Featured
ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

ರೈಸಿಂಗ್ ಕನ್ನಡ ಆರೋಗ್ಯ : ಬಹುತೇಕರಿಗೆ ನಾಲಿಗೆಯಲ್ಲಿ ಹುಣ್ಣು ಆಗೋದು ಸಹಜ. ಇದನ್ನ ನಾಲಿಗೆ ಪೋಟು ಅಂತ ಕರೀತಾರೆ. ಸಾಮಾನ್ಯವಾಗಿ ನಾಲಿಗೆ ಹುಣ್ಣು ಅಂತಲೇ ಕರೀತಾರೆ. ಈ ನಾಲಿಗೆ ಹುಣ್ಣಿನಲ್ಲಿ ಬೇರೆ ಬೇರೆ ವಿಧಗಳಿವೆ. ನಾಲಿಗೆ ಕೆಂಪಾಗಿದ್ದು ಆಹಾರ ಸೇವಿಸುವಾಗ, ಖಾರ ತಿಂದಾಗ ಹೆಚ್ಚು ಉರಿ ಉಂಟಾಗದೆ ಇದ್ದರೆ ಅದು ಮಾಮೂಲಿ ಹುಣ್ಣು. ಇದರಿಂದ ತೊಂದರೆ ಆಗುವುದಿಲ್ಲ. ಇದನ್ನ ಮೀಡಿಯಂ ರಾಂಬಾಯಿಡ್ ಗ್ಲಾಸೈಟಿಸ್ ಎಂದು ಕರೆಯುತ್ತಾರೆ.
ಆದರೆ ಊಟ ಮಾಡುವುದೇ ಕಷ್ಟವಾಗುತ್ತದೆ. ಖಾರ ತಗುಲಿದಾಗ ಭಾರೀ ಉರಿ ಉಂಟಾದರೆ ಎಂದರೆ, ಅದು ನಾಲಿಗೆ ಹುಣ್ಣು ಎಂದು ಅರ್ಥ. ನಾಲಿಗೆಯ ಮೆಲೆ ಅಲ್ಲಲ್ಲಿ ಬೆಳ್ಳಗಾಗಿ, ಮಧ್ಯೆ ಮಧ್ಯೆ ಕೆಂಪಾಗಿ ನಾಲಿಗೆ ಮೇಲೆ ಚಿತ್ರ ಬಿಡಿಸಿದಂತೆ ಇದ್ದರೆ ಅದು (ಜಾಗ್ರಫಿಕಲ್ ಟಂಗ್) ನಾಲಿಗೆ ಹುಣ್ಣಲ್ಲ .
ನಾಲಿಗೆಗೆ ಗಾಯವಾಗಿ, ಊಟ ಮಾಡುವಾಗ ಅಸಾಧ್ಯವಾದ ಉರಿ ಉಂಟಾಗುವುದು ಹುಣ್ಣು. ಇದಕ್ಕೆ ಬಿ- ವಿಟಮಿನ್ ಕೊರತೆ ಕಾರಣ . ರೈಬೋ ಫ್ಲೆವಿನ್ ನಿಯಾಸಿನ್ ಮೈಡ್ ಕಡಿಮೆಯಾದರೆ, ನಾಲಿಗೆ ಕೆಂಪಾಗುತ್ತದೆ. ಅದೇ ಫೋಲಿಕ್ ಆ್ಯಸಿಡ್, ಬಿ-12 ಕಡಿಮೆಯಾದರೆ ನಾಲಿಗೆ ನುಣುಪಾಗುತ್ತದೆ .
ನಾಲಿಗೆ ಮೇಲೆ ಗ್ರಂಥಿಗಳಿರುತ್ತವೆ. ಇವು ಕಡಿಮೆಯಾದರೂ ನಾಲಿಗೆ ನುಣಪಾಗುತ್ತದೆ (ಗ್ಲಾಸೈಟಿಸ್). ನಾಲಿಗೆ ಕೆಂಪಾಗಿ ಕಾಣಲು ಬಿ-ವಿಟಮಿನ್ ಕೊರತೆಯೊಂದೇ ಕಾರಣವಲ್ಲ, ಐರನ್ ( ಕಬ್ಬಿನಾಂಶ ) ಕೊರತೆಯಿಂದ ಉಂಟಾಗುವ ರಕ್ತಹೀನತೆಯೂ ಕಾರಣವಾಗಬಹುದು. ದೀರ್ಘಕಾಲ ಆ್ಯಂಟಿ ಬಯೋಟಿಕ್ಸ್ ಸೇವಿಸಿದಾಗ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ನಾಶವಾಗುವುದರಿಂದಲೂ ನಾಲಿಗೆ ಹುಣ್ಣಾಗಬಹುದು. ದೀರ್ಘಕಾಲದ ಭೇದಿ, ಪೋಷಕಾಂಶಗಳ ಕೊರತೆಗಳೂ ಇದಕ್ಕೆ ಕಾರಣವಾಗುತ್ತವೆ.. ಮೆಣಸು ಕಾಳು, ಮೆಣಸಿನ ಪುಡಿ, ಅಧಿಕ ಮಸಾಲೆ, ಶುಂಠಿ ಮುಂತಾದವನ್ನು ಹೆಚ್ಚು ತಿನ್ನುವುದರಿಂದಲು ನಾಲಿಗೆಯ ಮೇಲೆ ಈ ರೀತಿ ಬಿಳಿ- ಕೆಂಪು ಮಚ್ಚೆಗಳಾಗಬಹುದು. NSAIDಮಾದರಿಯ ನೋವು ನಿವಾರಕಗಳನ್ನು ಹೆಚ್ಚು ಸೇವಿಸುವುದರಿಂದಲೂ ಹೀಗೆ ಆಗುತ್ತದೆ.
ಕೆಲವು ಚರ್ಮ ರೋಗಗಳು ಸಹ ಇದಕ್ಕೆ ಕಾರಣವಾಗುತ್ತದೆ. ಇಂತಹ ಸಮಸ್ಯೆಗಳನ್ನ ಎದುರಿಸುವವರು ಅದನ್ನು ನಿರ್ಲಕ್ಷಿಸದೆ ಒಮ್ಮೆ ಅನುಭವಿ, ತಜ್ಞರ ವೈದ್ಯರನ್ನು ಭೇಟಿ ಮಾಡಿ ತೋರಿಸಿಕೊಳ್ಳುವುದು ಒಳ್ಳೆಯದು. ಹಾಗೆಯೇ ಖಾರ, ಮಸಾಲೆ ಮುಂತಾದವುಗಳನ್ನು ಕಡಿಮೆ ಮಾಡಿ , ಫ್ರೆಷ್ (ತಾಜಾ ) ತರಕಾರಿ, ಸೊಪ್ಪು , ಹಣ್ಣುಗಳನ್ನು ಹೆಚ್ಚು ಸೇವಿಸಬೇಕು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?