Featured
ನಿಮ್ಮ ಶೋ ಶುರುವಾದಾಗ ನಾನು ಜೈಲಿನಲ್ಲಿದ್ದೆ. ನಾನು ಹೊರಗೆ ಬಂದಾಗ ಶೋನೇ ರದ್ದಾಗಿತ್ತು : ಸಂಜಯ್ ದತ್ ಹೀಗೆ ಹೇಳಿದ್ಯಾಕೆ..?

ರೈಸಿಂಗ್ ಕನ್ನಡ : ಕಪಿಲ್ ಶರ್ಮಾ ಶೋ, ಹಿಂದಿಯಲ್ಲಿ ತುಂಬಾ ಪ್ಯಾಪುಲರ್ ಶೋ ಅನ್ನೋದರಲ್ಲಿ ಎರಡು ಮಾತಿಲ್ಲ. ಈ ಕಾಮಿಡಿ ಶೋಗೆ ಹೋಗದ ಸ್ಟಾರ್ಗಳೇ ಇಲ್ಲ. ಇತ್ತೀಚೆಗೆ ನಮ್ಮ ಕಿಚ್ಚ ಸುದೀಪ್ ಕೂಡ ಈ ಶೋನಲ್ಲಿ ಭಾಗಿಯಾಗಿದ್ರು. ಈಗ ಬಾಲಿವುಡ್ ನಟ ಸಂಜಯ್ ದತ್ ಹಾಗೂ ಪತ್ನಿ ಮಾನ್ಯತಾ ದತ್ ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾಗಿದ್ರು. ಸಂಜಯ್ ದತ್ ಮುಂದಿನ ಸಿನಿಮಾ ಪ್ರಸ್ಥಾನಂ ಚಿತ್ರದ ಪ್ರಮೋಷನ್ ಭಾಗವಾಗಿ ಈ ಶೋನಲ್ಲಿ ದತ್ ಪಾಲ್ಗೊಂಡಿದ್ರು.
ಇದು ಸಂಜಯ್ ದತ್ ಮೊದಲ ಶೋ. ಈ ವೇಳೆ ಕಪಿಲ್ ಶರ್ಮಾ ಒಂದು ಮಾತು ಕೇಳ್ತಾರೆ. ಯಾಕೆ ನೀವು ನಮ್ಮ ಶೋಗಳಿಂದ ದೂರ ಇರ್ತೀರಾ ಅಂತ. ಇದಕ್ಕೆ ಹಾಸ್ಯವಾಗಿ ಉತ್ತರ ಕೊಟ್ಟ ಸಂಜಯ್ ದತ್, ನಿಮ್ಮ ಶೋ ಯಾವಾಗ ಆರಂಭವಾಯ್ತೋ ಆಗ ನಾನು ಜೈಲಿನಲ್ಲಿದ್ದಾರೆ. ಜೈಲಿಂದ ನಾನು ಹೊರಗೆ ಬಂದು ನೋಡಿದ್ರೆ, ನಿಮ್ಮ ಶೋನೇ ಇರಲಿಲ್ಲ ಎಂದ್ರು.
ಸಂಜು ಬಾಬಾ ಭಾಗಿಯಾಗಿಯಾಗಿದ್ದ ಈ ಶೋ ಇನ್ನೂ ಏರ್ ಆಗಿಲ್ಲ. ಪ್ರಚಾರದ
ಭಾಗವಾಗಿ ಸೋನಿ ಟಿವಿ, ಇನ್ಸ್ಟಾ ಗ್ರಾಂನಲ್ಲಿ ಪ್ರೋಮೋ ಬಿಟ್ಟಿದ್ದು, ಸಂಜು ನೋಡಲು ಪ್ರೇಕ್ಷಕರು
ತುದಿಗಾಲಲ್ಲಿ ನಿಂತಿದ್ದಾರೆ.
ತುಂಬಾ ಗ್ಯಾಪ್ ತಗೊಂಡು ಸಂಜು ಸಿನಿಮಾ ಮಾಡಿದ್ದಾರೆ. ಪ್ರಸ್ಥಾನಂ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು, ತೆಲುಗಿನ ಪ್ರಸ್ಥಾನಂ ಚಿತ್ರದ ರಿಮೇಕ್.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?