Featured
ನೀನೊಬ್ಬ ಹೇಡಿ.. ಸುಳ್ಳಿನ ಸರದಾರ : ಸಾರಾ ಮಹೇಶ್ ವಿರುದ್ಧ ವಿಶ್ವನಾಥ್ ಗುಟುರು

ಮೈಸೂರು : ಅದ್ಯಾಕೋ ಏನೋ ರಾಜ್ಯ ರಾಜಕೀಯದಲ್ಲಿ ವಿಶ್ವನಾಥ್ ಹಾಗೂ ಸಾರಾ ಮಹೇಶ್ ನಡುವಿನ ಮಾತಿನ ಯುದ್ಧ ನಿಲ್ಲುವ ಲಕ್ಷಣಗಳು ಕಾಣ್ತಿಲ್ಲ. ಇವತ್ತು ಚಾಮುಂಡಿ ಬೆಟ್ಟದಲ್ಲಿ ದೊಡ್ಡ ಹೈಡ್ರಾಮಾವೇ ನಡೀತು. ಇಬ್ಬರು ನಾಯಕರು ದೇವಸ್ಥಾನಕ್ಕೆ ಬಂದ್ರೂ, ಒಬ್ಬರ ಮುಖ ಒಬ್ಬರು ನೋಡಲಿಲ್ಲ. ಆಣೆ, ಪ್ರಮಾಣವೂ ನಡೆಯಲಿಲ್ಲ.
ಈ ಬಗ್ಗೆ ಮಾತ್ನಾಡಿದ ಹೆಚ್.ವಿಶ್ವನಾಥ್, ಅವನೊಬ್ಬ ಹೇಡಿ.. ನೀನೊಬ್ಬ ಹೇಡಿ. ಪಲಾಯನವಾದಿ. ನಿನ್ನ ಹಿಟ್ ಅಂಡ್ ರನ್ ನಿಲ್ಲಿಸಬೇಕು. ಈ ಮಹಾನುಭಾವ ಸುಳ್ಳು ಹೇಳಿದ್ದಾನೆ. ಇವನು ಸುಳ್ಳಿನ ಸರದಾರ ಎಂದು ಸಾರಾ ಮಹೇಶ್ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ್ರು.
ನಿನ್ನ ಪಲಾಯನವಾದಕ್ಕೆ ನನ್ನ ಧಿಕ್ಕಾರ ಇದೆ ಎಂದ ವಿಶ್ವನಾಥ್, ಇದನ್ನ ಜನರು ಹಾಗೂ ದೇವೇಗೌಡರು ನೋಡಲಿ. ನನ್ನ ಮೇಲಿನ ಆರೋಪ ಸುಳ್ಳು ಎಂದು ಗೊತ್ತಾಯ್ತಲ್ಲ ಎಂದಿದ್ದಾರೆ. ದೇಗುಲದ ಒಳಗೆ ಬಚ್ಚಿಟ್ಟುಕೊಳ್ಳೊಕೆ.ಅದೇನು ವೈಶಂಪಾಯನ ಸರೋವರವೇ.? ದೇಗುಲದೊಳಗೆ ಬಚ್ಚಿಟ್ಟುಕೊಂಡ ಹೇಡಿ ಅವನು ಎಂದು ಸಾರಾ ಮಹೇಶ್ ವಿರುದ್ಧ ವಿಶ್ವನಾಥ್ ಕಿಡಿಕಾರಿದ್ರು.
ಸಾರಾ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವನಾಥ್, ಪೊಲೀಸರ ಒತ್ತಾಯದ ಮೇರೆಗೆ ಚಾಮುಂಡಿ ಬೆಟ್ಟದಿಂದ ವಾಪಸ್ ತೆರಳಿದ್ರು..
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















