Featured
ಪ್ರಿಯಾಂಕ ಚೋಪ್ರಾ ಯೂನಿಸೆಫ್ ರಾಯಭಾರಿ ಆಗಿರೋದು ಬೇಡ್ವಂತೆ : ಭಾರತದ ವಿರುದ್ಧ ಪಾಕಿಸ್ತಾನ ಹೊಸ ಕಿರಿಕ್ ಯಾಕೆ ಗೊತ್ತಾ..?
Source : CNN
ಈ ಪಾಕಿಸ್ತಾನ ಅನ್ನೋ ದೇಶ ಎಲ್ಲೆಲ್ಲಿ ಕಿರಿಕ್ ಮಾಡಬೇಕು, ಭಾರತಕ್ಕೆ ಹೇಗೆ ಕಾಟ ಕೊಡಬೇಕು ಅಂತ ಕಾಯ್ತಾ ಇದ್ದಂತೆ ಇದೆ. ಆದ್ರೆ, ಪುಂಡ ಪಾಕಿಸ್ತಾನಕ್ಕೆ ಇದ್ಯಾವುದರಿಂದಲೂ ಭಾರತವನ್ನ ಎದುರಿಸೋಕೆ ಸಾಧ್ಯವಿಲ್ಲ ಅಂತ ಗೊತ್ತಿಲ್ಲ ಅನ್ಸತ್ತೆ. ಇದೀಗ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮೂಲಕ, ಭಾರತದ ಮೇಲೆ ಹೊಸ ಖ್ಯಾತೆ ತೆಗೆದಿದೆ.
ಪ್ರಿಯಾಂಕ ಚೋಪ್ರಾ, ಯೂನಿಸೆಫ್ ಸಂಸ್ಥೆಯ ರಾಯಭಾರಿ. ಆದ್ರೀಗ, ಯೂನಿಸೆಫ್ ಸಂಸ್ಥೆಯ ರಾಯಭಾರಿ ಸ್ಥಾನದಿಂದ ಪ್ರಿಯಾಂಕ ಚೋಪ್ರಾರನ್ನ ತೆಗೆಯಬೇಕಂತೆ. ಇದಕ್ಕೆ ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವೆ ಶಿರೀನ್ ಮಜಾರಿ, ಯೂನಿಸೆಫ್ ನಿರ್ದೇಶಕರಿಗೆ ಪತ್ರ ಬರೆದು ಕಿರಿಕ್ ಮಾಡಿದ್ದಾರೆ. ಪ್ರಿಯಾಂಕ ಚೋಪ್ರಾ, ಯುದ್ಧದ ಬಗ್ಗೆ ಹೇಳಿಕೆ ನೀಡಿದ್ದಾರೆ ಹೀಗಾಗಿ, ಅವರನ್ನ ಯೂನಿಸೆಫ್ ರಾಯಭಾರತ್ವದಿಂದ ತೆಗೆದುಹಾಕಿ ಎಂದು ಪಾಕಿಸ್ತಾನ ಹೇಳಿದೆ.
ಇತ್ತೀಚೆಗೆ ಭಾರತ ಜಮ್ಮು & ಕಾಶ್ಮೀರದಲ್ಲಿ ಕಾನೂನು ಬಾಹಿರ ಕ್ರಮಗಳನ್ನ ಕೈಗೊಂಡಿದೆ ಎಂದು ಪಾಕಿಸ್ತಾನ ಹೇಳಿದೆ. ಅಲ್ಲದೆ, ಕಾಶ್ಮೀರ, ಹಿಮಾಲಯ ಪ್ರಾಂತ್ಯದ ಭಾಗ ಎಂದು ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇಷ್ಟಕ್ಕೂ ಪ್ರಿಯಾಂಕ ಚೋಪ್ರಾ ಹೇಳಿದ್ದೇನು.?
ಇಷ್ಟಕ್ಕೂ ಪ್ರಿಯಾಂಕ ಚೋಪ್ರಾ ಮಾಡಬಾರದ್ದೇನು ಮಾಡಿರಲಿಲ್ಲ. ಕಳೆದ ಫೆಬ್ರವರಿಯಲ್ಲಿ ಭಾರತವನ್ನ ಬೆಂಬಲಿಸಿ ಪ್ರಿಯಾಂಕ ಚೋಪ್ರಾ ಟ್ವೀಟ್ ಮಾಡಿದ್ದರು. ಜೈ ಹಿಂದ್, ಭಾರತೀಯ ಸೇನೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೇ ಈಗ ಪಾಕಿಸ್ತಾನ ಕಿರಿಕ್ ಮಾಡ್ತಿದೆ.
ಪಾಕಿಸ್ತಾನದ ಈ ನರಿ ಬುದ್ಧಿಗೆ ಏನನ್ನಬೇಕೋ ಏನೋ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?