ಆರೋಗ್ಯ
ನಿಂಬೆ ಹಣ್ಣಿನ ಔಷಧಿ ಗುಣಗಳು ನಿಮಗೆ ಗೊತ್ತಾ..? : ನಿಂಬೆ ಇದ್ದರೆ ರೋಗವೇ ಇಲ್ಲ..!
ಬೆಂಗಳೂರು : ನಿಂಬೆ ಹಣ್ಣನ್ನು ನಾವು ಪವಿತ್ರ ಕೆಲಸಗಳಿಗೆ ಉಪಯೋಗ ಮಾಡ್ತೀವಿ. ನಿಂಬೆ ಹಣ್ಣಿನಲ್ಲಿ ಪಾಸಿಟಿವ್ ಅಂಶ ಇದೆ ಅನ್ನೋದು ಬಹುತೇಕರ ಅಭಿಪ್ರಾಯ. ಅದರಂತೆ, ನಿಂಬೆ ಹಣ್ಣು ಔಷಧಿ ಗುಣಗಳನ್ನ ಹೊಂದಿರುವ ಹಣ್ಣು. ಕೇವಲ ಜ್ಯೂಸ್, ಚಿತ್ರಾನ್ನಕ್ಕೆ ಮಾತ್ರ ನಿಂಬೆ ಹಣ್ಣು ಉಪಯೋಗಿಸಲ್ಲ. ಬಹಳಷ್ಟು ಔಷಧಿಯ, ಸೌಂದರ್ಯವರ್ಧಕ ಗುಣಗಳನ್ನ ಅಡಗಿಸಿಕೊಂಡಿದೆ ನಿಂಬೆ. ಬನ್ನಿ, ಹಾಗಿದ್ರೆ, ನಿಂಬೆಯ ಗುಣಗಳೇನು.? ಅದರ ಉಪಯೋಗಗಳೇನು ಅಂತ ತಿಳಿಯೋಣ.
ಯೌವನದ ಗುಟ್ಟು ನಿಂಬೆ
ಯೆಸ್, ವಯಸ್ಸು ಹೆಚ್ಚಾದಂತೆ ಬರುವ ಸುಕ್ಕು ಮತ್ತು ಕಲೆಗಳನ್ನ ತಡೆಯುವ ಶಕ್ತಿ ನಿಂಬೆಗಿದೆ. ಆಂಟಿ ಆಕ್ಸಿಡೆಂಟ್ಗಳು ನಿಂಬೆಯಲ್ಲಿ ಹೆಚ್ಚಾಗಿದ್ದು, ತ್ವಚೆಯಲ್ಲಿ ಸುಕ್ಕು ಆಗದಂತೆ ನೋಡಿಕೊಳ್ಳುತ್ತೆ. ಅಲ್ಲದೆ ನಿಮ್ಮ ಎಣ್ಣೆ ಮುಖವನ್ನೂ ದೂರ ಮಾಡುತ್ತದೆ. ಮನೆಯಲ್ಲಿ ನೀವೇ ಕಲೆ ಮತ್ತು ಸುಕ್ಕು ನಿರೋಧಕ ಫೇಸ್ ಫ್ಯಾಕ್ ತಯಾರಿಸಿಕೊಳ್ಳಬುದು.
ಫೇಸ್ ಪ್ಯಾಕ್ ತಯಾರಿಸುವ ವಿಧಾನ : ನಿಂಬೆ ಹಣ್ಣಿನ ರಸವನ್ನ, ಸಿಹಿಯಾದ ಬಾದಾಮಿ ಎಣ್ಣಿಯಲ್ಲಿ ಬೆರೆಸಬೇಕು. ಅದನ್ನ ಮುಖಕ್ಕೆ ಹಚ್ಚಿ 15 ರಿಂದ 20 ನಿಮಿಷ ಬಿಟ್ಟು ಚೆನ್ನಾಗಿ ತೊಳೆಯಬೇಕು. ಜೊತೆಗೆ ನಿಂಬೆಹಣ್ಣಿನ ರಸ ತೆಗೆದುಕೊಂಡು, ಸೇಬಿನ ವಿನೆಗರ್ಗೆ ಬೆರೆಸಿ ಮುಖದ ಕಲೆಗಳಿಗೆ ಹಚ್ಚಿದ್ರೆ, ಕಲೆಗಳು ಮಾಯವಾಗುತ್ತವೆ.
