Featured
ನನಗೆ ಚಿಕ್ಕಂದಿನಿಂದಲೂ ಮಾವ ಲೈಂಗಿಕ ಕಿರುಕುಳ ಕೊಡ್ತಿದ್ದ..! : ಸೋದರ ಮಾವನ ಕರಾಳ ಮುಖ ಬಿಚ್ಚಿಟ್ಟ ನಟಿ ಜಯಶ್ರೀ
ಬೆಂಗಳೂರು : ಬಿಗ್ಬಾಸ್ ಖ್ಯಾತಿಯ ನಟಿ ಜಯಶ್ರೀ, ತನ್ನ ಮೇಲಿನ ನಡೆದಿರೋ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ಬಂದ ಜಯಶ್ರೀ ಹಾಗೂ ಅವರ ತಾಯಿ, ಸೋದರ ಮಾವನ ವಿರುದ್ಧ ದೂರು ನೀಡಿದ್ರು.
ಬಿಗ್ಬಾಸ್ ಖ್ಯಾತಿಯ ನಟಿ ಜಯಶ್ರೀ ಹೇಳಿದ್ದೇನು.?
ಮಾಧ್ಯಮಗಳ ಜೊತೆ ಮಾತ್ನಾಡಿದ್ರು. ನಿನ್ನೆ ತಡರಾತ್ರಿ ನಮ್ಮ ತಾಯಿ ಹಾಗೂ ನನ್ನನ್ನ ಮನೆಯಿಂದ ಹೊರಹಾಕಿದ್ರು. ಚಿಕ್ಕಂದಿನಿಂದಲೇ ಲೈಂಗಿಕ ಕಿರುಕುಳ ನೀಡ್ತಿದ್ರು. ಸೈಕೋ ರೀತಿ ವರ್ತನೆ ಮಾಡ್ತಿದ್ರು. ನನ್ನ ಬಟ್ಟೆ ಬಗ್ಗೆ ಮಾತಾಡ್ತಿದ್ದ. ನನ್ನ ಫ್ರೀಡಂ ನನಗೆ ಇದೆ. ಅದನ್ನ ಕೊಡಲು ಆತನ್ಯಾರು ಎಂದು ಜಯಶ್ರೀ ಪ್ರಶ್ನೆ ಮಾಡಿದ್ರು.
ಇಷ್ಟೇ ಅಲ್ದೆ, ನಾನು ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳ ನೀಡ್ತಿದ್ದರು. ನಮ್ಮ ಮಾವ ಒಬ್ಬ ಹುಚ್ಚಾ. ಆತ ತನ್ನ ಪತ್ನಿಗೆ ಕಿರುಕುಳ ನೀಡಿ ವಿಚ್ಛೇದನ ನೀಡಿದ್ದಾನೆ. ಆಸ್ತಿ ಮತ್ತು ನಮ್ಮ ಮನೆಯನ್ನ ಕಬಳಿಸಲು ಈ ರೀತಿ ಕಿರುಕುಳ ನೀಡ್ತಿದ್ದಾನೆ ಎಂದು ಜಯಶ್ರೀ ಆರೋಪಿಸಿದ್ದಾರೆ.
ಜಯಶ್ರೀ ಹಾಗೂ ತಾಯಿ ನೀಡಿರೋ ದೂರು ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸಲಿದ್ದು, ಸತ್ಯಾಂಶ ಏನು ಅನ್ನೋದು ಬಹಿರಂಗವಾಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?