ನವದೆಹಲಿ : ಇದೊಂಥರಾ ವಿಚಿತ್ರ ಪ್ರಕರಣ. ಮಾಜಿ ನೀಲಿತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಅನ್ಕೊಂಡು, ಯುವಕನಿಗೆ ಫೋನ್ ಮಾಡಿ ಕಾಟ ಕೊಡ್ತಿದ್ದಾರಂತೆ ಸನ್ನಿ ಲಿಯೋನ್ ಅಭಿಮಾನಿಗಳು. ಇದರಿಂದ ಸುಸ್ತಾಗಿರುವ ಯುವಕ ಪೊಲೀಸರ ಮೊರೆ ಹೋಗಿದ್ದು, ನನ್ನನ್ನ ಕಾಪಾಡಿ ಪ್ಲೀಸ್ ಅಂತ ದೂರು ನೀಡಿದ್ದಾನೆ.
ಇಷ್ಟಕ್ಕೂ ಹೀಗೆ ಸನ್ನಿ ಲಿಯೋನ್ ಅಭಿಮಾನಿಗಳ ಕಾಟದಿಂದ ಸುಸ್ತಾಗಿರೋ ಯುವಕನ ಹೆಸರು ಪುನೀತ್ ಅಗರ್ವಾಲ್. ದೆಹಲಿಯ ಪೀತಮಪುರದ ನಿವಾಸಿ. ಕಳೆದ ಒಂದು ವಾರದಿಂದ ಸುಮಾರು 500ಕ್ಕೂ ಹೆಚ್ಚು ಕರೆಗಳು ಸನ್ನಿ ಲಿಯೋನ್ ಅಭಿಮಾನಿಗಳ ಹೆಸರಲ್ಲಿ ಬಂದಿವೆ. ತಾನು ಸನ್ನಿ ಲಿಯೋನ್ ಅಲ್ಲ. ಇದು ಸನ್ನಿ ಲಿಯೋನ್ ನಂಬರ್ ಕೂಡ ಅಲ್ಲ.. ಪ್ಲೀಸ್ ನನ್ನನ್ನು ಬಿಟ್ಟುಬಿಡಿ ಎಂದು ಯುವಕ ಅಂಗಾಲಾಚಿದ್ದಾನೆ. ಆದ್ರೆ, ಪುನೀತ್ಗೆ ಸನ್ನಿ ಲಿಯೋನ್ ಹೆಸರಲ್ಲಿ ಬರುತ್ತಿರೋ ಕರೆಗಳು ಮಾತ್ರ ನಿಂತಿಲ್ಲ.
ತಾನು ಸನ್ನಿ ಲಿಯೋನ್ ಅಲ್ಲ ಅಂತ ಹೇಳಿದ್ರೆ ಸಾಕು, ಕರೆ ಮಾಡುವವರು ಅಶ್ಲೀಲವಾಗಿ ಬೈದು ಫೋನ್ ಕಟ್ ಮಾಡ್ತಿದ್ದಾರಂತೆ. ಹೀಗಂತ ಪುನೀತ್ ಅಗರ್ವಾಲ್ ಕೊನೆಗೂ ಪೊಲೀಸರ ಮೆಟ್ಟಿಲೇರಿದ್ದಾರೆ. ದೆಹಲಿಯ ಮೌರ್ಯ ಏಕಲವ್ಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ ಪುನೀತ್.
ಸನ್ನಿ ಲಿಯೋನ್ ಫ್ಯಾನ್ಸ್ ಫೋನ್ ಮಾಡಲು ಕಾರಣವೇನು..?
ಪುನೀತ್ ಅಗರ್ವಾಲ್ಗೆ ಸನ್ನಿ ಲಿಯೋನ್ ಅಭಿಮಾನಿಗಳು ಫೋನ್ ಮಾಡೋಕೆ ಕಾರಣ ಅರ್ಜುನ ಪಟಿಯಾಲಾ ಸಿನಿಮಾ. ಅರ್ಜುನ ಪಟಿಯಾಲಾ ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಇದರಲ್ಲಿ ಸನ್ನಿ ಲಿಯೋನ್ ನಟಿಸಿದ್ದಾರೆ. ಈ ಸಿನಿಮಾದ ದೃಶ್ಯವೊಂದರಲ್ಲಿ ಸನ್ನಿ ಲಿಯೋನ್ ತನ್ನ ಫೋನ್ ನಂಬರ್ ಹೇಳ್ತಾರೆ. ಇದನ್ನೇ ನಿಜವಾದ ನಂಬರ್ ಎಂದುಕೊಂಡು, ಸನ್ನಿ ಅಭಿಮಾನಿಗಳು ಫೋನ್ ಮಾಡ್ತಿದ್ದಾರೆ. ಪಾಪ ಅದೇ ನಂಬರ್ ಪುನೀತ್ ಬಳಿ ಇದ್ದು, ಈಗ ಕಷ್ಟ ಅನುಭವಿಸ್ತಿದ್ದಾನೆ.
ತನಗೆ ಆಗ್ತಿರೋ ಸಂಕಷ್ಟದ ಬಗ್ಗೆ ಮಾತ್ನಾಡಿರೋ ಪುನೀತ್, ಸಿನಿಮಾ ತಂಡದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನನ್ನ ಅನುಮತಿ ಇಲ್ಲದೇ ನನ್ನ ಫೋನ್ ನಂಬರ್ ಬಳಸಿದ್ದು ಅಪರಾಧ. ಹೀಗಾಗಿ ದೂರು ನೀಡಿದ್ದೇನೆ. ಪೊಲೀಸರು ಕೂಡ ತಜ್ಞರ ಅಭಿಪ್ರಾಯ ಪಡೆದು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದಿದ್ದಾನೆ. ಒಟ್ನಲ್ಲಿ, ಸನ್ನಿ ಲಿಯೋನ್ ಅಭಿಮಾನಿಗಳು ಮಾತ್ರ ರೊಚ್ಚಿಗೆದ್ದು, ನಿಮ್ಮನ್ನು ಭೇಟಿಯಾಗಬೇಕು. ನಿಮ್ಮನ್ನು ನೋಡಬೇಕು ಅಂತ ಹೇಳಿ ಪುನೀತ್ಗೆ ಕಾಟ ಕೊಡ್ತಿದ್ದಾರೆ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?