Featured
ಪ್ರಭಾಸ್ ಸಾಹೋಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಟಾಕ್.! ಸೋಲುತ್ತಾ ಸಾಹೋ..?

300 ಕೋಟಿ ಬಿಗ್ ಬಜೆಟ್. ಪ್ರಭಾಸ್, ಶ್ರದ್ಧಾ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಕಾಸ್ಟ್.. ಹಾಲಿವುಡ್ ರೇಂಜ್ ಫೈಟ್ಸ್. ಅದ್ಧೂರಿ ಗ್ರಾಫಿಕ್ಸ್. ಎರಡು ತಿಂಗಳಿಂದ ಬಿಗ್ ಪ್ರೊಮೋಷನ್. ಇದೆಲ್ಲವೂ ಸಾಹೋ ಬಂಡವಾಳ. ಆದ್ರೆ, ರಿಲೀಸ್ ಆದ ಮೊದಲ ದಿನವೇ ಸಾಹೋಗೆ ಕಂಟಕ ಶುರುವಾದಂತೆ ಕಾಣ್ತಿದೆ.
ಹೌದು, ಸಾಹೋ ಮೊದಲ ದಿನದ ವಿಮರ್ಶೆಗಳು ಬಹುತೇಕ ನೆಗೆಟಿವ್ ಆಗಿವೆ. ಅದರಲ್ಲೂ ಸೋಶಿಯಲ್ ಮೀಡಿಯಾಗಳಾದ ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾ ಗ್ರಾಂನಲ್ಲಿ ಸಾಹೋಗೆ ನೆಟ್ಟಿಗರು ಹಿಗ್ಗಾಮುಗ್ಗಾ ಬೈತಿದ್ದಾರೆ. ಈ ಸಿನಿಮಾದಲ್ಲಿ 300 ಕೋಟಿ ಖರ್ಚು ಮಾಡುವಂತದ್ದು ಏನೂ ಇಲ್ಲ. ಸುಖಾ ಸುಮ್ಮನೆ ದುಬಾರಿ ವೆಚ್ಚ ಮಾಡಿದ್ದಾರೆ. 2 ವರ್ಷ ವೇಸ್ಟ್ ಮಾಡಿ ಸಿನಿಮಾ ತೆಗೆದಿದ್ದಾರೆ. ಪ್ರಭಾಸ್ ಈ ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿದ್ರು. ಹಣ ವೇಸ್ಟ್, ಟೈಮ್ ವೇಸ್ಟ್. ಸಿನಿಮಾ ವೇಸ್ಟ್ ಅನ್ನೋ ಕಾಮೆಂಟ್ಗಳು ಹೆಚ್ಚು ಹೆಚ್ಚಾಗಿ ಟ್ವಿಟ್ಟರ್ನಲ್ಲಿ ಕಾಣಿಸಿಕೊಳ್ತಿದೆ. #OneWordReview…#Saaho: UNBEARABLE.
Rating: ⭐️½
A colossal waste of talent, big money and opportunity… Weak story, confusing screenplay and amateur direction. 👎👎👎#SaahoReview pic.twitter.com/Ogx1jkVuoE— taran adarsh (@taran_adarsh) August 30, 2019
ಕೆಲವು ಸಿನಿಮಾ ವೆಬ್ ಸೈಟ್ಗಳು, ಸಿನಿಮಾ ತಜ್ಞರು ಕೂಡ ಪ್ರಭಾಸ್ ಸಾಹೋಗೆ ನೆಗೆಟಿವ್ ರಿವ್ಯೂವ್ ಜೊತೆ ಕಾಮೆಂಟ್ ಮಾಡಿದ್ದಾರೆ. ಮತ್ತೂ ಕೆಲವು ಸಿನಿ ತಜ್ಞರು ಅವರೇಜ್ ಮೂವಿ. ತುಂಬಾ ನಿರೀಕ್ಷೆ ಇಟ್ಟುಕೊಂಡು ಸಿನಿಮಾ ನೋಡಿದ್ರೆ ನಿರಾಸೆ. ಆದ್ರೆ, ಸಿನಿಮಾವನ್ನ ಸಿನಿಮಾ ರೀತಿ ನೋಡಿದ್ರೆ, ಒಮ್ಮೆ ನೋಡಬಹುದು ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಹುತೇಕ ಕಾಮೆಂಟ್ಗಳು, ಅಭಿಪ್ರಾಯಗಳು ನೆಗೆಟಿವ್ ಆಗಿವೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಕೊಂಚ ಮಟ್ಟಿಗೆ ಅವರೇಜ್ ಟಾಕ್ ಇದೆ. ಆದ್ರೆ, ಹಿಂದಿ, ತಮಿಳು, ಮಲಯಾಳಂ ಭಾಗ ಹಾಗೂ ಕರ್ನಾಟಕದಲ್ಲಿ ನೆಗೆಟಿವ್ ಟಾಕ್ ಇದ್ದು, ಸಾಹೋ ಸೋಲೋದು ಗ್ಯಾರೆಂಟಿ ಎನ್ನಲಾಗ್ತಿದೆ. ಗಣೇಶ ಹಬ್ಬವೇ ಸಾಹೋ ಸಿನಿಮಾವನ್ನ ಸೇವ್ ಮಾಡಬೇಕು ಅನ್ನೋ ಅಭಿಪ್ರಾಯ ಇದ್ದು, ಮುಂದಿನ ದಿನಗಳಲ್ಲಿ ಕಲೆಕ್ಷನ್ ವಿವರ ತಿಳಿಯಲಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















