ನವದೆಹಲಿ: ಫೇಸ್ಬುಕ್ನಿಂದ ಸೈಬರ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸುಪ್ರೀಂಕೋರ್ಟ್ ಪುನಃ ಫೇಸ್ಬುಕ್ಗೆ ಆಧಾರ್ ನಂಬರ್ ಲಿಂಕ್ ಮಾಡುವ ಕೆಲಸವನ್ನ ಶುರುಮಾಡಲು ಬೇಗ ನಿರ್ಧರಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟಿದೆ.
ಈ ಕುರಿತು ಜಸ್ಟೀಸ್ ದೀಪಕ್ ಗುಪ್ತಾರನ್ನೊಳಗೊಂಡ ಬೆಂಚ್ ಶುಕ್ರವಾರ ಅಭಿಪ್ರಾಯ ತಿಳಿಸಿದ್ದು, ಬಾಂಬೆ, ಮದ್ರಾಸ್ ಹೈಕೋರ್ಟ್ಗಳಲ್ಲಿ ಇದಕ್ಕೆ ಸಂಬಂಧಪಟ್ಟ ಪ್ರಕರಣಗಳಿವೆ, ಆಧಾರ್ ಲಿಂಕ್ ಮಾಡುವ ನಿರ್ಧಾರ ಬೇಗನೇ ಆಗಬೇಕಿದೆ ಎಂದು ತಿಳಿಸಿದೆ.