ಲವ್ಲಿ ಲಿಪ್ಸ್ಗೆ ನಿಂಬೆ ಬಳಸಿ..!
ಹೆಣ್ಣಿಗೆ ತುಟಿಗಳಿಂದ ಅಂದ ಬರುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅದರಂತೆ, ಒಣಗಿದ, ನಿಸ್ತೇಜನಗೊಂಡ ಮತ್ತು ಒಡೆದ ತುಟಿಗಳಿಗೆ ನಿಂಬೆ ಹಣ್ಣು ರಸ ಹಚ್ಚಿ. ನಿಂಬೆ ಹಣ್ಣಿನ ರಸಕ್ಕೆ ಹಾಲಿನ ಕೆನೆ, ಜೇನು ತುಪ್ಪ ಸೇರಿಸಿ ಮನೆಯಲ್ಲಿ ಲಿಪ್ ಬಾಮ್ ಮಾಡಿಕೊಳ್ಳಬಹುದು.
ಆಹ್ಲಾದಕರ ಮತ್ತು ಮೃದು ತ್ವಚೆ
ನಿಂಬೆ ಹಣ್ಣು ನಿಮ್ಮ ತ್ವಚೆಯನ್ನು ಮೃದುತ್ವ ಮತ್ತು ತಾಜಾತನದಿಂದ ಇರುವಂತೆ ಮಾಡುತ್ತೆ. ನಿಂಬೆಹಣ್ಣಿನ ರಸ ಅಥವಾ ಸಿಪ್ಪೆಯಿಂದ ನಿಮ್ಮ ಮುಖ, ಮೊಣಕಾಲುಗಳು, ಮೊಣಕೈಗಳಿಗೆ ಹಚ್ಚುವುದರಿಂದ ತ್ವಚೆ ಮೃದುವಾಗಿ, ಹೊಳಪಿನಿಂದ ಕಂಗೊಳಿಸುತ್ತದೆ. ನಿಂಬೆ ಹಣ್ಣು, ನಿರ್ಜೀವ ತ್ವಚೆ ಮತ್ತು ಒಣ ತ್ವಚೆಗೆ ಜೀವ ಬರುವಂತೆ ಮಾಡುತ್ತದೆ.
ಹೊಳೆಯುವ ತ್ವಚೆ
ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದೆ. ಇದು ಸ್ವಾಭಾವಿಕ ಬ್ಲೀಚಿಂಗ್ ಅಂಶಗಳನ್ನ ಒಳಗೊಂಡಿದೆ. ಇದರಿಂದ ನಿಮ್ಮ ತ್ವಚೆಯ ಹೊಳಪು ಹೆಚ್ಚಾಗುತ್ತೆ. ಸೌಂದರ್ಯ ಸಮಸ್ಯೆಗಳಿಗೆ ಸಾಮಾನ್ಯವಾಗಿ ಮನೆ ಹಾಗೂ ಹೊರಗೂ ಕೂಡ ನಿಂಬೆ ಬಳಸುತ್ತಾರೆ. ಕಲೆಗಳನ್ನ ನಿವಾರಿಸೋ ಶಕ್ತಿಯೂ ನಿಂಬೆಗಿದೆ.
ಕಂಕುಳ ಸಮಸ್ಯೆ ನಿವಾರಣೆ
ಹೊರಗೆ ಹೋಗಬೇಕಾದ್ರೆ ಕಂಕುಳ ಸಮಸ್ಯೆ ಎಲ್ಲರಿಗೂ ಕಾಡುತ್ತೆ. ಅದರಲ್ಲೂ ಹೆಣ್ಣು ಮಕ್ಕಳು ಸ್ಲೀವ್ ಲೆಸ್ ಡ್ರೆಸ್ ಹಾಕೋದಕ್ಕೆ ಬಹಳಷ್ಟು ಮುಜುಗರ ಎದುರಿಸಬೇಕಾಗುತ್ತೆ. ಇದಕ್ಕೆ ನಿಂಬೆ ಪರಿಹಾರ ಕೊಡುತ್ತೆ. ಸ್ವಲ್ಪ ಹತ್ತಿ ಉಂಡೆಯಲ್ಲಿ ನಿಂಬೆ ರಸ ಅಥವಾ ನಿಂಬೆ ತುಂಡನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಕಂಕುಳ ಬಳಿ ಉಜ್ಜಿಕೊಳ್ಳಿ. ಇದರಿಂದ ನಿಮ್ಮ ಕಂಕುಳ ಸಮಸ್ಯೆ ನಿವಾರಣೆ ಆಗುತ್ತೆ.
