Featured
ಪೆಟ್ರೋಲ್-ಡೀಸೆಲ್ ವಾಹನಗಳನಿಷೇಧ ಇಲ್ಲ:ನಿತಿನ್ ಗಡ್ಕರಿ. ಹಾಗಾದ್ರೆ ಮತ್ತೇಕೆ ಭಯ..?
![](https://risingkannada.com/wp-content/uploads/2019/09/images-1.jpg)
ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನ ನಿಷೇಧ ಮಾಡೋದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಭಯ ನೀಡಿದ್ದಾರೆ. ಸೊಸೈಟಿ ಆಫ್ ಇಂಡಿಯನ್ ಆಟೋ ಮೊಬೈಲ್ ಮ್ಯಾನುಫ್ಯಾಕ್ಚರ್ ( ಎಸ್‌ಐಎಮ್) ಕಾನ್‌ಕ್ಲೇವ್‌ನಲ್ಲಿ ಮಾತನಾಡಿ, ಎಲೆಕ್ಟ್ರಿಕಲ್ ವಾಹನಗಳನ್ನ ಪ್ರೋತ್ಸಾಹಿಸುವ ಸಲುವಾಗಿ ಡೀಸೆಲ್ ಹಾಗೂ ಪೆಟ್ರೋಲ್ ವಾಹನಗಳನ್ನ ನಿಷೇಧ ಮಾಡುವುದಿಲ್ಲ, ಬದಲಾಗಿ ಈ ಹೈಬ್ರೀಡ್ ವಾಹನಗಳ ಮೇಲಿನ ತೆರಿಗೆ ಸಡಿಲ ಮಾಡುತ್ತೇವೆ ಎಂದು ಹೇಳಿದರು.
ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿದ್ದರಿಂದ ಅವುಗಳ ಮೇಲೆ ಸಾಕಷ್ಟು ಆಸಕ್ತಿ ಹೊಂದಿದ್ದೇವೆ, ಜಿಎಸ್‌ಟಿಯಲ್ಲೂ ವಿನಾಯಿತಿ ನೀಡುತ್ತೇವೆ, ಹಣಕಾಸು ಸಚಿವಾಲಯ ಸಹಾಯಧನ ನೀಡುವುದಾದರೆ ಅದೂ ಕೂಡ ಈ ವಾಹನಗಳ ಮಾರುಕಟ್ಟೆ ವಿಸ್ತರಣೆಗೆ ಅನುಕೂಲವಾಗಲಿದೆ ಎಂದರು. ಕಳೆದ ಜುಲೈನಿಂದ ಆಟೋಮೊಬೈಲ್ ಕ್ಷೇತ್ರ ಆರ್ಥಿಕ ಹಿಂಜರಿತ ಕಂಡು ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿರುವ ಬೆನ್ನಲ್ಲೇ ಗಡ್ಕರಿ ಹೇಳಿಕೆ ತಯಾರಕರ ಮನೋಸ್ಥೈರ್ಯ ಹೆಚ್ಚುತ್ತಾ ನೋಡಬೇಕಿದೆ.
Continue Reading
Advertisement
You may like
Click to comment