Featured
ನಿಮ್ಮ ದೇಹದಲ್ಲಿ ಫೈಬರ್ ಕಡಿಮೆಯಾಗಿದಿಯಾ , ಹಾಗಾದರೆ ಈ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಿ…..
![](https://risingkannada.com/wp-content/uploads/2019/11/fiber.jpg)
ರೈಸಿಂಗ್ ಕನ್ನಡ :- ನಮ್ಮ ದೇಹಕ್ಕೆ ವಿಟಮಿನ್ಸ್ , ಫೈಬರ್ ಗಳು ತುಂಬಾ ಮುಖ್ಯ. ನಮಗೆ ಫೈಬರ್ ಯಾವ ರೀತಿ ಬೇಗ ಸಿಗುತ್ತದೆ , ಯಾವ ಆಹಾರವನ್ನು ಸೇವಿಸಿದರೆ ನಮಗೆ ಫೈಬರ್ ಉತ್ವತ್ತಿಯಾಗುತ್ತದೆ ತಿಳಿಯೋಣ.
ನಮ್ಮ ಶರೀರದಲ್ಲಿ ಸರಾಗವಾಗಿ ಸಾಗಬೇಕಾದರೆ ನಮಗೆ ಫೈಬರ್ ಅತ್ಯಅವಶ್ಯಕ. ಜಿರ್ಣಕ್ರಿಯೆ ಅನ್ನು ಸಕ್ರಿಯವಾಗಿ ಸಾಗುಸುವುದಲ್ಲದೆ, ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಫೈಬರ್. ಫೈಬರ್ ನಲ್ಲಿ ಎರಡು ವಿಧಗಳಿವೆ. 1. ಕರಿಗಿ ಹೊಗುವ ಫೈಬರ್, 2. ಕರಗದೆ ಇರುವ ಫೈಬರ್, ಕರಗಿಹೊಗುವ ಫೈಬರ್ ನಮ್ಮ ದೇಹದಲ್ಲಿ ಕೊಬ್ಬು ಉತ್ಪತ್ತಿಯಾಗುವುದು ಕಡಿಮೆ ಮಾಡುತ್ತದೆ. ಕರಗದೇ ಇರುವ ಫೈಬರ್ ನಮ್ಮ ಶರೀರವನ್ನು ಕ್ರಮಬದ್ದವಾಗಿ ಸಾಗಿಸುತ್ತದೆ. ನಮ್ಮ ದೇಹದಲ್ಲಿ ಫೈಬರ್ ಕಡಿಮೆಯಾದರೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನಾವು ಸೇವಿಸುವ ಆಹಾರದಲ್ಲಿ ಫೈಬರ್ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಇಲ್ಲದೇ ಹೋದರೆ ಗ್ಯಾಸ್ ಪ್ರಾಬ್ಲಮ್ ಬರುವ ಸಾಧ್ಯತೆಗಳಿರುತ್ತವೆ.
ಬೀಜಗಳು :- ನಾವು ನಮ್ಮ ಮನೆಯಲ್ಲಿರುವ ಬೀಜಗಳು ,ಬೇಳೆಗಳು ತಿಂದರೆ ಅದರಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತವೆ. ದಿನನಿತ್ಯ ಆಹಾರದಲ್ಲಿ ನಾವು ಕ್ರಮೇಣವಾಗಿ ಬೀಜಗಳು, ಬೇಳೆಗಳನ್ನು ಸೇವಿಸಬೇಕು. ಇದರಲ್ಲಿ ಐರನ್, ವಿಟಮಿನ್ಸ್, ಪ್ರೊಟಿನ್ಸ್, ಮ್ಯಾಂಗನಿಸ್ ಇರುತ್ತದೆ.
ಧಾನ್ಯಗಳು :- ಗೋಧಿ, ಓಟ್ಸ್, ಮೆಕ್ಕೆಜೋಳ, ಬ್ರೌನ್ ಅಕ್ಕಿ, ಬಾರ್ಲಿ ಇವುಗಳಲ್ಲಿ ಫೈಬರ್ ಅಂಶ ಜಾಸ್ತಿ ಇರುತ್ತದೆ. ಇವುಗಳನ್ನು ನಿಮ್ಮ ದಿನನಿತ್ಯ ಆಹಾರದಲ್ಲಿ ಸೇವಿಸಬೇಕು.
![](https://risingkannada.com/wp-content/uploads/2019/11/grains.jpg)
ಬ್ರೊಕೊಲಿ :- ಬ್ರೊಕೊಲಿ ಯಲ್ಲಿ ವಿಟಮಿನ್-ಸಿ, ಕ್ಯಾಲ್ಸಿಯಂ ಜೊತೆಗೆ ಫೈಬರ್ ಆಂಶ ಹೆಚ್ಚಾಗಿರುತ್ತವೆ. ಬ್ರೊಕೊಲಿಯನ್ನು ವಾರದಲ್ಲಿ ಒಮ್ಮೆ ಸೀವಿಸಿದರೆ ತುಂಬಾ ಒಳ್ಳೆಯದು. ಬ್ರೊಕೊಲಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಬೇಗ ನಮ್ಮ ದೇಹಕ್ಕೆ ಫಲಿತಾಂಶವನ್ನು ನೀಡುತ್ತದೆ.
flax seeds :- ಇದರಲ್ಲಿ ಪ್ರೊಟಿನ್ಸ್, ಫೈಬರ್ ಜಾಸ್ತಿ. ಇವು ಮೊದಲಿಗೆ ಜಿರ್ಣ ಕ್ರಿಯೆ ಅಲ್ಲದೆ ರುಚಿಯಾಗಿ ಇರುತ್ತವೆ. ಈ ಬೀಜಗಳನ್ನು ಹುರಿದು ತಿನ್ನಬಹುದು, ಹುರಿಯದೆ ಹಾಗೆ ಟೈಮ್ ಪಾಸ್ ರೀತಿಯಾಗಿ ಈ ಬೀಜಗಳನ್ನು ತಿನ್ನಬಹುದು.
ಸೇಬು :- ಸೇಬು ಅನ್ನೋದು ವಿವಿಧ ರೀತಯ ಸೂಕ್ಮಕ್ರಿಯೆಗಳನ್ನು ಹೊಂದಿರುತ್ತದೆ. ಇದರಲ್ಲಿ ಫೈಬರ್ ಜಾಸ್ತಿ ಇರುತ್ತದೆ, ಒಂದು ಸೇಬಿನಲ್ಲಿ 4 ಗ್ರಾಂ ಫೈಬರ್ ಇರುತ್ತದೆ. ಸೇಬು ತಿನ್ನುವುದರಿಂದ ನಮ್ಮ ದೇಹದಲ್ಲಿರುವ ಕೊಬ್ಬು ಕರಿಗಿಸುತ್ತದೆ.
nuts :- ಗೋಡಂಬಿ,ಬಾದಾಮಿ,ಪಿಸ್ತಾ, ಕರ್ಜೂರ ಇವುಗಳಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇವುಗಳನ್ನು ಮಿತಿಯಾಗಿಯಾಗಿ ಸೇವನೆ ಮಾಡಬೇಕು. ಮಿತಿ ಮೀರಿದರೆ ಆರೋಗ್ಯಕ್ಕೆ ಹಾನಿಕರವಾಗುವ ಸಾಧ್ಯತೆಗಳು ಬರುತ್ತದೆ.
![](https://risingkannada.com/wp-content/uploads/2019/11/nuts1-1.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?