Connect with us

Featured

ನಾಗರ ಪಂಚಮಿ ಹೇಗೆ ಆಚರಿಸಬೇಕು..? ಇಲ್ಲಿದೆ ನೋಡಿ ಸತ್ಯಾಸತ್ಯತೆ..!

ಬಹಳಷ್ಟು ಮಂದಿ ನಾಗರ ಪಂಚಮಿ ಹಬ್ಬದ ಮಹತ್ವ ತಿಳಿಯದೇ ಆಚರಿಸುತ್ತಾರೆ. ಈ ಹಬ್ಬವು ಭಾರತದ ವಿವಿಧ ಭಾಗಗಳಲ್ಲಿ ಅನೇಕ ರೀತಿಯಲ್ಲಿ ಆಚರಿಸುತ್ತಾರೆ. ಇದರ ಹಿಂದೆ ಹಲವು ಬಗೆಯ ಕಥೆಗಳಿವೆ. ಕರ್ನಾಟಕದಲ್ಲಿ ಈ ಹಬ್ಬಕ್ಕೆ ಜಾನಪದ ಪರಂಪರೆಯಿದೆ.

ನಾಗರ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ವಿಧಾನ :

ಈ ಹಬ್ಬವನ್ನು ಪಂಚಮಿ ಹಬ್ಬ ಅಥವಾ ಒಡಹುಟ್ಟಿದವರ ಹಬ್ಬ ಎನ್ನುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ, ಸುಬ್ರಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತೆ. ಪ್ರೀತಿ, ಪ್ರೇಮ, ನಿಷ್ಠೆಯಿಂದ ಈ ಹಬ್ಬನ್ನು ಆಚರಿಸಲಾಗುತ್ತೆ. ಬೆಳಗ್ಗೆ ಮಂಗಳ ಸ್ನಾನ ಮಾಡಿ, ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡುತ್ತಾರೆ. ಕೆಲವರು ಹಾವಿನ ಆಕಾರದ ರಂಗೋಲಿ ಹಾಕುತ್ತಾರೆ. ಸಹೋದರ, ಸಹೋದರಿಯರು ನಮಸ್ಕಾರ ಮಾಡಿ, ಆಶೀರ್ವಾದ ಪಡೆಯುತ್ತಾರೆ.

ನಾಗರ ಪಂಚಮಿ ಹಬ್ಬದ ವಿಶೇಷತೆ ಅಂದ್ರೆ, ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ತಮ್ಮ, ಅಣ್ಣ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಮತ್ತು ಬೆನ್ನಿಗೆ ಸವರುತ್ತಾರೆ. ಯಾಕಂದ್ರೆ, ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ- ಮುಂದೆ ಬರುವ ಪೀಳಿಗೆ ಎಂದರ್ಥ. ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತವಾದ್ರೆ, ಬೆನ್ನು ಹಿಂದಿನ ಪೀಳಿಗೆ. ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಎಲ್ಲರು ಚೆನ್ನಾಗಿರಲಿ ಎಂದು ಹಾರೈಸು ಕಾರಣಕ್ಕೆ ಇದು ಒಡಹುಟ್ಟಿದವರ ಹಬ್ಬ.

Advertisement

ಊಟಕ್ಕೆ ಕಾಯಿ ಕಡಬು, ಉದ್ದಿನ ಕಡಬು ಮಾಡುತ್ತಾರೆ. ನಾಗಪ್ಪನಿಗೆ ಘಾಟು ಆಗಬಾರದು ಅಂತ ಯಾವುದೇ ರೀತಿಯ ಕರಿದ ತಿಂಡಿ, ಅಡುಗೆ ಮಾಡುವುದಿಲ್ಲ. ಅಲ್ಲದೆ, ಅಡಿಗೆಗೆ ಒಗ್ಗರಣೆಯೂ ಹಾಕುವುದಿಲ್ಲ.

ಈ ದಿನ ಸುಬ್ರಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತೆ. ನಾಗರ ಕಲ್ಲುಗಳಿಗೆ ಪೂಜೆ ಮಾಡಲಾಗುತ್ತೆ. ಮನೆಯ ಹತ್ತಿರ ಹುತ್ತ ಇದ್ದರೆ, ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ನಾಗಪ್ಪ ಹಾಲು ಕುಡಿಯಲ್ಲ ಎಂದು ವಿಜ್ಞಾನ ಹೇಳಿದ್ರೂ, ಹಾಲು ಎರೆಯೋದನ್ನ ಮಾತ್ರ ಬಿಟ್ಟಿಲ್ಲ.

ಪಂಚಮಿ ಹಬ್ಬ ಎಂದು ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣುಮಗಳನ್ನು ಅತ್ತೆ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗ್ತಾರೆ.

ನಾಗರ ಪಂಚಮಿಗೆ ಮಹಾಭಾರತದ ಕಥನವಿದೆ :

ಕೃಷ್ಣ ತನ್ನ ಬಾಲ್ಯದಲ್ಲಿ ಆಟವಾಡ್ತಿರೋ ಸಮಯದಲ್ಲಿ ಚೆಂಡು ಯಮುನಾ ನದಿಯಲ್ಲಿ ಬೀಳುತ್ತೆ. ಈ ವೇಳೆ, ಚೆಂಡಿಗಾಗಿ ಕೃಷ್ಣ ಯಮುನಾ ನದಿಗೆ ಇಳಿದಾಗ, ಕಾಳಿಂಗ ಸರ್ಪವು ತನ್ನ ಅಪ್ಪಣೆ ಇಲ್ಲದೆ ನೀರಿಗೆ ಇಳಿದಿದ್ದು ಯಾಕೆ ಎಂದು ಕೇಳುತ್ತೆ. ಈ ವೇಳೆ ಕೃಷ್ಣ ಮತ್ತು ಕಾಳಿಂಗ ಸರ್ಪದ ನಡುವೆ ಮಾತಿನ ಚಕಮಕಿ ಆಗುತ್ತೆ. ಇನ್ನೇನು ಕೃಷ್ಣ ಸರ್ಪವನ್ನು ಕೊಲ್ಲಬೇಕು ಎನ್ನುವಷ್ಟರಲ್ಲಿ, ಕೃಷ್ಣನ ಮಹಾತ್ಮೆ ಕಾಳಿಂಗ ಸರ್ಪಕ್ಕೆ ಗೊತ್ತಾಗುತ್ತೆ. ಆಗ, ಇನ್ಮುಂದೆ ಜನರಿಗೆ ತೊಂದರೆ ಕೊಡುವುದಿಲ್ಲ ಎಂದು ಸರ್ಪ ಸುಮ್ಮನ್ನಾಗುತ್ತೆ. ದಯಾಮಯಿ ಕೃಷ್ಣ, ಸರ್ಪಕ್ಕೆ ತೋರಿದ ಕರುಣೆಯಿಂದಾಗಿ, ನಾಗರ ಪಂಚಮಿ ಹಬ್ಬವನ್ನ ಆಚರಿಸಲಾಗುತ್ತೆ.

Advertisement

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