Featured
ಪಂಡಿತನಲೂ ಅಲ್ಲ, ವಿದ್ವಾಂಸನೂ ಅಲ್ಲ, ಬಿಜೆಪಿ ಪಡಸಾಲೆಯಲ್ಲಿ ಆಡಿ ಬೆಳೆದೆ : ನೂತನ ಅಧ್ಯಕ್ಷ ಕಟೀಲ್
![](https://risingkannada.com/wp-content/uploads/2019/08/EC8-GErUYAAcXSO.jpg)
ಬೆಂಗಳೂರು: ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರಾಗಿ ಸೂಚಿತರಾಗಿದ್ದ ಸಂಸದ ನಳೀನ್ ಕುಮಾರ್ ಕಟೀಲ್ ಗೆ ಇಂದು ಬಿಎಸ್ ಯಡಿಯೂರಪ್ಪನವರು ಅಧ್ಯಕ್ಷಸ್ಥಾನದ ಜವಾಬ್ದಾರಿ ಹಸ್ತಾಂತರ ಮಾಡಿದರು.
ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ನಾನೊಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತ, ಸಂಸದನಾದೆ, ಬಿಜೆಪಿ ಸ್ವರ್ಣಯುಗದ ಈ ಸಂಸರ್ಭದಲ್ಲಿ ರಾಜ್ಯಾಧ್ಯಕ್ಷನಾಗಿ ಅಧಿಕಾರವನ್ನ ವಹಿಸಿಕೊಂಡಿದ್ದೇನೆ, ನಾನು ವಿದ್ವಾಂಸನಲ್ಲ, ಪಂಡಿತನಲ್ಲ, ರಾಜ್ಯಾಧ್ಯಕ್ಷನಾಗಿರುವ ಈ ಸಂದರ್ಭ ಅತೀವ ಸಂತಸ ತಂದಿದೆ ಎಂದರು. ಹತ್ತಾರು ವರ್ಷದಿಂದ ರಾಜಕಾರಣ ನೋಡಿಕೊಂಡು ಬಂದಿದ್ದೇನೆ, ಯಡಿಯೂರಪ್ಪ, ಈಶ್ವರಪ್ಪ, ಅನಂತ ಕುಮಾರ್ ನಂತಹ ನಾಯಕರು ಈ ಪಕ್ಷ ಕಟ್ಟಿ ಬೆಳೆಸಿದ್ದಾರೆ ಹಾಗಾಗಿ ಜವಾಬ್ದಾರಿ ಹೆಚ್ಚು ಎಂದರು!
ಸರ್ಕಾರವೇನೊ ನಮ್ಮದೇ ಇದೆ, ಆದರೆ ರಾಜ್ಯದೆಲ್ಲೆಡೆ ಪ್ರಕೃತಿ ವಿಕೋಪ, ಬರ-ನೆರೆಗಳೆರಡೂ ಇವೆ, ಕೇಂದ್ರ ತಂಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಧ್ಯಯನ ಮಾಡುತ್ತಿದೆ, ಕೇಂದ್ರ ಸರ್ಕಾರವೂ ಅಗತ್ಯ ಹಣಕಾಸಿನ ನೆರವೂ ನೀಡಲಿದೆ ಎಂಬ ನಂಬಿಕೆ ಇದೆ ಎಂದರು.
You may like
ಸುರೇಶ್ ಅಂಗಡಿ ಹಿರಿಯ ಅಣ್ಣನಂತೆ ಮಾರ್ಗದರ್ಶಕರಾಗಿದ್ದರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್
ರಾಜ್ಯಕ್ಕೆ 30 ಜಿಲ್ಲೆ, ಆದ್ರೆ ಬಿಜೆಪಿಗೆ 36 ಜಿಲ್ಲೆಗಳಿವೆ : ನಳೀನ್ ಕುಮಾರ್ ಕಟೀಲ್
ನಿಷ್ಠಾವಂತರನ್ನು ಕೈಬಿಡಬೇಡಿ : ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರಿಕೆಯಲ್ಲಿ ಜಾಹೀರಾತು ನೀಡಿದ ಮಸ್ಕಿ ಬಿಜೆಪಿ ಕಾರ್ಯಕರ್ತರು..!
ಮುಖ್ಯಮಂತ್ರಿ ಯಡಿಯೂರಪ್ಪಗೆ ಗ್ಯಾರೆಂಟಿ ಖೆಡ್ಡಾ..! ಯಾಕೆ ಗೊತ್ತಾ..? ಈ ಸ್ಟೋರಿ ಓದಿ..!
ಕಾಂಗ್ರೆಸಿಗರು ಕಾನೂನು, ಸಂವಿಧಾನಕ್ಕೆ ಗೌರವ ಕೊಡಲ್ವಾ..? ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗರಂ..!