Featured
ಫೀಲ್ಡ್ಗೆ ಇಳಿದ SP ರವಿ D. ಚೆನ್ನಣ್ಣನವರ್ : ಕ್ಯಾಟ್ ಫಿಶ್ ಹೊಂಡಗಳ ತೆರವು
ಹೊಸಕೋಟೆ/ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ, ಅದರಲ್ಲೂ ಹೊಸಕೋಟೆ ಹಾಗೂ ದೇವನಹಳ್ಳಿ ತಾಲೂಕಿನಲ್ಲಿರೋ ಅಕ್ರಮ ಕ್ಯಾಟ್ ಫಿಶ್ ಹೊಂಡಗಳ ತೆರವು ಕಾರ್ಯಾಚರಣೆ ಜೋರಾಗಿಯೇ ನಡೆದಿದೆ. ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿರೋ ರವಿ.ಡಿ.ಚೆನ್ನಣ್ಣನವರ್, ನಂದಗುಡಿ, ಬೈಲನರಸಾಪುರ, ಎನ್.ಹೊಸಹಳ್ಳಿ, ಗದ್ದಲಹಳ್ಳಿ ಸುತ್ತುಮತ್ತ ದಾಳಿ ನಡೆಸಿದ್ರು. ಅಕ್ರಮವಾಗಿ ನಿಷೇಧಿತ ಕ್ಯಾಟ್ ಫಿಶ್ ಹೊಂಡಗಳನ್ನ ತೆರವು ಮಾಡಿಸಿದ್ರು.
ಸದ್ಯ ಹೊಸಕೋಟೆ ಹಾಗೂ ದೇವನಹಳ್ಳಿ ಸುತ್ತುಮುತ್ತ ಕ್ಯಾಟ್ ಫಿಶ್ ಜೊತೆಗೆ ಮರಳು ಮಾಫಿಯಾ ಕೂಡ ದೊಡ್ಡ ಮಟ್ಟದಲ್ಲಿದೆ. ಈ ರೀತಿಯ ದಾಳಿಗಳು ಅವಶ್ಯಕವಾಗಿ ನಡೆಯಲೇಬೇಕಾದ ಪರಿಸ್ಥಿತಿ ಇದೆ. ಸದ್ಯ ಹೊಸದಾಗಿ ಬಂದಿರೋ ರವಿ ಚೆನ್ನಣ್ಣನವರ್, ದಾಳಿ ಶುರು ಮಾಡಿದ್ದಾರೆ. ಇದು ಹೀಗೆ ಮುಂದುವರಿದ್ರೆ, ಉತ್ತಮ ಅನ್ನೋದು ಜನರ ಅಭಿಪ್ರಾಯ.
ಕಾರ್ಯಾಚರಣೆಯಲ್ಲಿ ತಾಲೂಕು ಆಡಳಿತ, ಜಿಲ್ಲಾಡಳಿತ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಪಂಚಾಯ್ತಿ ಅಧಿಕಾರಿಗಳು ಭಾಗಿಯಾಗಿದ್ರು. ಸ್ವತಃ ರವಿ ಚೆನ್ನಣ್ಣನವರ್ ಕೂಡ ದಾಳಿಗೆ ಸಾಥ್ ನೀಡಿದ್ರು. ಹೊಸಕೋಟೆ ತಹಶೀಲ್ದಾರ್ ರಮೇಶ್, ಡಿವೈಎಸ್ಪಿ ನಿಂಗಪ್ಪ ಕೂಡ ಜೊತೆಗಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?