ಮೊಡವೆಗಳಿಗೆ ಹೇಳಿ ಗುಡ್ ಬೈ
ಈ ಮೊದಲೇ ಹೇಳಿದಂತೆ ಚರ್ಮ ರೋಗಳಿಗೆ ನಿಂಬೆ ರಾಮಬಾಣ. ಅದರಂತೆ, ಮೊಡವೆಗಳಿಗೂ ನಿಂಬೆ ರಾಮಬಾಣವೇ ಸರಿ. ವಿಟಮಿನ್ ಸಿ ಜೊತೆ ನಿಂಬೆಯಲ್ಲಿರುವ ಆಲ್ಕಾಲೈನ್ ಅಂಶ ಚರ್ಮದಲ್ಲಿರುವ ಬ್ಯಾಕ್ಟೀರಿಯಾಗಳನ್ನ ಹೊಡೆದೊಡಿಸುತ್ತೆ. ಇದರಿಂದ ಯಾವುದೇ ಮೊಡವೆ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುತ್ತೆ.
ಕೊಬ್ಬಿನಾಂಶ ಕರಗಿಸಿ, ಸೈಜ್ ಝೀರೋ ಮಾಡುತ್ತೆ..!
ನಿಂಬೆಯಲ್ಲಿ ಪೆಕ್ಟಿನ್ ಫೈಬರ್ ಹೆಚ್ಚಾಗಿದೆ. ಪೆಕ್ಟಿನ್ ಫೈಬರ್ ಹೆಚ್ಚಾಗಿರುವುದರಿಂದ ಕಡಿಮೆ ಕೊಬ್ಬಿನಾಂಶ ಮತ್ತು ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತೆ. ಜೊತೆಗೆ ರಕ್ತದಲ್ಲಿನ ಸಕ್ಕರೆಯನ್ನು ಒಂದೇ ಮಟ್ಟದಲ್ಲಿ ಕಾಯ್ದುಕೊಳ್ಳುತ್ತೆ. ನಿಂಬೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ನಮ್ಮ ದೇಹದಲ್ಲಿ ಕ್ಯಾಲೋರಿ ಕಡಿಮೆಯಾಗಿ, ತೂಕ ಇಳಿಸಲು ಸಹಾಯವಾಗುತ್ತೆ.
- ಹಲ್ಲುಗಳನ್ನು ಸ್ವಚ್ಛಗೊಳಿಸುತ್ತೆ. ಬಾಯಿಯ ದುರ್ವಾಸನೆಯನ್ನೂ ದೂರ ಮಾಡುತ್ತೆ ನಿಂಬೆ.
- ತಲೆ ಕೂದಲಿನಲ್ಲಿರುವ ಹೊಟ್ಟನು ನಿವಾರಿಸುವ ಶಕ್ತಿ ನಿಂಬೆ ಹಣ್ಣಿನ ರಸ ಹಾಗೂ ಸಿಪ್ಪೆಗಿದೆ. ಇದರಿಂದ ತಲೆ ಕೂದಲಿಗೆ ಹೊಳಪು ನೀಡುತ್ತದೆ.
- ಜೀರ್ಣಶಕ್ತಿ ಹೆಚ್ಚು ಮಾಡುತ್ತದೆ.
ಒಟ್ಟಿನಲ್ಲಿ ನಿಂಬೆ ಹಣ್ಣು ಚಿಕ್ಕದಾದರೂ ಅದರ ಗುಣಗಳು ಮತ್ತು ಕೀರ್ತಿ ಮಾತ್ರ ಸಾಕಷ್ಟಿವೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?