ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಏನೇ ಮಾಡಿದ್ರು ಅದು ವಿಶೇಷವಾಗಿರುತ್ತೆ. ಮಕ್ಕಳೊಂದಿಗೆ ಆಟ ಆಡಿದ್ರೂ ವಿಶೇಷ. ಕಸ ಗುಡಿಸಿದರೂ ಸ್ಪೆಷಲ್. ಮಿಲಿಟರಿ ಡ್ರೆಸ್ ಹಾಕ್ತಾರೆ.. ಯೋಗನೂ ಮಾಡ್ತಾರೆ.. ಹೀಗೆ ಮೋದಿ ಅಂದ್ರೆನೇ ಒಂದ್ ರೀತಿ ವಿಭಿನ್ನ, ವಿಶೇಷ. ಈಗ ಇದೇ ಸಾಲಿಗೆ ಮತ್ತೊಂದು ವಿಶೇಷ ಸೇರ್ಪಡೆಯಾಗಿದೆ.. ಈವರೆಗೆ ಯಾವ ಪ್ರಧಾನಿಯೂ ಮಾಡದ ಸಾಹಸವನ್ನ ಮೋದಿ ಮಾಡಿದ್ದಾರೆ.
ಯೆಸ್, ಪ್ರಧಾನಿ ನರೇಂದ್ರ ಮೋದಿ ಈಗ ರಣಬೇಟೆಗಾರರಾಗಿದ್ದಾರೆ. ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗುವ ಖ್ಯಾತ ಶೋ, ಮ್ಯಾನ್ ವರ್ಸಸ್ ವೈಲ್ಡ್ ಶೋನಲ್ಲಿ ಮೋದಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ನಿರೂಪಕ ಬಿಯರ್ ಗ್ರಿಲ್ಸ್ ಜೊತೆ ಪ್ರಧಾನಿ ಮೋದಿ ಉತ್ತರಾಖಂಡ್ನ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ನಲ್ಲಿ ಹುಲಿ ಹೆಜ್ಜೆಯನ್ನ ಬೆನ್ನತ್ತಿದ್ದಾರೆ. ಮೋದಿ ಕಾಣಿಸಿಕೊಂಡಿರೋ ಈ ಕಾರ್ಯಕ್ರಮ ಇದೇ ಆಗಸ್ಟ್ 12ರಂದು ಪ್ರಸಾರವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಯುವಕರನ್ನೂ ನಾಚುವಂತೆ ಈ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪಕ್ಕಾ ಅಡ್ವೆಂಚರ್ ಶೋ ಆಗಿದ್ದು, ಇಲ್ಲಿ ಮೋದಿ ಶರವೇಗದಲ್ಲಿ ಓಡಿದ್ದಾರೆ.. ಬರ್ಜಿ ಹಿಡಿದ್ದಾರೆ.. ನದಿಯಲ್ಲಿ ಈಜಿದ್ದಾರೆ.. ವಿಶ್ವ ಹುಲಿ ದಿನಾಚರಣೆ ಅಂಗವಾಗಿ ಮೋದಿ ಭಾಗವಹಿಸಿರೋ ಶೋನ ಪ್ರೋಮೋ ರಿಲೀಸ್ ಆಗಿದ್ದು, ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?