ರಾಯಚೂರು: ಪ್ರತಿಭೆಯೊಂದಿದ್ದರೆ ಏನೆಲ್ಲಾ ಅವಕಾಶಗಳು ನಮ್ಮನ್ನರಸಿಕೊಂಡು ಬರುತ್ತವೆ ಎಂಬುದಕ್ಕೆ ಈ ಬಾಲಕಿಯೇ ಸಾಕ್ಷಿ, ಬಿಸಿಲನಾಡು ರಾಯಚೂರಿನ ವಿದ್ಯಾರ್ಥಿನಿ ವೈಷ್ಣವಿ ,ಪ್ರಧಾನಿ ನರೇಂದ್ರ ಮೋದಿ ಜತೆ ಕುಳಿತು ಚಂದ್ರಯಾನ ೨ ನೌಕೆಯ ಕೊನೆಯ ಹಂತ ( ಚಂದ್ರನಂಗಳದ ಸ್ಪರ್ಶ)ವನ್ನ ಕಣ್ತುಂಬಿಕೊಳ್ಳಲಿದ್ದಾಳೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ ಚಂದ್ರನ ಅಂಗಳದತ್ತ ಹಾರಿಬಿಟ್ಟಿರುವ ನೌಕೆ ಸೆ.೭ರಂದು ಚಂದ್ರನ ಉತ್ತರ ದೃವದ ಮೇಲೆ ಇಳಿಯಲಿದೆ. ಅಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ದಲ್ಲಿ ಕುಳಿತು ನೇರ ಪ್ರಸಾರ ವೀಕ್ಷಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳನ್ನೂ ಪ್ರಧಾನಿ ಜೊತೆ ಕೂರಿಸುವ ಉದ್ದೇಶದಿಂದ ಇಸ್ರೋ ಆನ್ ಲೈನ್ ಕ್ವಿಜ್ (ರಸಪ್ರಶ್ನೆ) ಏರ್ಪಡಿಸಿತ್ತು.
ಆಗಸ್ಟ್ ೨೫ ರಂದು ನಡೆದ ಈ ಕ್ವಿಜ್ ಲ್ಲಿ ೧೦ ನಿಮಿಷ ಸಮಯ ಕೊಟ್ಟು ೨೦ ಪ್ರಶ್ನೆಗಳನ್ನ ಕೇಳಲಾಗಿತ್ತು. ರಾಯಚೂರು ಜಿಲ್ಲೆ ಸಿಂಧನೂರಿನ ಡ್ಯಾಫೋಡಿಲ್ಸ್ ಕಾನ್ಸೆಪ್ಟ್ ಖಾಸಗಿ ಶಾಲೆಯ ೩೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ೯ ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ೨೦ ಪ್ರಶ್ನೆಗಳಿಗೆ ಕೇವಲ ೫ ನಿಮಿಷದ ಒಳಗಾಗಿ ಸರಿಯಾಗಿ ಉತ್ತರಿಸಿ ಈ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ. ಪ್ರಧಾನಿ ಮೋದಿ ಜೊತೆ ಕುಳಿತು ಚಂದ್ರಯಾನ-೨ ಸ್ಪರ್ಶದ ಕ್ಷಣವನ್ನು ಲೈವ್ ಲ್ಲಿ ನೋಡಲಿದ್ದಾಳೆ. ವೃತ್ತಿಯಲ್ಲಿ ವಕೀಲರಾಗಿರುವ ವೈಷ್ಣವಿ ತಂದೆ ನಾಗರಾಜ್ ಹಾಗು ಶಾಲೆ ಆಡಳಿತ ಮಂಡಳಿ ಈಕೆಗೆ ಸಿಕ್ಕ ಅವಕಾಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಒಟ್ಟು ಅರವತ್ತು ಮಕ್ಕಳು ಪ್ರಧಾನಿ ಜೊತೆ ಸೇರಿಕೊಳ್ಳಲಿದ್ದಾರೆ.
ಪ್ರಧಾನಿ ಮೋದಿ ಟ್ವಿಟ್ಟರ್ ಖಾತೆ 7 ಕೋಟಿ ಫಾಲೋವರ್ಸ್ : ನಮೋ ಹೊಸ ದಾಖಲೆ
ಜಗತ್ತಿನ ಅತಿ ಉದ್ದದ ಅಟಲ್ ಸುರಂಗ ಮಾರ್ಗ ಪ್ರಧಾನಿ ಮೋದಿಯಿಂದ ಉದ್ಘಾಟನೆ
ಪ್ರಧಾನಿ ಮೋದಿ ಭೇಟಿ: ಸಂಪುಟ ವಿಸ್ತರಣೆಗೆ ಅನುಮತಿ ಕೋರಿದ ಸಿಎಂ ಬಿಎಸ್ವೈ
ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಮುಂಗಾರು ಅಧಿವೇಶನ: ಸೈನಿಕರ ಪರವಾಗಿ ಒಂದು ಧ್ವನಿಯಾಗಿ ಸಂಸತ್: ಪ್ರಧಾನಿ ಮೋದಿ ವಿಶ್ವಾಸ
ಕೊರೊನಾ ಬಗೆಗಿನ ನಿರ್ಲಕ್ಷ್ಯತನ ಬೇಡ: ದೇಶದ ಜನರನ್ನ ಎಚ್ಚರಿಸಿದ ಪ್ರಧಾನಿ ಮೋದಿ