Featured
ನಾನು ರೇಪ್ ಮಾಡಿಲ್ಲ. ದುಡ್ಡು ಕದ್ದಿಲ್ಲ. ಸುಮ್ನೆ ಟೆನ್ಷನ್ ಯಾಕ್ರೀ..? ಡಿಕೆಶಿ ಹೇಳಿದ್ದೇನು..?
ಬೆಂಗಳೂರು : ಅಕ್ರಮವಾಗಿ ಹಣ ಸಿಕ್ಕಿದ್ದ ಪ್ರಕರಣದಲ್ಲಿ ಈಗಾಗಲೇ ಡಿಕೆ ಶಿವಕುಮಾರ್ಗೆ ಇಡಿ ಸಮನ್ಸ್ ಜಾರಿ ಮಾಡಿದೆ. ನಿನ್ನೆಯೇ ಇಡಿ ಸಮನ್ಸ್ ಜಾರಿ ಮಾಡಿದ್ರೂ, ಡಿಕೆಶಿ ಮುಂದೇನು ಮಾಡ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಕಾಡ್ತಿದೆ. ನಿನ್ನೆ ರಾತ್ರಿಯಿಂದಲೇ ವಕೀಲರು, ನಾಯಕರನ್ನ ಭೇಟಿಯಾಗಿ ಚರ್ಚೆ ನಡೆಸುತ್ತಲೇ ಇದ್ದಾರೆ. ಆದ್ರೆ, ಡಿಕೆಶಿ ಟೆನ್ಷನ್ ಮಾಡಿಕೊಂಡಿಲ್ವಂತೆ.
ಇವತ್ತು ಬೆಳಗ್ಗೆ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತ್ನಾಡಿದ ಡಿಕೆ ಶಿವಕುಮಾರ್, ಮಾಧ್ಯಮಗಳ ವಿರುದ್ಧ ಕೆಂಡಾಮಂಡಲರಾದ್ರು. ನಾನೇನು ರೇಪ್ ಮಾಡಿಲ್ಲ ರೀ.. ನಾನು ಯಾವ ದುಡ್ಡು ಕದ್ದಿಲ್ಲ. ನೀವೆಲ್ಲಾ ಅದ್ಕೊಂಡಂಗೆ ನಾನು ಟೆನ್ಷನ್ನೂ ಆಗಿಲ್ಲ. ನೀವೂ ಅಷ್ಟೇ ಸುಮ್ಮನೆ ಟೆನ್ಷನ್ ಮಾಡ್ಕೋಬೇಡಿ ಅಂತ ಡಿಕೆಶಿ ಹೇಳಿದ್ರು.
ಇದೇ ವೇಳೆ ಮಾತ್ನಾಡಿದ ಅವ್ರು, ದಿಲ್ಲಿಗೆ ಫ್ಲೈಟ್ ಬುಕ್ ಮಾಡಿದ್ದೀನಿ. ದೆಹಲಿಗೆ ಹೋಗ್ತಿದ್ದೀನಿ. ಮಧ್ಯಾಹ್ನ 1 ಗಂಟೆಗೆ ಬರೋಕೆ ಇಡಿ ಅವರು ಹೇಳಿದ್ದಾರೆ ಅಂದ್ರು. ಇನ್ನೂ ಲಾಯರ್ ಮೀಟ್ ಮಾಡಬೇಕು. ಇನ್ನೂ ಒಂದೆರಡು ಗಂಟೆ ಕಮಿಟ್ಮೆಂಟ್ ಇದೆ. ನನಗೂ ಪರ್ಸನಲ್ ಕೆಲಸ ಇರುತ್ತೆ. ಸುಮ್ಮನೆ ನನ್ನನ್ನ ಯಾರೂ ಫಾಲೋ ಮಾಡಬೇಡಿ ಅಂತ ಖಡಕ್ ವಾರ್ನಿಂಗ್ ಕೂಡ ನೀಡಿದ್ರು.
ಇನ್ನು, ಇವತ್ತು ಡಿಕೆಶಿ ದೆಹಲಿಗೆ ಹೋಗೋದು ಪಕ್ಕಾ ಆಗಿದೆ. ಆದ್ರೆ, ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸ್ತಾರಾ ಅಥವಾ ಡೈರೆಕ್ಟಾಗಿ ಇಡಿ ವಿಚಾರಣೆಗೆ ಹಾಜರಾಗ್ತಾರಾ ಅನ್ನೋದು ತಿಳಿಯಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?