Featured
ಪುಟ್ಟ ಮಗುವಿಗೆ ಗಾಯ, ಗೊಂಬೆಗೆ ಪ್ಲಾಸ್ಟರ್ ಹಾಕಿದ ವೈದ್ಯರು..? ಯಾಕೆ ಗೊತ್ತಾ..?
![](https://risingkannada.com/wp-content/uploads/2019/08/zikra-malik-1.jpg)
ನವದೆಹಲಿ : ಮಕ್ಕಳ ಜೀವನವೇ ಹಾಗೆ. ಒಬ್ಬರನ್ನ ಅನುಕರಣೆ ಮಾಡ್ತಾರೆ.. ತಮಗೆ ಇಷ್ಟವಾದ ವಸ್ತು ಅಥವಾ ವ್ಯಕ್ತಿ ಬೇಕು ಅಂದ್ರೆ ಬೇಕು ಅನ್ನೋ ಹಠ. ತಮಗಿಷ್ಟವಾದ ವ್ಯಕ್ತಿ ಏನ್ ಮಾಡಿದ್ರೂ ತಾವು ಅದೇ ರೀತಿ ಮಾಡ್ಬೇಕು ಅನ್ನೋದು ಮಕ್ಕಳ ಹಠ. ಇದಕ್ಕೆ ತಾಜಾ ಉದಾಹರಣೆ ದೆಹಲಿಯಲ್ಲಿ ನಡೆದಿರೋ ಈ ಘಟನೆ.
![](https://risingkannada.com/wp-content/uploads/2019/08/zikra-malik.jpg)
ಹೀಗೆ, ಹಾಸ್ಪಿಟಲ್ನ ಬೆಡ್ ಮೇಲೆ ಮಲಗಿರೋ ಈ ಮಗುವಿನ ಹೆಸರು ಜಿಕ್ರಾ ಮಲ್ಲಿಕ್. 11 ತಿಂಗಳ ಮಗು. ಮನೆಯಲ್ಲಿ ಮಲಗಿರುವಾಗ ಬೆಡ್ ಮೇಲಿಂದ ಬಿದ್ದು ಕಾಲಿಗೆ ಗಂಭೀರ ಗಾಯವಾಗಿದೆ. ಆಗಸ್ಟ್ 17ರಂದು ಜಿಕ್ರಾ ಮಲ್ಲಿಕ್ಳನ್ನ ಲೋಕನಾಯಕ್ ಹಾಸ್ಪಿಟಲ್ಗೆ ದಾಖಲು ಮಾಡಲಾಗಿತ್ತು. ಆದ್ರೆ, ವೈದ್ಯರು ಟ್ರೀಟ್ಮೆಂಟ್ ಕೊಡಲು ಬಂದಾಗ, ಜೋರಾಗಿ ಚೀರಾಟ, ರಂಪಾಟ ಮಾಡ್ತಿದ್ಲು. ವೈದ್ಯರಿಂದ ಸರಿಯಾದ ಟ್ರೀಟ್ಮೆಂಟ್ ಕೊಡಲು ಆಗಲೇ ಇಲ್ಲ. ಆಗ ಹೊಳೆದ ಐಡಿಯಾನೇ ಈ ಬೊಂಬೆಗೆ ಟ್ರೀಟ್ಮೆಂಟ್ ಕೊಡೋದು.
ಹೌದು, ಜಿಕ್ರಾ ಮಲ್ಲಿಕ್ ಮನೆಯಲ್ಲಿ ಏನೇ ಮಾಡಿದ್ರು ಈ ಬೊಂಬೆ ಜೊತೆಯಲ್ಲೇ ಆಗ್ತಿತ್ತು. ಮನೆಯಲ್ಲೂ ಊಟ ಮಾಡಿಸ್ಬೇಕು ಅಂದ್ರೆ, ಮೊದಲು ಬೊಂಬೆಗೆ ಊಟ ಮಾಡಿಸ್ಬೇಕಿತ್ತಂತೆ. ಜಿಕ್ರಾ ತಾಯಿ ತಕ್ಷಣ ತನ್ನ ಪತಿಗೆ ಗೊಂಬೆಯನ್ನ ತರಲು ಮನೆಗೆ ಕಳುಹಿಸಿ ಗೊಂಬೆ ತರಿಸ್ತಾರೆ. ವೈದ್ಯರು ಮೊದಲು ಗೊಂಬೆಗೆ ಟ್ರೀಟ್ಮೆಂಟ್ ಕೊಡುವಂತೆ ಮಾಡ್ತಾರೆ. ಗೊಂಬೆ ಕಾಲುಗಳಿಗೆ ಬ್ಯಾಂಡೇಜ್ ಹಾಕಿ, ಮೇಲಕ್ಕೆ ಕಟ್ತಾರೆ. ಬಳಿಕವಷ್ಟೇ ಜಿಕ್ರಾ ಟ್ರೀಟ್ಮೆಂಟ್ಗೆ ಓಕೆ ಮಾಡ್ತಾಳೆ.ಸದ್ಯ ಜಿಕ್ರಾ ಮಲ್ಲಿಕ್ ಆರೋಗ್ಯವಾಗಿದ್ದು, ಗುಣಮುಖ ಆಗ್ತಿದ್ದಾಳೆ. ಅಂದಹಾಗಿ ಈ ಗೊಂಬೆ ಹೆಸರು ಪರಿ. ಅದೇನೇ ಆಗ್ಲಿ, ಮಕ್ಕಳು ಒಮ್ಮೆ ಅನುಕರಿಸಿದ್ರೆ, ಒಮ್ಮೆ ಯಾವುದನ್ನಾದರೂ ನಂಬಿದ್ರೆ ಅದನ್ನ ಫಾಲೋ ಮಾಡೋದನ್ನ ಬಿಡಲ್ಲ ಅನ್ನೋದಕ್ಕೆ ಈ ಪುಟ್ಟ ಮಗುವೇ ಸಾಕ್ಷಿ.
You may like
ಕೇಜ್ರಿವಾಲ್ ಪರ ಪ್ರತಿಭಟನೆಗೆ ಮುಂದಾದ ವಕೀಲರು : ಎಚ್ಚರಿಕೆ ನೀಡಿದ ಹೈಕೋರ್ಟ್
ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ನಾಟೀಕರ್ ಆಸ್ಪತ್ರೆಗೆ ದಾಖಲು!
ದೆಹಲಿಯಲ್ಲಿ ಭೀಕರ ದುರಂತ.. 2 ಅಂತಸ್ತಿನ ಕಟ್ಟಡ ಧರಾಶಾಹಿ..ಇಬ್ಬರ ದುರ್ಮರಣ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಡಿಸ್ಚಾರ್ಜ್
ದೆಹಲಿ ಮದ್ಯ ಹಗರಣ ಕೇಸ್; ಕೆಸಿಆರ್ ಪುತ್ರಿ ಕೆ.ಕವಿತಾ ಬಂಧನ
ಆಸ್ಪತ್ರೆ ಆವರಣದಲ್ಲಿ ಬೆತ್ತಲಾಗಿ ಸುತ್ತಾಡಿದ ಸರ್ಕಾರಿ ಡಾಕ್ಟರ್