Featured
ನಿಮಗೆ ಗೊತ್ತಿರಲಿ, ಬಿಜೆಪಿ ಹಾಗೂ ಭಜರಂಗದಳ ಪಾಕ್ ನ ISIನಿಂದ ಹಣ ಪಡೀತಿವೆ : ದಿಗ್ವಿಜಯ ಸಿಂಗ್
ಮಧ್ಯಪ್ರದೇಶ: ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಿಂಡ್ ನಲ್ಲಿ ಮಾತನಾಡುತ್ತಾ ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಗಳು ಪಾಕಿಸ್ತಾನದ ಸೀಕ್ರೆಟ್ ಇಂಟಲಿಜೆನ್ಸ್ ( ಐಎಸ್ ಎಸ್) ನಿಂದ ಹಣ ಪಡೆಯುತ್ತಿದ್ದಾರೆ ಇದು ನಿಮಗೆ ಗೊತ್ತಿರಲಿ ಎಂದಿದ್ದಾರೆ.
ದಿಗ್ವಿಜಯ ಸಿಂಗ್ ಮಾತನಾಡಿದ ಈ ವಿಡಿಯೋ ಕ್ಲಿಪ್ಪಿಂಗ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಜರಂಗದಳ, ಬಿಜೆಪಿ ಪಾಕಿಸ್ತಾನದ ಐಎಸ್ ಐ ಗೆ ಕೆಲಸ ಮಾಡುತ್ತಿವೆ, ಮುಸ್ಲಿಂಯೇತರರು ಈ ತರಹದ ಕೆಲಸಕ್ಕೆ ನಿಯೋಜನೆಯಾಗುತ್ತಿರುವುದರ ಬಗ್ಗೆ ಗಮನ ಕೊಡಿ ಎಂದಿದ್ದಾರೆ. ಈ ಹೇಳಿಕೆಯ ಅವಶ್ಯಕತೆ, ಅನಿವಾರ್ಯತೆ ಅಥವಾ ಸಂದರ್ಭ ತಿಳಿದುಬಂದಿಲ್ಲ. ಆದರೆ ಕೆಲವು ಚಾನೆಲ್ ಗಳು ವರದಿ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡು ಟ್ವೀಟ್‌ಗಳನ್ನ ಮಾಡಿದ್ದಾರೆ, ನಾನು ಹೇಳಿಕೆ ನೀಡಿದ್ದೇನೆಂಬ ವರದಿ ಸುಳ್ಳು ಅಂತ ಟ್ವೀಟ್ ಮಾಡಿದ್ದು ಪುನಃ ತಮ್ಮ ಹೇಳಿಕೆ ಸಮರ್ಥಿಸಿಕೊಂಡು, ಮಧ್ಯಪ್ರದೇಶದಿಂದ ಕಾಶ್ಮೀರದವರೆಗೆ ಅರೆಸ್ಟ್ ಆದ ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಪಾಕಿಸ್ತಾನದ ಜೊತೆ ನಂಟು ಇಟ್ಟುಕೊಂಡಿದ್ದರು ಎಂದು ಸಮಜಾಯಿಷಿ ನೀಡಿದ್ದಾರೆ.
You may like
ಪಾಕ್ ಚುನಾವಣೆ ಬೆನ್ನಲ್ಲೇ ಬಾಂಬ್ ಸ್ಫೋಟ: 12 ಜನರ ಸಾವಿನ ಹೊಣೆ ಹೊತ್ತವರು ಯಾರು?
ವಿದ್ಯುತ್ ಬಳಕೆಗೆ ಗುಡ್ ಬೈ- ಸೋಲಾರ್ ಪವರ್ನಲ್ಲಿ ಓಡಲಿದೆ ಟ್ರೇನ್- ಇಂಡಿಯನ್ ರೈಲ್ವೇಯ ಹೊಸ ಸಾಹಸ
LOC ಬಳಿ ಪಾಕ್ನಿಂದ ಅಪ್ರಚೋದಿತ ಶೆಲ್ ದಾಳಿ- ಭಾರತೀಯ ಯೋಧ ಹುತಾತ್ಮ
ಮೋದಿ, ಅಮಿತ್ ಶಾ & ಅಜಿತ್ ದೋವಲ್ ಹತ್ಯೆಗೆ ಉಗ್ರರ ಸಂಚು : ಸ್ಫೋಟಕ ಸತ್ಯ ಬಹಿರಂಗ
ಮೋದಿ ಪ್ರಯಾಣಿಸುವ ವಿಮಾನ ಪಾಕಿಸ್ತಾನದ ಮೇಲೆ ಹಾರಾಡಲು ಬಿಡಲ್ಲ : ಪಾಕಿಸ್ತಾನದಿಂದ ಮತ್ತೆ ಉದ್ಧಟತನದ ಕಿತಾಪತಿ
ಭಾರತ-ಪಾಕ್ ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಸೋಲು : ಅಣ್ವಸ್ತ್ರ ಯುದ್ಧ ಸಂಭವ ಎಂದ ಇಮ್ರಾನ್..!