Featured
ಪೈಲ್ವಾನ್ ಆಡಿಯೋ ಬಿಡುಗಡೆ ಮಾಡಿದ ಅಪ್ಪು : ಪುನೀತ್ ಪ್ರೀತಿಗೆ ಕಿಚ್ಚ ಸುದೀಪ್ ಹೇಳಿದ್ದೇನು..?
ಬೆಂಗಳೂರು : ಕಿಚ್ಚ ಸುದೀಪ್ ಅಭಿನಯದ ಬಹುಭಾಷಾ ಸಿನಿಮಾ ಪೈಲ್ವಾನ್ ಆಡಿಯೋ ರಿಲೀಸ್ ಬೆಂಗಳೂರಿನಲ್ಲಿ ನಡೀತು. ಭಾನುವಾರ ಸಂಜೆ ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿ ಪೈಲ್ವಾನ್ ಆಡಿಯೋ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೀತು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಪೈಲ್ವಾನ್ ಆಡಿಯೋ ಬಿಡುಗಡೆ ಮಾಡಿದ್ದು ವಿಶೇಷ.
ಭಾನುವಾರ ಸಂಜೆ ಇಂಡೋರ್ ಸ್ಟೇಡಿಯಂನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಪೈಲ್ವಾನ್ ಆಡಿಯೋ ರಿಲೀಸ್ ಮಾಡಲಾಯ್ತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಪವರ್ ಸ್ಟಾರ್, ಪುನೀತ್ ರಾಜ್ಕುಮಾರ್, ಪೈಲ್ವಾನ್ ಆಡಿಯೋ ಸಿಡಿಯನ್ನ ಬಿಡುಗಡೆ ಮಾಡಿದ್ರು.
ಆಡಿಯೋ ಬಿಡುಗಡೆ ವೇಳೆ ಮಾತ್ನಾಡಿದ ಅಪ್ಪು,ಸುದೀಪ್ ನಟನೆ ಹಾಗೂ ಡೆಡಿಕೇಷನ್ ತುಂಬಾ ಇಷ್ಟ. ನಾವಿಬ್ಬರು ಆತ್ಮೀಯ ಸ್ನೇಹಿತರು ಅಂತ ಹೇಳಿದ್ರು. ಇದೇ ವೇಳೆ, ಕಿಚ್ಚ ಸುದೀಪ್ ಪಕ್ಕದಲ್ಲಿ ನಿಂತು ಇಬ್ಬರ ಎತ್ತರ ನೋಡಿ ತಮಾಷೆ ಮಾಡಿದ್ರು. ಅಲ್ಲದೆ, ಒಂದೇ ಹಾಡಿಗೆ ಕಿಚ್ಚ ಮತ್ತು ಅಪ್ಪು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಬಳಿಕ ಮಾತ್ನಾಡಿದ ಕಿಚ್ಚ ಸುದೀಪ್, ಇದೊಂದು ವಿಶೇಷ ಸನ್ನಿವೇಶ. ಈ ಹಿಂದೆ ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆ ನಡೆಯಬೇಕಿತ್ತು. ಆದ್ರೆ, ಪ್ರವಾಹದಿಂದಾಗಿ ಅದು ಸಾಧ್ಯವಾಗಲಿಲ್ಲ. ಪ್ರವಾಹ ಸಂತ್ರಸ್ತರು ಬೇಕ ಚೇತರಿಸಿಕೊಳ್ಳಬೇಕು. ಪ್ರತಿಯೊಬ್ಬರು ಸಂತ್ರಸ್ತರ ಸಹಾಯಕ್ಕೆ ನಿಲ್ಲಬೇಕು ಅಂತ ಮನವಿ ಮಾಡಿದ್ರು. ಆಡಿಯೋ ಬಿಡುಗಡೆ ಮಾಡಿ ಅಪ್ಪುಗೆ ಧನ್ಯವಾದ ಹೇಳಿದ್ರು ಕಿಚ್ಚ ಸುದೀಪ್.
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ, ಸೆಪ್ಟೆಂಬರ್ 12ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?