಕೋಮ ಎಂಬ ವಿರಳ ಖಾಯಿಲೆ ಇನ್ನಷ್ಟು ಬಾಧಿಸಿತು.
ಗಣ್ಯರಿಂದ ಸಂತಾಪ