Featured
ಪಾರ್ಟಿಯಲ್ಲಿ ಎಂಜಾಯ್ ಮಾಡ್ತಿದ್ದ ವ್ಯಕ್ತಿಗೆ ಮೊಸಳೆ ಕಡಿತ..! ಅಯ್ಯೋ ದೇವರೇ ಹೀಗೂ ಉಂಟೇ..?

Source : BBC
ಸ್ವೀಡನ್ : ಇದೊಂಥರಾ ವಿಚಿತ್ರ ಘಟನೆ ಕಣ್ರೀ.. ಪಾರ್ಟಿ ಮಾಡೋವಾಗ ಮೊಸಳೆ ಬಂದು ಕಚ್ಚಿದೆ ಅಂದ್ರೆ, ನಂಬೋಕೆ ಆಗುತ್ತಾ..? ನಂಬಲೇಬೇಕು ಅಂತ ಹೇಳ್ತಿದೆ ಬಿಬಿಸಿ ವರದಿ. ಹೌದು, ಈ ರೀತಿಯ ಘಟನೆ ಸ್ವೀಡನ್ನಲ್ಲಿ ವರದಿಯಾಗಿದೆ.
ಇಷ್ಟಕ್ಕೂ ಆಗಿದ್ದೇನು..?
ಸ್ವೀಡನ್ನಲ್ಲಿ ಸ್ಕಾನ್ಸೇಟ್ ಅಕ್ವೇರಿಯಂಯಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಈ ಅಕ್ವೇರಿಯಂನಲ್ಲಿ ಎರಡು ದೊಡ್ಡ ದೊಡ್ಡ ಮೊಸಳೆಗಳಿವೆ. ಆದ್ರೆ, ಭದ್ರವಾಗಿ ಕ್ಲಾಸ್ ಅಳವಡಿಸಲಾಗಿದೆ. ಆದ್ರೆ, ಪಾರ್ಟಿ ಮಾಡ್ತಿದ್ದ ವೇಳೆ, ವ್ಯಕ್ತಿಯೊಬ್ಬರು ಅಚಾನಕ್ ಆಗಿ ತನ್ನ ಒಂದು ಕೈಯನ್ನ ಹೊರಗಡೆ ಇಟ್ಟಿದ್ದಾರೆ. ಮೊಸಳೆಗಳು ಮನುಷ್ಯನ ವಾಸನೆ ಹಿಡಿದ್ರೆ ಕೇಳಬೇಕೆ, ಪಟಕ್ ಎಂದು ಕೈ ಹಿಡಿದುಕೊಂಡು ಕಚ್ಚಿದೆ.. ನೋಡ ನೋಡ್ತಿದ್ದಂತೆ ರಕ್ತ ಚಿಮ್ಮಿದೆ.. ತಕ್ಷಣ ಅಲ್ಲಿದ್ದವರು ನ್ಯಾಪ್ಕಿನ್ಗಳಿಂದ ರಕ್ತವನ್ನ ಕ್ಲೀನ್ ಮಾಡಿ, ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಆ ವ್ಯಕ್ತಿ ಪಾರಾಗಿದ್ದಾರೆ.
ಅದು ಫಿಡಾಲ್ ಕ್ಯಾಸ್ಟ್ರೋ ಕೊಟ್ಟಿದ್ದ ಮೊಸಳೆ..!
ಇದು ಇನ್ನೂ ಕುತೂಹಲದ ಸಂಗತಿ. ಅದೇನಪ್ಪ ಅಂದ್ರೆ, ಕ್ಯೂಬಾದ ಸರ್ವಾಧಿಕಾರಿಯಾಗಿದ್ದ ಫಿಡಾಲ್ ಕ್ಯಾಸ್ಟ್ರೋ, ಎರಡು ಮೊಸಳೆಗಳನ್ನ 70ರ ದಶಕದಲ್ಲಿ ಗಿಫ್ಟ್ ಆಗಿ ಕೊಟ್ಟಿದ್ದರಂತೆ. ಆ ಮೊಸಳೆಗಳನ್ನ ಈ ಅಕ್ವೇರಿಯಂನಲ್ಲಿ ಇಡಲಾಗಿತ್ತು. ಕ್ಯೂಬಾದ ಮೊಸಳೆಗಳು ತುಂಬಾನೇ ಡೇಂಜರ್ ಅಂತ. ಆಗ ಕ್ಯಾಸ್ಟ್ರೋ ಕೊಟ್ಟಿದ್ದ ಮೊಸಳೆಯೇ, ಆ ವ್ಯಕ್ತಿಗೆ ಕಚ್ಚಿದೆ ಎಂದು ಸ್ಥಳೀಯ ಪೊಲೀಸರು ಹಾಗೂ ಅಕ್ವೇರಿಯಂ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಮೊಸಳೆಯಿಂದ ಕಚ್ಚಿಸಿಕೊಂಡ ವ್ಯಕ್ತಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸ್ತಿದ್ದಾರೆ. ಪಾಪ, ಪೊಲೀಸರು ಈಗ ಮೊಸಳೆಯನ್ನ ಅರೆಸ್ಟ್ ಮಾಡ್ತಾರಾ..? ವಿಚಾರಣೆ ನಡೆಸೋದು ಹೇಗೆ ಅಂತ ತಲೆ ಚಚ್ಚಿಕೊಳ್ತಿದ್ದಾರೇನೋ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?